»   » ಮೊದಲ ದಿನ 'ರಾಜಕುಮಾರ'ನ ಕಲೆಕ್ಷನ್ ಎಷ್ಟು?

ಮೊದಲ ದಿನ 'ರಾಜಕುಮಾರ'ನ ಕಲೆಕ್ಷನ್ ಎಷ್ಟು?

Posted By:
Subscribe to Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ನಿನ್ನೆ (ಮಾರ್ಚ್ 24) ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಪ್ರಮುಖ ನಗರಗಳಲ್ಲಿ ಸೇರಿದಂತೆ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು.['ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ]

ಹೀಗಾಗಿ, ನಿರೀಕ್ಷೆಯಂತೆ 'ರಾಜಕುಮಾರ'ನ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ನಡೆದಿತ್ತು. ಸದ್ಯದ ಮಾಹಿತಿ ಪ್ರಕಾರ 'ರಾಜಕುಮಾರ' ಮೊದಲ ದಿನ ದಾಖಲೆಯ ಕಲೆಕ್ಷನ್ ಮಾಡಿದೆಯಂತೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಫಸ್ಟ್ ಡೇ 'ರಾಜಕುಮಾರ' ಸುಮಾರು 6.5 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.['ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ!]

Raajakumara Movie 1st Day Collection

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದ 'ರಾಜಕುಮಾರ' ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ. ಶರತ್ ಕುಮಾರ್, ಪ್ರಕಾಶ್ ರೈ, ಅನಂತ್ ನಾಗ್, ದತ್ತಣ್ಣ, ಸಾಧುಕೋಕಿಲಾ, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿದೆ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಚಿತ್ರಕ್ಕಿದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

English summary
According to Soruce, Puneeth rajkumar Starrer Raajakumara First day Collection Figures are estimated between Rs 6 crore to Rs 7 crore from the day of release on Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada