For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗನಿಗೆ ಹೆಸರು ಹುಡುಕಿದ ರಾಧಿಕಾ-ಯಶ್ ದಂಪತಿ

  |

  ಇಬ್ಬರು ಮುದ್ದು ಮಕ್ಕಳ ಅಮ್ಮ, ನಟಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಸಂತೋಷಮಯ ಸಮಯವನ್ನು ಕಳೆಯುತ್ತಿದ್ದಾರೆ. ಮಕ್ಕಳ ಚಿತ್ರಗಳನ್ನು, ವಿಡಿಯೋಗಳನ್ನು ಅಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ ರಾಧಿಕಾ ಪಂಡಿತ್.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಮಗ ಹುಟ್ಟಿ ಇದೀಗ ಹತ್ತು ತಿಂಗಳಾಗಿದ್ದು, 'ಮಗನಿಗೆ ಏನು ಹೆಸರು ಇಡಲಿದ್ದೀರಿ?' ಎಂದು ರಾಧಿಕಾ-ಯಶ್ ಅನ್ನು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಏನನ್ನೂ ಹೇಳಿರಲಿಲ್ಲ ಇಬ್ಬರೂ.

  ಫೋಟೋ ವೈರಲ್: ಗಣೇಶನ ಅವತಾರದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಪುತ್ರಫೋಟೋ ವೈರಲ್: ಗಣೇಶನ ಅವತಾರದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಪುತ್ರ

  ಇದೀಗ ಸಿಹಿ ಸುದ್ದಿಯೊಂದನ್ನು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮುದ್ದು ಮಗನಿಗೆ ಹೆಸರಿಡಲಿದ್ದಾರೆ ರಾಧಿಕಾ ಮತ್ತು ಯಶ್ ದಂಪತಿ.

  ಮಗನಿಗೆ ಯಾವ ಹೆಸರು ಇಡಲಿದ್ದಾರೆ?

  ಮಗನಿಗೆ ಯಾವ ಹೆಸರು ಇಡಲಿದ್ದಾರೆ?

  ಮೊದಲ ಮಗಳಿಗೆ 'ಐರಾ' ಎಂದು ಭಿನ್ನವಾದ ಹೆಸರಿಟ್ಟಿರುವ ರಾಧಿಕಾ-ಯಶ್. ಇದೀಗ ಮಗನಿಗೆ ಯಾವ ಹೆಸರು ಇಡಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಅಭಿಮಾನಿಗಳಿಗೆ ಇದೆ.

  ಮಗನಿಗೆ ಮುದ್ದಾದ ಹೆಸರು ಹುಡುಕಿದ್ದೇವೆ: ರಾಧಿಕಾ

  ಮಗನಿಗೆ ಮುದ್ದಾದ ಹೆಸರು ಹುಡುಕಿದ್ದೇವೆ: ರಾಧಿಕಾ

  ಈ ಬಗ್ಗೆ ಪೋಸ್ಟ್ ಹಾಕಿರುವ ರಾಧಿಕಾ, 'ನನ್ನ ಪ್ರತಿದಿನ ಮುಂಜಾನೆಯ ಖುಷಿಯ ಔಷಧ' ಎಂದು ಮಗನ ಚಿತ್ರ ಹಾಕಿದ್ದಾರೆ. ಜೊತೆಗೆ 'ಮಗನಿಗೆ ಮುದ್ದಾದ ಹೆಸರು ಹುಡುಕಿದ್ದೇವೆ. ಕೆಲವೇ ದಿನಗಳಲ್ಲಿ ಅದನ್ನು ಬಹಿರಂಗಪಡಿಸುತ್ತೇವೆ ಎಂದಿದ್ದಾರೆ.

  ಮಗನ ಹೆಸರು ಆಯುಷ್ ಅಲ್ಲ: ರಾಧಿಕಾ

  ಮಗನ ಹೆಸರು ಆಯುಷ್ ಅಲ್ಲ: ರಾಧಿಕಾ

  ತಮ್ಮ ಪೋಸ್ಟ್‌ನಲ್ಲಿ ಒಂದು ಸೂಚನೆಯನ್ನೂ ