Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏನಮ್ಮಿ ಏನಮ್ಮಿ ಹಾಡಿಗೆ 100 ಮಿಲಿಯನ್ ವೀವ್ಸ್: 'ಅಯೋಗ್ಯ 2' ಸೆಟ್ಟೇರುವುದು ಫಿಕ್ಸ್
'ಅಯೋಗ್ಯ' ಸ್ಯಾಂಡಲ್‌ವುಡ್‌ಗೆ ಸರ್ಪ್ರೈಸ್ ಹಿಟ್ ಕೊಟ್ಟ ಸಿನಿಮಾ. ಯೋಗರಾಜ್ ಭಟ್ಟರ ಜೊತೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಮಾರ್ ನಿರ್ದೇಶಿಸಿದ ಮೊದಲ ಸಿನಿಮಾ. ಈ ಚಿತ್ರದ ಟೈಟಲ್ ಅನೌನ್ಸ್ ಆದಾಗ, ಒಂದಿಷ್ಟು ಟೀಕೆಗಳು ಕೇಳಿಬಂದಿತ್ತು. ಸಿನಿಮಾಗೆ 'ಅಯೋಗ್ಯ' ಅಂತ ಟೈಟಲ್ ಇಡುವುದು ಹಾಸ್ಯಾಸ್ಪದ ಎಂದಿದ್ದರು. ಇದು ನೆಗೆಟಿವ್ ಟೈಟಲ್ ಅಂತ ಕೆಲವರು ಹೇಳಿದ್ದರು. ಆದರೂ, ಇದೇ ಟೈಟಲ್ ಇಟ್ಕೊಂಡು ಸಿನಿಮಾ ಗೆದ್ದು ಬಿಟ್ಟಿತ್ತು. ಈ ಖುಷಿಯಲ್ಲಿ 'ಅಯೋಗ್ಯ 2' ಸೆಟ್ಟೇರುವ ಸುಳಿವು ಸಿಕ್ಕಿದೆ.
'ಅಯೋಗ್ಯ' ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾ. ಸರಿ ಸುಮಾರು 10 ಕೋಟಿಗೂ ಅಧಿಕ ಮೊತ್ತವನ್ನು ಸಿನಿಮಾ ಕಲೆ ಹಾಕಿತ್ತು. ಹೀಗಾಗಿ ಈ ಹಿಟ್ ಜೋಡಿ ಈಗಾಗಲೇ 'ಮ್ಯಾಟ್ನಿ' ಅನ್ನುವ ಸಿನಿಮಾದಲ್ಲಿ ಮತ್ತೆ ನಟಿಸುತ್ತಿದೆ. ರಚಿತಾ ರಾಮ್ ಹಾಗೂ ಸತೀಶ್ ನೀನಾಸಂರನ್ನು ಒಟ್ಟಿಗೆ ನೋಡಿ ಸಿನಿಪ್ರಿಯರು ಕೂಡ ಕಾತರರಾಗಿದ್ದಾರೆ. ಈ ಮಧ್ಯೆ 'ಅಯೋಗ್ಯ 2' ಸಿನಿಮಾ ಕೂಡ ಅತೀ ಶೀಘ್ರದಲ್ಲಿಯೇ ಸೆಟ್ಟೇರುವ ಸುಳಿವು ಸಿಕ್ಕಿದೆ.
2
ದಿನಗಳಲ್ಲಿ
ಶೂಟಿಂಗ್
ಮುಗಿಸಿದ
'ಅಯೋಗ್ಯ'
ಚಿತ್ರದ
ಏನಮ್ಮಿ
ಯಾಕಮ್ಮಿ
ಹಾಡಿಗೆ
100
ಮಿಲಿಯನ್
ವೀವ್ಸ್

'ಏನಮ್ಮಿ ಏನಮ್ಮಿ' ಹಾಡಿಗೆ 100 ಮಿ. ವೀವ್ಸ್
ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾ 'ಅಯೋಗ್ಯ'. ಈ ಚಿತ್ರಕ್ಕೆ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದರು. ಮಂಡ್ಯ ಶೈಲಿಯ 'ಏನಮ್ಮ ಏನಮ್ಮಿ' ಹಾಡು 100 ಮಿಲಿಯನ್ ವೀವ್ಸ್ ಕಂಡಿದೆ. ಇದೇ ಖುಷಿಯಲ್ಲಿ ಆಡಿಯೋ ಸಂಸ್ಥೆ ಇಡೀ ಚಿತ್ರತಂಡಕ್ಕೆ ಸನ್ಮಾನ ಮಾಡಿದೆ. ಕನ್ನಡದ ಕೆಲವೇ ಕೆಲವು ಹಾಡುಗಳು 100 ಮಿಲಿಯನ್ ವೀವ್ಸ್ ಪಡೆದಿದ್ದು, ಇದರಲ್ಲಿ 'ಅಯೋಗ್ಯ' ಚಿತ್ರದ ಏನಮ್ಮಿ ಏನಮ್ಮಿ ಹಾಡು ಕೂಡ ಸೇರಿದೆ. 'ಅಯೋಗ್ಯ' ಹಾಡು ಸೂಪರ್‌ಹಿಟ್ ಆದ ಹಿನ್ನೆಲೆಯಲ್ಲಿ ಚಿತ್ರತಂಡದಿಂದ ಹೊಸ ಸಂಗತಿಯೊಂದು ರಿಲೀಸ್ ಮಾಡಿದೆ.
'ಏಕ್
ಲವ್
ಯಾ'
ಸಿನಿಮಾ
ವೀಕ್ಷಿಸಿದ
ಮಾಜಿ
ಸಿಎಂ
ಸಿದ್ಧರಾಮಯ್ಯ

