For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಕುಮಾರಸ್ವಾಮಿ ತಂದೆ ವಿಧಿವಶ

  |
  ತಂದೆ ಕಳೆದುಕೊಂಡ ದುಃಖದಲ್ಲಿ ರಾಧಿಕಾ ಕುಮಾರಸ್ವಾಮಿ | FILMIBEAT KANNADA

  ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಧಿಕಾ ಕುಮಾರ ಸ್ವಾಮಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಧಿಕಾ ತಂದೆ ದೇವರಾಜ್ ಇಂದು ಬೆಳಗ್ಗೆ(ಮೇ-19) ನಿಧನರಾಗಿದ್ದಾರೆ.

  ಕಿಡ್ನಿ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದ ದೇವರಾಜ್ ಅವರನ್ನು ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ರಾಧಿಕಾ ತಂದೆ ಅವರನ್ನು ಬೆಂಗಳೂರಿನ ಎನ್ ಯು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಇಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

  ದೇವರಾಜ್ ಮೃದೇಹವನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಅಲ್ಲಿಯೆ ಅವರ ಅಂತ್ಯಕ್ರಿಯೆ ನಡೆಯಲಿದೆ. ರಾಧಿಕಾ ತಂದೆ ಮೂಲತಹ ಮಂಗಳೂರಿನವರು. ಅಲ್ಲಿಯೆ ಹುಟ್ಟಿ ಬೆಳೆದವರು, ಉದ್ಯೋಗಿಯಾಗಿದ್ದರು.

  ಕಳೆದ 4 ದಿನಗಳಹಿಂದೆ ರಾಧಿಕಾ ಹುಟ್ಟೂರಾದ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿರುವ ರಾಧಿಕಾ ಮನೆಯಲ್ಲಿ ಕೋಲ ಪೂಜೆ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು. ಆ ಸಂದರ್ಭದಲ್ಲಿ ದಿಢೀರನೆ ಹುಷಾರು ತಪ್ಪಿದ ಕಾರಣ ಆಸ್ಪತ್ರಗೆ ದಾಖಲಿಸಲಾಗಿದೆ. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.

  English summary
  Kannada actress Radhika Kumaraswamy's father Devaraj died today morning. Radha's father Devaraj was suffering from illness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X