Just In
Don't Miss!
- News
ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: 1 ತಿಂಗಳಲ್ಲಿ ಕನಿಷ್ಠ ಮಟ್ಟ
- Automobiles
ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು
- Finance
ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರೀಟಿಸ್ ನಿಂದ ಐದು ಖರೀದಿ ಆಯ್ಕೆ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯುವರಾಜ್ ಹೇಳಿದ ಭವಿಷ್ಯ ನನ್ನ ಜೀವನದಲ್ಲಿ ನಿಜವಾಗಿದೆ, ಅವರನ್ನ ತುಂಬಾ ನಂಬಿದ್ದೆ; ರಾಧಿಕಾ ಕುಮಾರಸ್ವಾಮಿ
ಯುವರಾಜ್ ಜೊತೆಗಿನ ಹಣಕಾಸು ವ್ಯವಹಾರ ಆರೋಪದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ರಾಧಿಕಾ, ಯುವರಾಜ್ ಅವರು 17 ವರ್ಷಗಳಿಂದ ಪರಿಚಯವಿದ್ದಾರೆ ಎಂದು ಹೇಳಿದ್ದಾರೆ.
ತಂದೆಯ ಸ್ನೇಹಿತರು ಆ ಕಾಲದಿಂದನೂ ಅವರ ಜೊತೆ ಉತ್ತಮ ಸ್ನೇಹವಿದೆ ಎಂದಿದ್ದಾರೆ. ಅವರು ಹೇಳಿದ ಅನೇಕ ವಿಚಾರಗಳು ನಿಜವಾಗಿದೆ. ಹಾಗಾಗಿ ಅವರನ್ನು ತುಂಬಾ ನಂಬಿದ್ದೆವು ಎಂದು ರಾಧಿಕಾ ಬಹಿರಂಗ ಪಡಿಸಿದ್ದಾರೆ. ಯುವರಾಜ್ ಮತ್ತು ನನ್ನ ನಡುವೆ ಸಿನಿಮಾ ವಿಚಾರವಾಗಿ ಹಣಕಾಸಿನ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆ ವ್ಯವಹಾರವೇನು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯುವರಾಜ್ ಇಂತ ಮನುಷ್ಯ ಅಂತ ಗೊತ್ತಾಗಿದ್ದು, ಅವರು ಅರೆಸ್ಟ್ ಆದ್ಮೇಲೆಯೇ ಎಂದು ರಾಧಿಕಾ ಹೇಳಿದ್ದಾರೆ.
RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?

ಹೆಣ್ಣು ಮಗುವಾಗುತ್ತೆ ಎಂದು ಹೇಳಿದ್ದರು
ನಾನು ಚಿಕ್ಕವಳಿದ್ದೆ ಅಂದರೆ 16 ವರ್ಷದಳಾಗಿದ್ದಾಗ ನನ್ನ ಬಗ್ಗೆ ಭವಿಷ್ಯ ನುಡಿದಿದ್ದರು. ಭವಿಷ್ಯದಲ್ಲಿ ಟರ್ನಿಂಗ್ ಸಿಗುತ್ತೆ, ನಿನಗೆ ಹೆಣ್ಣು ಮಗುವಾಗುತ್ತೆ ಎಂದು ಹೇಳಿದ್ದರು ಅದು ನಿಜವಾಗಿದೆ. ತಂದೆಯ ಬಗ್ಗೆ ಹೇಳಿದ ಮಾತು ಸಹ ನಿಜವಾಗಿದೆ. ಅಪ್ಪನ ಜೊತೆ ತುಂಬಾ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಹಾಗಾಗಿ ನಂಬಿದ್ದೆವು ಎಂದಿದ್ದಾರೆ.

ಅಪ್ಪನ ಬಗ್ಗೆ ಹೇಳಿದ ಭವಿಷ್ಯ ನಿಜವಾಗಿದೆ
ಅಪ್ಪನ್ನು ಕಳೆದುಕೊಳ್ಳುವ ಬಗ್ಗೆ ಮೊದಲೇ ಹೇಳಿದ್ದರು, ಕಂಟಕವಿದೆ ಎಂದಿದ್ದದು ಅವರು ಹೇಳಿದ ಹಾಗೆ ಆಯಿತು. ಆದರೆ ಅವರು ಹೇಳಿದ ಪೂಜೆಯನ್ನು ನಾವು ಮಾಡಿಸಿರಲಿಲ್ಲ. ಅದೊಂದು ಮಾಡಿಸಿದ್ದರೆ ಅಪ್ಪ ಇರುತ್ತಿದ್ದರೇನೋ ಎಂದು ಅನೇಕ ಬಾರಿ ಅನಿಸಿದೆ ಎಂದು ರಾಧಿಕಾ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಹೇಳಿದ್ದಾರೆ.

ನನ್ನ ಟೈಂ ಸರಿ ಇಲ್ಲ ಅಂದಿದ್ದರು
ಡಿಸೆಂಬರ್ ನಲ್ಲಿ ನನ್ನ ಟೈಂ ಸರಿ ಇರಲಿಲ್ಲ ಎಂದು ಸ್ವಾಮೀಜಿ ಹೇಳಿದ್ದರು. ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತೆ ಎಂದಿದ್ದರು. ಆದ್ರೀಗ ಹೀಗೆಲ್ಲ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ರಾಧಿಕಾ ಹೇಳಿದ್ದಾರೆ.

ನಾಟ್ಯರಾಣಿ ಶಾಕುಂತಲಾ ಸಿನಿಮಾದ ವ್ಯವಹಾರ
ಅವರ ಜೊತೆ ಐತಿಹಾಸಿಕ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೆ. ನಾಟ್ಯರಾಣಿ ಶಾಕುಂತಲಾ ಸಿನಿಮಾ ಮಾಡಲು ನಿರ್ಧರಿಸಿದ್ದೆ. ಕಲಾವಿದರು ಮತ್ತು ನಿರ್ದೇಶಕರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರ ಜೊತೆ ಸಿನಿಮಾ ಮಾಡಲ್ಲ. ಅವರ ಹಣವನ್ನು ವಾಪಸ್ ನೀಡಿ, ಅವರ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇವೆ. ಅವರ ಸಹವಾಸವೇ ಬೇಡ' ಎಂದು ರಾಧಿಕಾ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.