For Quick Alerts
  ALLOW NOTIFICATIONS  
  For Daily Alerts

  'ರೌಡಿ ಬೇಬಿ' ಲುಕ್‌ನಲ್ಲಿ ರಚ್ಚು: ಮತ್ತೊಮ್ಮೆ ಸಿಗರೇಟ್ ಹಿಡಿದ ಡಿಂಪಲ್

  |

  ಕಾಲೆಳೆಯೋರು ಇದ್ದೇ ಇರ್ತಾರೆ, ಅವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ನಮ್ಮ ಪಾಡಿಗೆ ನಾವು ಬೆಳಿತಾ ಇರಬೇಕು ಎನ್ನುತ್ತಾ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಮುನ್ನುಗ್ಗುತ್ತಿರುವ ನಟಿ ರಚಿತಾ ರಾಮ್.

  ತಮಗೆ ಸರಿ ಎನಿಸುವ ಪಾತ್ರಗಳು ಮಾಡುತ್ತಾ, ತಮ್ಮ ಅಭಿಮಾನಿಗಳನ್ನ ಮೆಚ್ಚಿಸುವಂತಹ ಚಿತ್ರಗಳಲ್ಲಿ ನಟಿಸುತ್ತಾ ಸಾಗಿರುವ ರಚಿತಾ ಆಗಾಗ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ರಚ್ಚು ಅಂದ್ರೆ ಸಂಪ್ರದಾಯಸ್ಥ ಲುಕ್‌ನಲ್ಲೇ ಇರಬೇಕು ಎಂಬ ಅಭಿಮಾನಿಗಳು ರಚಿತಾ ಅವರ ಬೋಲ್ಡ್ ಲುಕ್‌ಗಳನ್ನು ಒಪ್ಪುವುದಿಲ್ಲ. ಆದರೂ, ಸರ್ಪ್ರೈಸ್ ಎಂಬಂತೆ ರಚಿತಾ ಮಾತ್ರ ಇಂತಹ ಪ್ರಯತ್ನ ಮಾಡ್ತಾ ಇರ್ತಾರೆ. ಇದೀಗ, ದೀಪಾವಳಿ ಹಬ್ಬದ ಸಮಯದಲ್ಲಿ ರಚಿತಾ ಹಂಚಿಕೊಂಡಿರುವ ಫೋಟೋವೊಂದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಮುಂದೆ ಓದಿ...

  'ರೌಡಿ ಬೇಬಿ' ಲುಕ್‌ನಲ್ಲಿ ರಚ್ಚು

  'ರೌಡಿ ಬೇಬಿ' ಲುಕ್‌ನಲ್ಲಿ ರಚ್ಚು

  ರಚಿತಾ ರಾಮ್ ಸಿನಿಮಾ ಜರ್ನಿ ನೋಡಿದ್ರೆ ಮಾಸ್ ಪಾತ್ರಗಳನ್ನು ಮಾಡಿರುವುದು ಬಹಳ ಕಡಿಮೆ ಮತ್ತು ಅಪರೂಪ. ಇದೀಗ, ಔಟ್ ಅಂಡ್ ಔಟ್ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ ಬುಲ್ ಬುಲ್. ಒಂದು ಕೈಯಲ್ಲಿ ಗನ್, ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದಿರುವ ರಚ್ಚು ಲುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  ಸಿಗರೇಟು ಸೇದುತ್ತಿರುವ ರಚಿತಾ ರಾಮ್ ಫೋಟೋ ವೈರಲ್ಸಿಗರೇಟು ಸೇದುತ್ತಿರುವ ರಚಿತಾ ರಾಮ್ ಫೋಟೋ ವೈರಲ್

  ಎರಡನೇ ಸಲ ಸಿಗರೇಟ್ ಹಿಡಿದ ರಚ್ಚು

  ಎರಡನೇ ಸಲ ಸಿಗರೇಟ್ ಹಿಡಿದ ರಚ್ಚು

  ಪ್ರೇಮ್ ನಿರ್ದೇಶಿಸುತ್ತಿರುವ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚಿತಾ ರಾಮ್ ಸ್ಟೈಲಿಶ್ ಹಾಗೂ ಬೋಲ್ಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸಿಗರೇಟ್ ಸೇದುವ ಫೋಟೋಗಳು ಸಹ ವೈರಲ್ ಆಗಿತ್ತು. ಆಗ ಕೆಲವರು ರಚಿತಾ ರಾಮ್ ಅವರನ್ನು ಟೀಕಿಸಿದ್ದರು. ಇದೀಗ, ಮತ್ತೆ ರಚ್ಚು ಕೈಯಲ್ಲಿ ಸಿಗರೇಟ್ ಇದೆ. ಇದು ಪಾತ್ರದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

  ಅಪರಾಧ ಹುಡುಕಿದರೆ ನಿಮಗೊಂದು ಸಲಹೆ

  ಅಪರಾಧ ಹುಡುಕಿದರೆ ನಿಮಗೊಂದು ಸಲಹೆ

  ಸಿಗರೇಟ್ ಹಾಗೂ ಗನ್ ಹಿಡಿದಿರುವ ಫೋಟೋ ಹಂಚಿಕೊಂಡಿರುವ ರಚ್ಚು ''ನನ್ನಲ್ಲಿ ನೀವು ಅಪರಾಧ ಹುಡುಕಿದರೆ, ನಾನು ನಿಮಗೆ ನನ್ನನ್ನು ಹುಡುಕಬೇಡಿ ಎಂದು ಸಲಹೆ ನೀಡುತ್ತೇನೆ'' ಎಂದು ಪೋಸ್ಟ್ ಹಾಕಿದ್ದಾರೆ. ಬಹುಶಃ ಟೀಕೆ ಮಾಡೋರಿಗೆ ಇದು ರಚ್ಚು ಉತ್ತರ ಎನಿಸುತ್ತಿದೆ.

  'ಮಮ್ಮಿ' ನಿರ್ದೇಶಕರ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್?'ಮಮ್ಮಿ' ನಿರ್ದೇಶಕರ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್?

  ಯಾವ ಸಿನಿಮಾ ಇರಬಹುದು?

  ಯಾವ ಸಿನಿಮಾ ಇರಬಹುದು?

  ದೀಪಾವಳಿ ಹಬ್ಬದ ಪ್ರಯುಕ್ತ 'ಪಂಕಜ ಕಸ್ತೂರಿ' ಎಂಬ ಚಿತ್ರ ಘೋಷಿಸಿದ್ದರು ರಚಿತಾ ರಾಮ್. ಮಯೂರ ರಾಘವೇಂದ್ರ ನಿರ್ದೇಶನ ಈ ಚಿತ್ರವನ್ನು ರವಿಶ್ ನಿರ್ಮಿಸುತ್ತಿದ್ದಾರೆ. ಬಹುಶಃ ಈ ಚಿತ್ರದ ಲುಕ್ ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

  English summary
  Dimple Queen Rachita ram's new photo (cigarette look) viral in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X