For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಪರ ರಚಿತಾ ವಾದ: ಟ್ರೋಲಿಗರ ವಿರುದ್ಧ ಗುಡುಗಿದ ಗುಳಿಕೆನ್ನೆ ಚೆಲುವೆ

  |

  ಕನ್ನಡ ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದ್ಯಾವಾಗ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಜೊತೆಗಿನ ಲವ್ ಗೆ ಫುಲ್ ಸ್ಟಾಪ್ ಇಟ್ಟು, ಬ್ರೇಕಪ್ ಮಾಡಿಕೊಂಡ್ರೋ.. ಅಂದಿನಿಂದ ರಶ್ಮಿಕಾ ಮಂದಣ್ಣ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

  ತೆಲುಗಿನ 'ಗೀತ ಗೋವಿಂದಂ' ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಲೀಕ್ ಆದ್ಮೇಲಂತೂ ರಶ್ಮಿಕಾ ಮಂದಣ್ಣ ಬಗ್ಗೆ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ನೆಟ್ಟಿಗರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ.

  ಇಲ್ಲಿಯವರೆಗೂ ಯಾವುದೇ ಟ್ರೋಲ್ ಗಳ ಬಗ್ಗೆ ರಶ್ಮಿಕಾ ಮಂದಣ್ಣ ತಲೆಕಡೆಸಿಕೊಂಡಿರಲಿಲ್ಲ. ಆದ್ರೆ, ಮೊನ್ನೆಮೊನ್ನೆಯಷ್ಟೇ ತಮ್ಮ ಬಾಲ್ಯದ ಫೋಟೋವನ್ನ ರಶ್ಮಿಕಾ ಶೇರ್ ಮಾಡಿದ್ದರು. ಬಾಲ್ಯದ ಫೋಟೋಗೆ ಅಸಭ್ಯ ಪದ ಬಳಸಿ ಟ್ರೋಲ್ ಮಾಡಿದ್ದು ರಶ್ಮಿಕಾರನ್ನ ಕೆರಳಿಸಿತ್ತು.

  ಟ್ರೋಲಿಗರ ಈ ನಡೆಯನ್ನ ಸ್ಯಾಂಡಲ್ ವುಡ್ ನ ಹಲವರು ಖಂಡಿಸಿದ್ದರು. ನಿರ್ದೇಶಕ ಕಿರಣ್ ರಾಜ್, ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಹಲವರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದರು. ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ರಶ್ಮಿಕಾ ಮಂದಣ್ಣ ಪರ ದನಿ ಎತ್ತಿದ್ದಾರೆ. ಟ್ರೋಲಿಗರ ವಿರುದ್ಧ ರಚಿತಾ ರಾಮ್ ಗುಡುಗಿದ್ದಾರೆ. ಮುಂದೆ ಓದಿರಿ...

  ಬೇಸರಗೊಂಡಿರುವ ರಚಿತಾ ರಾಮ್

  ಬೇಸರಗೊಂಡಿರುವ ರಚಿತಾ ರಾಮ್

  ಎರಡು ಜಡೆ ಸೇರಿದರೆ ಜಗಳ ಅಂತಾರೆ. ಓರ್ವ ನಟಿ ಕಂಡ್ರೆ ಮತ್ತೋರ್ವ ನಟಿಗೆ ಆಗ್ಬರಲ್ಲ ಅಂತಾರೆ. ಆದ್ರೆ, ಇಲ್ಲಿ ರಶ್ಮಿಕಾ ಮಂದಣ್ಣ ಪರವಾಗಿ ರಚಿತಾ ರಾಮ್ ನಿಂತಿದ್ದಾರೆ. ರಶ್ಮಿಕಾ ಮಂದಣ್ಣ ಬಗ್ಗೆ ಎಲುಬಿಲ್ಲದ ನಾಲಿಗೆ ಹರಿಬಿಡುತ್ತಿರುವ ಟ್ರೋಲಿಗರ ವಿರುದ್ಧ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿವಾದದ ಕುರಿತು ರಚಿತಾ ರಾಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿ

  ರಚಿತಾ ರಾಮ್ ಹೇಳಿದ್ದೇನು.?

