»   » 'ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯಲ್ಲಿ ಗೆದ್ದಿದ್ದು ಇವರ ಪೋಸ್

'ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯಲ್ಲಿ ಗೆದ್ದಿದ್ದು ಇವರ ಪೋಸ್

Posted By: Naveen
Subscribe to Filmibeat Kannada

'ರಾಜಕುಮಾರ' ಚಿತ್ರತಂಡ 'ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯ ವಿಜೇತರನ್ನು ಈಗ ಅನೌನ್ಸ್ ಮಾಡಿದೆ.

'ರಾಜಕುಮಾರ' ಸಿನಿಮಾ ರಿಲೀಸ್ ಆಗುವ ಮುನ್ನ ಚಿತ್ರತಂಡ ಒಂದು ಪ್ಲಾನ್ ಮಾಡಿ 'ಪೋಸ್ ಲೈಕ್ ರಾಜಕುಮಾರ' ಎಂಬ ಸ್ಪರ್ಧೆಯ ಮೂಲಕ ಚಿತ್ರವನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡಿತ್ತು.

Raajakumara movie team announces the winners of 'Pose Like Raajakumara' contest

'ರಾಜಕುಮಾರ' ಸಿನಿಮಾ ಸಕ್ಸಸ್ ಆದ ಬಳಿಕ ಈಗ 'ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯಲ್ಲಿ ಗೆದ್ದಿರುವವರ ಹೆಸರನ್ನು ಚಿತ್ರತಂಡ ಘೋಷಿಸಿದೆ. ಮೂರು ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದ್ದು, ರಾಯಚೂರಿನ ಪಾಂಡು ತೆಲ್ಕರ್, ಬೆಂಗಳೂರಿನ ಯುವಕ ವೈ.ಆರ್.ಕೆ ಮತ್ತು ಬೆಳಗಾವಿಯ ಸಾಕ್ಷತ್ ಚಾರನ್ತಿಮಟ್ ಎಂಬ ಅಭಿಮಾನಿಗಳು ಇದರಲ್ಲಿ ಆಯ್ಕೆಯಾಗಿದ್ದಾರೆ.

Raajakumara movie team announces the winners of 'Pose Like Raajakumara' contest

ಪುನೀತ್ ಅವರ ಸಾವಿರಾರು ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ 'ರಾಜಕುಮಾರ'ನ ರೀತಿ ಪೋಸ್ ಕೊಟ್ಟಿದ್ದರು. ಆ ಸಾವಿರಾರು ಜನರಲ್ಲಿ ವಿಜೇತರಾದ ಈ ಮೂವರು ಅಭಿಮಾನಿಗಳಿಗೆ ಚಿತ್ರತಂಡ ರಾಜಕುಮಾರ ಚಿತ್ರದ 'ಬೊಂಬೆ'ಗಳನ್ನು ನೀಡಲಿದ್ದಾರೆ. ಸದ್ಯ ವಿಜಯ ಯಾತ್ರೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದ ಪುನೀತ್ 'ಪೋಸ್ ಲೈಕ್ ರಾಜಕುಮಾರ' ಮೂಲಕ ಸಹ ಅಭಿಮಾನಿಗಳಿಗೆ ಖುಷಿ ಹಂಚಿದ್ದಾರೆ.

English summary
Raajakumara movie team announced the winners of 'Pose Like Raajakumara' contest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada