»   » ಮತ್ತೆ ಬಣ್ಣ ಹಚ್ಚಲಿರುವ ರಾಧಿಕಾ ವಿಧಿಸಿದ ಷರತ್ತೇನು?

ಮತ್ತೆ ಬಣ್ಣ ಹಚ್ಚಲಿರುವ ರಾಧಿಕಾ ವಿಧಿಸಿದ ಷರತ್ತೇನು?

Posted By:
Subscribe to Filmibeat Kannada
ಕನ್ನಡದ, ಹಿಂದೊಂದು ಕಾಲದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವುದು ಗೊತ್ತೇ ಇದೆ. ಆದರೆ ಈ ಬಾರಿ ಅವರು ಹೊಸ ವಿಷಯವೊಂದನ್ನು ಹೇಳಿದ್ದಾರೆ. ಅದೆಂದರೆ ಅವರು ಇನ್ನು ಮುಂದೆ ಗ್ಲಾಮರಸ್ ರೋಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಈಗಿನ ಅವರ ಸ್ಥಾನ, ಮಾನ ಹಾಗೂ ಇಮೇಜಿಗೆ ಸರಿಯಾಗಿ ಹೊಂದುವಂತಹ ಪಾತ್ರದಲ್ಲಿ ಮಾತ್ರ ನಟಿಸಲು ಅವರು ನಿರ್ಧರಿಸಿದ್ದಾರಂತೆ.

ಈ ಮೊದಲು ಚಿತ್ರಗಳಲ್ಲಿ ನಟಿಸಿದ್ದ ರಾಧಿಕಾ, ಸಾಕಷ್ಟು ಚಿತ್ರಗಳಲ್ಲಿ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದರು. ಕೇವಲ ಗ್ಲಾಮರಸ್ ಆಗಿ ಮಾತ್ರ ಕಾಣಿಸಿಕೊಳ್ಳದೇ 'ತವರಿಗೆ ಬಾ ತಂಗಿ, ಹಾಗೂ 'ಅಣ್ಣ ತಂಗಿ' ಮುಂತಾದ ಚಿತ್ರಗಳಲ್ಲಿ ಪಕ್ಕಾ ಗೌರಮ್ಮನಂತೆಯೂ ಕಾಣಿಸಿಕೊಂಡಿದ್ದರು. ಆದರೆ ಈಗ ಮಾತ್ರ ತಮ್ಮ ವಯಸ್ಸು ಹಾಗೂ ಇಮೇಜಿಗೆ ಸರಿಯಾಗಿ ಕಾಣಿಸಿಕೊಳ್ಳಲು ನಿರ್ಧರಿಸಿರುವ ರಾಧಿಕಾ ಈ ಮೇಲಿನಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಆದಿತ್ಯ ಜೊತೆ ಮುಂದೆ ಬರಲಿರುವ ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ರಾಧಿಕಾ "ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ ಟೈನರ್ ಮೂವಿ" ಎಂದಿದ್ದಾರೆ. ತಮ್ಮ ವಯಸ್ಸಿಗೆ, ಇಮೇಜಿಗೆ ತಕ್ಕ ಪಾತ್ರವನ್ನು ರಾಧಿಕಾ ಅದರಲ್ಲಿ ಪೋಷಿಸಲಿದ್ದಾರೆ ಎಂಬುದು ಎಲ್ಲರೂ ಗಮನಿಸಿಬೇಕಾದ ಅಂಶ. ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ದೇಶಿಸಲಿರುವವರು ವಿಜಯಲಕ್ಷ್ಮೀ ಸಿಂಗ್. 'ಲಕ್ಕಿ' ಬಳಿಕ ರಾಧಿಕಾ ಮತ್ತೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಮದುವೆಗೂ ಮೊದಲು ಪ್ರಾರಂಭವಾಗಿದ್ದ 'ಅರುಂಧತಿ' ಖ್ಯಾತಿಯ ನಿರ್ದೇಶಕರ ತೆಲುಗು ಚಿತ್ರವೊಂದರ ಚಿತ್ರೀಕರಣವನ್ನು ಇತ್ತೀಚಿಗಷ್ಟೇ ಮುಗಿಸಿಕೊಟ್ಟಿರುವ ರಾಧಿಕಾ, ಈಗ ತಮ್ಮ ಬರಲಿರುವ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಅವರ ಮೊದಲ ಇನ್ನಿಂಗ್ಸ್ ನಲ್ಲಿನ ಕೊನೆಯ ಚಿತ್ರವಾದ ಆದತ್ಯ ಜೋಡಿಯ 'ಈಶ್ವರ್' ಇನ್ನೂ ತೆರೆಕಾಣಬೇಕಿದೆ. ಅಷ್ಟರಲ್ಲೇ ಅದೇ ಆದಿತ್ಯ ಜೊತೆ ಇನ್ನೊಂದು ಚಿತ್ರ ಪ್ರಾರಂಭವಾಗಲಿದೆ. ಚಿತ್ರದ ಮುಹೂರ್ತ ಹಾಗೂ ಶೂಟಿಂಗ್ ಪ್ರಾರಂಭವಾಗುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. (ಒನ್ ಇಂಡಿಯಾ ಕನ್ನಡ)

English summary
Kannada Actress Radhika Kumaraswamy, who is making her comeback to films, has bid goodbye to skin shows. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada