ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್.!
''ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೆಲೆ ಇಲ್ಲ. ಫೇಕ್ ಹೌಸ್ ಬೋರ್ಡ್ ಹಾಕಿ... ಕಲೆಕ್ಷನ್ ಇಲ್ಲ ಎಂದು ತೋರಿಸಿ... ಕನ್ನಡ ಚಿತ್ರಗಳನ್ನು ಮಲ್ಟಿಪ್ಲೆಕ್ಸ್ ನವರು ಎತ್ತಂಗಡಿ ಮಾಡುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ ಆಗುತ್ತಿದೆ'' ಎಂಬ ಕೂಗು ಆಗಾಗ ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತದೆ.
ಆದ್ರೀಗ, ಅದೇ ಮಲ್ಟಿಪ್ಲೆಕ್ಸ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಹೊಸ ರೆಕಾರ್ಡ್ ಮಾಡಿದೆ.

ಬಿಡುಗಡೆ ಆಗಿ 87 ದಿನಗಳನ್ನು ಪೂರೈಸಿರುವ 'ರಾಜಕುಮಾರ', ಇಲ್ಲಿಯವರೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 7577 ಶೋಗಳನ್ನು ಕಂಡಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಇದು ದಾಖಲೆ ಮಟ್ಟದ ಪ್ರದರ್ಶನ. ಮಲ್ಟಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್ ಎಂದು ಬಣ್ಣಿಸಲಾಗುತ್ತಿದೆ.
ಅಂದ್ಹಾಗೆ, ಇದೇ 'ರಾಜಕುಮಾರ' ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಒಂದರಲ್ಲಿ ಎ.ಸಿ ಹಾಕಲಿಲ್ಲ ಎಂಬ ವಿಚಾರಕ್ಕೆ ಗಲಾಟೆ ಆಗಿತ್ತು. ಏನೇ ಆದರೂ, ಮಲ್ಟಿಪ್ಲೆಕ್ಸ್ ಗಳಲ್ಲೂ 'ರಾಜಕುಮಾರ'ನ ರಾಜ್ಯಭಾರ ಕಮ್ಮಿ ಆಗಲಿಲ್ಲ.
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ರಾಜಕುಮಾರ' ಇನ್ನು ಕೆಲವೇ ದಿನಗಳಲ್ಲಿ ಸೆಂಚುರಿ ಬಾರಿಸಲಿದೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಂತರ ನಿರ್ದೇಶಕ ಸಂತೋಷ್ ಆನಂದರಾಮ್ ಆಕ್ಷನ್ ಕಟ್ ಹೇಳಿದ ಚಿತ್ರ ಈ 'ರಾಜಕುಮಾರ'.


Click it and Unblock the Notifications