  ರಚಿತಾ ರಾಮ್ ಹೇಳಿದ್ದೇನು.?

  ''ಟ್ರೋಲ್ ಮಾಡುವುದು ತಪ್ಪಲ್ಲ. ಆದ್ರೆ ಪಾಸಿಟಿವ್ ಆಗಿ ಟ್ರೋಲ್ ಮಾಡಲಿ. ನೆಗೆಟಿವ್ ಟ್ರೋಲ್ ಗಳಿಂದ ಯಾರ ಗೌರವಕ್ಕೂ ಧಕ್ಕೆ ತರಬೇಡಿ. ನಾವೆಲ್ಲ ಈ ಸ್ಥಾನಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇವೆ. ಕನ್ನಡಿಗರ ಪ್ರೋತ್ಸಾಹ, ಅಭಿಮಾನ, ಸಹಕಾರದಿಂದಾಗಿ ನಾವು ಬೆಳೆದಿದ್ದೇವೆ. ಈ ರೀತಿಯ ಕೆಟ್ಟ ಟ್ರೋಲ್ ಗಳು ಮನಸ್ಸಿಗೆ ತುಂಬಾ ಬೇಸರ ತರಿಸುತ್ತೆ'' ಎಂದಿದ್ದಾರೆ ರಚಿತಾ ರಾಮ್.

  ರಶ್ಮಿಕಾ ಬೆಂಬಲಕ್ಕೆ ನಿಂತ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಮತ್ತು ಕವಿರಾಜ್ರಶ್ಮಿಕಾ ಬೆಂಬಲಕ್ಕೆ ನಿಂತ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಮತ್ತು ಕವಿರಾಜ್

  ಕಿರಣ್ ರಾಜ್ ಹೇಳಿದ್ದೇನು.?

  ಕಿರಣ್ ರಾಜ್ ಹೇಳಿದ್ದೇನು.?

  ''"ಕೆಲವು ಟ್ರೋಲ್ ಪೇಜ್ ಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಅಂತ ಈ ಪೋಸ್ಟ್ ನೋಡಿದ್ರೆ ಗೊತ್ತಾಗುತ್ತೆ. ನಿಮ್ಮ ಅಭಿಪ್ರಾಯಗಳು ಏನೇ ಇದ್ರೂ ಅವರ ಸಿನಿಮಾಗಳಿಗೆ ಸೀಮಿತವಾಗಿರಲಿ. ಅದನ್ನು ಬಿಟ್ಟು ಅವರ ವೈಯುಕ್ತಿಕ ಜೀವನವನ್ನು ನಿಂದಿಸುವ, ಅಸಹ್ಯವಾಗಿ ಟ್ರೋಲ್ ಮಾಡೋ ಹಕ್ಕು ಯಾರಿಗೂ ಇಲ್ಲ. ಕನಿಷ್ಠ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ'' ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದರು.

  ಕವಿರಾಜ್ ಏನಂದರು.?

  ಕವಿರಾಜ್ ಏನಂದರು.?

  "ಬರೀ ರಶ್ಮಿಕಾ ಅಲ್ಲ, ಟಿಕ್ ಟಾಕ್ ಮಾಡುವ ಹುಡುಗಿಯರು ಸೇರಿದಂತೆ ಯಾರನ್ನೇ ಆದರೂ ಕೀಳು ಅಭಿರುಚಿಯಿಂದ ಟ್ರೋಲ್ ಮಾಡುವ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು" ಎಂದು ಸಾಮಾಜಿಕ ಜಾಲತಾಣದಲ್ಲಿ ಕವಿರಾಜ್ ಬರೆದುಕೊಂಡಿದ್ದಾರೆ. ಇದೀಗ ರಚಿತಾ ರಾಮ್ ಕೂಡ ರಶ್ಮಿಕಾ ಮಂದಣ್ಣ ಪರವಾಗಿ ದನಿಗೂಡಿಸಿದ್ದಾರೆ.

  English summary
  Kannada Actress Rachita Ram supports Rashmika Mandanna over trolls issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X