For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನಿಗೆ ತಂಗಿಯಾಗಿ ಮತ್ತೊಮ್ಮೆ ಸ್ವೀಟಿ ರಾಧಿಕಾ

  By Rajendra
  |

  ತಾರೆ ರಾಧಿಕಾ ಕುಮಾರಸ್ವಾಮಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಪ್ರೇಕ್ಷಕರ ಮನಗೆದ್ದದ್ದು ಮಾತ್ರ ಮನಮಿಡಿಯುವ ಸೆಂಟಿಮೆಂಟ್ ಚಿತ್ರಗಳ ಮೂಲಕ. ಅಣ್ಣತಂಗಿ, ತವರಿಗೆ ಬಾ ತಂಗಿ, ಒಡಹುಟ್ಟಿದವಳು, ಹೆತ್ತವರ ಕನಸು...ಚಿತ್ರಗಳೇ ಇಂದಿಗೂ ಅವರ ಅಭಿಮಾನಿಗಳ ಪಾಲಿಗೆ ಅಚ್ಚಳಿಯದೆ ಉಳಿದಿವೆ.

  ಗಂಡ, ಸಂಸಾರ, ಮಗು ಎಂದು ಕಳೆದುಹೋಗಿದ್ದ ಅವರು ಈಗ ಸಾಕಷ್ಟು ಗ್ಯಾಪ್ ಬಳಿಕ ಬಣ್ಣಹಚ್ಚಿದ್ದಾರೆ. ಅವರು ಈ ಹಿಂದೆ 'ಲಕ್ಕಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಗಾಂಧಿನಗರಕ್ಕೆ ಅಡಿಯಿಟ್ಟಿದ್ದರು. ಈಗ ನಿರ್ಮಾಪಕಿ ಕಮ್ ನಟಿಯಾಗಿ ಮರಳಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ ಶಮಿಕ ಎಂಟರ್ ಪ್ರೈಸಸ್ ನ ಮತ್ತೊಂದು ಕೊಡುಗೆ ಇದಾಗಿದೆ.

  ಚಿತ್ರದ ಹೆಸರು ಗೊತ್ತೇ ಇದೆ 'ಸ್ವೀಟಿ'. ಇದರ ಅಡಿಬರಹ 'ನನ್ನ ಜೋಡಿ' ಎಂಬುದು. ಎರಡನ್ನೂ ಸೇರಿದರೆ 'ಸ್ವೀಟಿ ನನ್ನ ಜೋಡಿ' ಎಂದಾಗುತ್ತದೆ. ಆಕ್ಷನ್ ಕಟ್ ಹೇಳುತ್ತಿರುವವರು ವಿಜಯಲಕ್ಷ್ಮಿ ಸಿಂಗ್. ಚಿತ್ರದ ನಾಯಕ ನಟ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ. ಬುಧವಾರ (ಅ.17) ಸ್ವೀಟಿ ಚಿತ್ರಕ್ಕೆ ಚಾಲನೆ ಕಂಠೀರವ ಸ್ಟುಡಿಯೋದಲ್ಲಿ ನೀಡಲಾಯಿತು.

  'ಸ್ವೀಟಿ' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಒಂದಷ್ಟು ಮಾತುಕತೆಗೂ ಇಳಿದರು.

  ಶಿವಣ್ಣ ಜೊತೆ ಮತ್ತೆ ಅಭಿನಯಿಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಧಿಕಾ, "ಶಿವಣ್ಣ ಜೊತೆ ನಾನು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ (ಅಣ್ಣ ತಂಗಿ, ರಿಷಿ, ತವರಿಗೆ ಬಾ ತಂಗಿ). ಆ ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಈಗ ಸೂಕ್ತವಾದ ಕತೆ ಸಿಕ್ಕಿದರೆ ಮತ್ತೊಮ್ಮೆ ಅಭಿನಯಿಸುತ್ತೇನೆ. ಅದು ತಂಗಿ ಪಾತ್ರವಾದರೂ ಸರಿ" ಎಂದರು.

  ತುಂಬಾ ವರ್ಷಗಳ ಬಳಿಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಬೇಕು. ಸ್ವೀಟಿ ಚಿತ್ರ ಹಿಟ್ ಆದರೆ ನಾನು ಇನ್ನಷ್ಟು ಚಿತ್ರಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದರು. ಅಂದಹಾಗೆ ಸ್ವೀಟಿ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತ ಬಿ.ಎ.ಮಧು ಅವರ ಸಂಭಾಷಣೆ, ನಾಗೇಂದ್ರ ಪ್ರಸಾದ್‌, ಕವಿರಾಜ್, ಯೋಗರಾಜ್ ಭಟ್ ಸಾಹಿತ್ಯ ಇದೆ. ಹಾಡುಗಳು ರೋಮ್ಯಾಂಟಿಕ್ ಆಗಿ ಮೂಡಿ ಬರುತ್ತಿರುವುದರಿಂದ ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Actress Radhika Kumaraswamy lead Kannada film Sweety Nanna Jodi directed by Vijayalakshmi Singh has started rolling on 17th October. Crazy Star Ravichandran has gives clap to the film. Deadly Soma fame Aditya is the hero of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X