For Quick Alerts
  ALLOW NOTIFICATIONS  
  For Daily Alerts

  ಡೇಟಿಂಗ್ ಗಾಗಿ ಯಶ್-ರಾಧಿಕಾ ಪಂಡಿತ್ ಭೇಟಿ ಆಗ್ತಿದ್ದ ರಹಸ್ಯ ಜಾಗ ಯಾವುದು ಗೊತ್ತಾ.?

  |
  ಗೋವಾದಲ್ಲಿ ಹೀಗ್ಯಾಕೆ ಮಾತನಾಡಿದ್ರು ಯಶ್ | YASH | KGF2 | GOA | FILMIBEAT KANNADA

  ಸ್ಯಾಂಡಲ್ ವುಡ್ ನ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್. ಪ್ರೀತಿಸಿ ವಿವಾಹವಾದ ಈ ಜೋಡಿ ಇದೀಗ ಇಬ್ಬರು ಮಕ್ಕಳ ತಂದೆ-ತಾಯಿ.

  ವರ್ಷಗಳ ಕಾಲ ಪ್ರೀತಿ ಮಾಡಿದ್ದರೂ, ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಮಾತ್ರ ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗಿರಲಿಲ್ಲ. ಪ್ರೇಮದ ಅಮಲಿನಲ್ಲಿದ್ದರೂ, ಯಶ್-ರಾಧಿಕಾ ಪಂಡಿತ್ ಜೊತೆ ಜೊತೆಯಾಗಿ ಓಡಾಡಿದ್ದು ಗಾಳಿ ಸುದ್ದಿಯಾಗಿ ಯಾರ ಕಿವಿಗೂ ಬಿದ್ದಿರಲಿಲ್ಲ.

  ತಮ್ಮ ಡೇಟಿಂಗ್ ಬಗ್ಗೆ ಯಶ್ ಮತ್ತು ರಾಧಿಕಾ ಪಂಡಿತ್ ಹೇಗೆ ಇಷ್ಟೊಂದು ಗೌಪ್ಯತೆ ಕಾಪಾಡಿಕೊಂಡಿದ್ದರು ಅಂದ್ರೆ, ಕರ್ನಾಟಕದಲ್ಲಿ ಅವರಿಬ್ಬರು ಡೇಟಿಂಗ್ ಮಾಡುತ್ತಲೇ ಇರಲಿಲ್ಲ. ಅವರ ಡೇಟಿಂಗ್, ಹ್ಯಾಂಗ್ ಔಟ್ ಸ್ಪಾಟ್ ಬೇರೇನೇ ಆಗಿತ್ತು.! ಯಾವುದದು ಅಂತೀರಾ.?

  ಫೇವರೇಟ್ ಡೇಟಿಂಗ್ ಸ್ಪಾಟ್.!

  ಫೇವರೇಟ್ ಡೇಟಿಂಗ್ ಸ್ಪಾಟ್.!

  ನಟ ಯಶ್ ಮತ್ತು ರಾಧಿಕಾ ಪಂಡಿತ್ ಹೆಚ್ಚಾಗಿ ಗೋವಾದಲ್ಲಿ ಡೇಟಿಂಗ್ ಮಾಡಿದ್ದರು. ಗೋವಾದ ಕಡಲ ತೀರದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಪ್ರೀತಿಯ ಅಲೆಯಲ್ಲಿ ತೇಲಾಡಿದ್ದು, ಕರ್ನಾಟಕದವರಿಗೆ ಅದರಲ್ಲೂ ಗಾಂಧಿನಗರದ ಗಾಸಿಪ್ ಪಂಡಿತರಿಗೆ ಅಷ್ಟಾಗಿ ಗೊತ್ತಾಗಿಲ್ಲ.

  ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ

  ಗೋವಾ ಕನೆಕ್ಷನ್.!

  ಗೋವಾ ಕನೆಕ್ಷನ್.!

