For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಗೆ ಎಂಟ್ರಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

  |
  ಟಾಲಿವುಡ್ ಗೆ ಎಂಟ್ರಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್..! | FILMIBEAT KANNADA

  ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದರು. ಅಲ್ಲಿಂದ ದಿಲ್ ರಂಗೀಲಾ, ರನ್ನ, ರಥಾವರ್, ಚಕ್ರವ್ಯೂಹ, ಪುಷ್ಪಕ ವಿಮಾನ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ, ಈಗ ನಟಸಾರ್ವಭೌಮ...ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ರಚಿತಾ ತೆಲುಗಿನಲ್ಲೂ ಸಿನಿಮಾ ಮಾಡ್ತಾರೆ ಎಂದು ಕೆಲ ವರ್ಷಗಳಿಂದ ಸುದ್ದಿಯೊಂದು ಗಿರಿಗಿಟ್ಲೆ ಹೊಡಿತಿದೆ.

  ಆದ್ರೆ, ಅಧಿಕೃತವಾಗಿ ರಚಿತಾ ರಾಮ್ ತೆಲುಗಿಗೆ ಹೋಗಿಲ್ಲ. ಇದೀಗ, ಮೊದಲ ಸಲ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಡ್ತಿದ್ದಾರೆ.

  ಡಿಂಪಲ್ ಕ್ವೀನ್ ರಚಿತಾ ರಾಮ್ ಆಸೆ ಯಾವಾಗ ಈಡೇರುತ್ತೋ.?

  ಹೌದು, ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗ್ತಿದೆ. ಇಂದು' ಐ ಲವ್ ಯೂ' ಚಿತ್ರದ ತೆಲುಗು ಟ್ರೈಲರ್ ಬಿಡುಗಡೆಯಾಗಿದೆ. ಈ ಮೂಲಕ ಅಧಿಕೃತವಾಗಿ ರಚ್ಚು ಟಾಲಿವುಡ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

  ನನ್ ಮದ್ವೆ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬುಲೆಟ್ ಹಾರಿಸಿದ ಬುಲ್ ಬುಲ್

  ಆರ್ ಚಂದ್ರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ನಿರ್ಮಾಣ ಕೂಡ ಅವರೇ ಮಾಡಿದ್ದಾರೆ. ಉಪ್ಪಿ, ರಚಿತಾ ಜೊತೆಯಲ್ಲಿ ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈಜಗದೀಶ್ ಕೂಡ ನಟಿಸಿದ್ದಾರೆ. ಸದ್ಯ ಹಾಡು ಮತ್ತು ಟ್ರೈಲರ್ ಮೂಲಕ ಸದ್ದು ಮಾಡ್ತಿರುವ ಐ ಲವ್ ಯೂ ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರುವ ಯೋಚನೆಯಲ್ಲಿದೆ.

  English summary
  Real star upendra and Rachita ram starrer I LOVE YOU movie telugu version tariler has released. the movie directed by r chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X