'ಅಯೋಗ್ಯ 2'ಗೆ ಮುಹೂರ್ತ ಯಾವಾಗ?
'ಏನಮ್ಮಿ ಏನಮ್ಮಿ' 100 ಮಿಲಿಯನ್ ವೀವ್ಸ್ ಸಂಭ್ರಾಚರಣೆಯಲ್ಲಿ ನಿರ್ದೇಶಕ ಮಹೇಶ್ ಕುಮಾರ್ 'ಅಯೋಗ್ಯ 2' ಬಗ್ಗೆ ಸುಳಿವು ನೀಡಿದ್ದಾರೆ. ಮತ್ತೆ ರಚಿತಾ ರಾಮ್, ಸತೀಶ್ ಸೇರಿದಂತೆ ಇಡೀ ತಂಡ ಒಟ್ಟಿಗೆ ಸೇರಲಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ 'ಅಯೋಗ್ಯ 2' ಸೆಟ್ಟೇರುವ ಸೂಚನೆ ನೀಡಿದ್ದಾರೆ. ಸದ್ಯ ಸತೀಶ್ ನೀನಾಸಂ, ರಚಿತಾ ರಾಮ್ ಹಾಗೂ ಮಹೇಶ್ ಕುಮಾರ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಯಾವಾಗ ಅನೌನ್ಸ್ ಮಾಡುತ್ತಾರೆ? ಅನ್ನುವ ಕುತೂಹಲವಿದೆ.

9 ಕೋಟಿ ವೆಚ್ಚದಲ್ಲಿ 'ಅಯೋಗ್ಯ 2'
'ಅಯೋಗ್ಯ' ಸಿನಿಮಾ ಸ್ಮಾಲ್ ಬಜೆಟ್‌ನಲ್ಲಿ ಆರಂಭ ಆಗಿತ್ತು. ಆದರೆ, 'ಅಯೋಗ್ಯ 2' ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಿಸಲು ಮುಂದಾಗಿದೆ. ಸುಮಾರು 8 ರಿಂದ 9 ಕೋಟಿ ವೆಚ್ಚದಲ್ಲಿ 'ಅಯೋಗ್ಯ 2' ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ಸಿನಿಮಾ ಲೋಕೇಶನ್‌ನಿಂದ ಹಿಡಿದು, ಸಾಂಗ್ ಮೇಕಿಂಗ್, ಆಕ್ಷನ್ ಎಲ್ಲವಕ್ಕೂ ಅದ್ಧೂರಿಯಾಗಿ ಮೇಕಿಂಗ್ ಮಾಡಲು ತೀರ್ಮಾನಿಸಲಾಗಿದ್ದು, ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನುವುದು ಚಿತ್ರತಂಡ ಶೀಘ್ರದಲ್ಲಿಯೇ ಮಾಹಿತಿ ಹೊರಬೀಳಲಿದೆ. ಈ ಸಿನಿಮಾ ಸತೀಶ್ ನೀನಾಸಂಗೆ ಉತ್ತಮ ಸಂಭಾವನೆ ಕೂಡ ಸಿಕ್ಕಿದೆ ಅನ್ನುವುದು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿರುವ ಮಾಹಿತಿ.
12
ಸೆಕೆಂಡ್
'ಏಕ್
ಲವ್
ಯಾ'
ಟೀಸರ್‌ನಲ್ಲಿ
ಏನೇನಿದೆ?
ರಿಲೀಸ್‌ಗೆ
ಪ್ರೇಮ್
ಮಾಸ್ಟರ್
ಪ್ಲ್ಯಾನ್
ಏನು?

'ಅಯೋಗ್ಯ' ಮುಂದುವರೆದ ಕಥೆ
ಅಯೋಗ್ಯ ಸಿನಿಮಾದ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಸಿನಿಮಾ ಮುಂದುವರೆಯಲಿದೆ. ಈ ಬಾರಿಗೆ ಅಧ್ಯಕ್ಷನಾಗುವ ಕನಸು ಇಟ್ಕೊಂಡು ಹೋರಾಡುವ ಎಳೆ ಇಟ್ಟುಕೊಂಡಿದ್ದಾರೆ. ಈ ಹಂತದಲ್ಲಿ 'ಅಯೋಗ್ಯ 2' ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ನೋಡಬಹುದು ಎನ್ನುತ್ತಿದೆ ಚಿತ್ರತಂಡ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಅಯೋಗ್ಯ ಮುಂದುವರೆದ ಭಾಗವೇ 'ಅಯೋಗ್ಯ 2'. ಅದೇ ಹಳೆ ತಂಡವನ್ನು ಇಟ್ಕೊಂಡು ಸಿನಿಮಾ ಮಾಡಲಾಗುತ್ತಿದೆ. ಆದರೆ, ನಿರ್ಮಾಪಕರು ಮಾತ್ರ ಬದಲಾವಣೆಯಾಗಿದ್ದಾರೆ.