ಎಲ್ಲೆಡೆ ರಾಧಿಕಾ ಪಂಡಿತ್ ಕದ್ದಿರುವ ವಿಚಾರದ್ದೆ ಸುದ್ದಿ

By Pavithra

ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ. ರಾಧಿಕಾ ಒಂದು ವಸ್ತುವನ್ನ ಕದ್ದು ತಂದಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಯಶ್ ಅವರನ್ನು ಭೇಟಿ ಮಾಡಲು ರಾಧಿಕಾ 'ಕೆಜಿಎಫ್ ಸೆಟ್' ಗೆ ಹೋಗಿದ್ದರು. ಅಲ್ಲಿಂದ ಸ್ಪೆಷಲ್ ಆಗಿ ಕಣ್ಣಿಗೆ ಕಂಡ ಒಂದು ವಸ್ತುವನ್ನ ತೆಗೆದುಕೊಂಡು ಬಂದಿದ್ದಾರೆ.

ರಾಧಿಕಾ ಕೆಜಿಎಫ್ ಸೆಟ್ ನಲ್ಲಿದ್ದ ಹಳದಿ ಬಣ್ಣ ಸನ್ ಗ್ಲಾಸ್ ಅನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಬಂದಿದ್ದಾರೆ. ಅದನ್ನು ಹಾಕಿಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಫೋಟೋ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಯಾರಿಗೂ ತಿಳಿಯದಂತೆ ಇದನ್ನ ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ.

ಫೋಟೋ ನೋಡಿರುವ ಅಭಿಮಾನಿಗಳು ರಾಧಿಕಾ ಅವರ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನ ಕಮೆಂಟ್ ಮೂಲಕ ತಿಳಿಸಿದ್ದಾರೆ. ಇನ್ನೂ ಕೆಲವರು ಫೋಟೋಗೆ ಲೈಕ್ ಕೊಟ್ಟು ಕೆಜಿಎಫ್ ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.

Radhika Pandit has taken Sun Glass from KGF shooting location

ಕೆಜಿಎಫ್ ಸೆಟ್ ಗೆ ಹೋದಾಗ ನೀವಾದ್ರು ನಿರ್ದೇಶಕರಿಗೆ ಹೇಳಿ ಬೇಗ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಅದರ ಜೊತೆಯಲ್ಲಿ ಯಶ್ ಅಣ್ಣನಿಗೂ ಚಿತ್ರ ರಿಲೀಸ್ ಮಾಡಿಸುವಂತೆ ತಿಳಿಸಿ ಎಂದಿದ್ದಾರೆ.

ಒಟ್ಟಾರೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ರಾಧಿಕಾ ಸನ್ ಗ್ಲಾಸ್ ತೆಗೆದುಕೊಂಡು ಬಂದಿರುವ ಸುದ್ದಿಯದ್ದೇ ಚರ್ಚೆ ಆಗುತ್ತದೆ. ಏನೇ ಆಗಲಿ ಹಳದಿ ಬಣ್ಣ ತುಂಬಾ ಅಪರೂಪ ಎನ್ನಿಸುವ ಗ್ಲಾಸ್ ನಲ್ಲಿ ರಾಧಿಕಾ ಸಖತ್ತಾಗಿಯೇ ಕಾಣಿಸುತ್ತಾರೆ.

More from Filmibeat

English summary
Take a look at a new photo posted by Kannada Actress Radhika Pandit on her Facebook page. Radhika Pandit wore Sunglasses, taken from KGF shooting location.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X