  ರಾಧಿಕಾ ಪಂಡಿತ್ ತಾಯಿಯ ಮೂಲ ಗೋವಾ. ಹೀಗಾಗಿ, ಗೋವಾ ಅಂದ್ರೆ ರಾಧಿಕಾ ಪಂಡಿತ್ ಗೆ ಅಚ್ಚುಮೆಚ್ಚು. ಯಶ್ ಮತ್ತು ರಾಧಿಕಾ ಪಂಡಿತ್ ಸವಿ ನೆನಪುಗಳು ಗೋವಾದಲ್ಲೇ ಹೆಚ್ಚಾಗಿ ಇದೆ. ಹೀಗಾಗಿ, ಗೋವಾದಲ್ಲೇ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ 2016 ರಲ್ಲಿ ನಡೆದಿತ್ತು.

  ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?

  ಗೋವಾ ಬಗ್ಗೆ ಮತನಾಡಿದ ಯಶ್

  ಗೋವಾ ಬಗ್ಗೆ ಮತನಾಡಿದ ಯಶ್

  ''ನನಗೆ ಗೋವಾ ಕನೆಕ್ಷನ್ ಇದೆ. ಐ ಲವ್ ಗೋವಾ. ನಾನು ಆಗಾಗ ಗೋವಾಗೆ ಬರುತ್ತಿರುತ್ತೇನೆ. ಗೋವಾದ ಜನ ನನಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗೆಲ್ಲ ಕನ್ನಡಿಗರನ್ನೂ ಭೇಟಿ ಮಾಡುತ್ತೇನೆ'' ಎಂದು ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಸಮಾರಂಭವೊಂದರಲ್ಲಿ ನಟ ಯಶ್ ಹೇಳಿದ್ದಾರೆ.

  ಡೇಟಿಂಗ್ ಬಗ್ಗೆ ಯಶ್ ಮಾತು

  ಡೇಟಿಂಗ್ ಬಗ್ಗೆ ಯಶ್ ಮಾತು

  ''ನಾನು ಡೇಟಿಂಗ್ ಮಾಡಬೇಕಾದ್ರೆ, ಗೋವಾಗೆ ಜಾಸ್ತಿ ಬರುತ್ತಿದ್ವಿ. ಗೋವಾದಲ್ಲಿ ನಾನು ಮತ್ತು ರಾಧಿಕಾ ಪಂಡಿತ್ ಹೆಚ್ಚು ಸಮಯ ಕಳೆದಿದ್ವಿ. ವರ್ಷಕ್ಕೆ ಏನಿಲ್ಲ ಅಂದ್ರೂ ನಾಲ್ಕು ಬಾರಿ ಗೋವಾಗೆ ಬರ್ತಿದ್ವಿ'' ಎಂದು ಇದೇ ಸಮಯದಲ್ಲಿ ಯಶ್ ಬಾಯ್ಬಿಟ್ಟಿದ್ದಾರೆ. ಜೊತೆಗೆ ಕೊಂಕಣಿ ಹಾಡನ್ನೂ ಯಶ್ ಹಾಡಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್ ಮಾತೃಭಾಷೆ ಕೂಡ ಕೊಂಕಣಿ ಅನ್ನೋದು ನಿಮ್ಮ ಗಮನದಲ್ಲಿರಲಿ.

  ಯಶ್ ಬಿಜಿ

  ಯಶ್ ಬಿಜಿ

  ಅಂದ್ಹಾಗೆ, 'ಕೆ.ಜಿ.ಎಫ್-2' ಚಿತ್ರದ ಶೂಟಿಂಗ್ ನಲ್ಲಿ ಸದ್ಯ ಯಶ್ ಬಿಜಿಯಿದ್ದಾರೆ. ಅತ್ತ ರಾಧಿಕಾ ಪಂಡಿತ್ ಇಬ್ಬರು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿದ್ದಾರೆ.

  English summary
  Kannada Actor Yash revealed that his and Radhika Pandit's dating spot was Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X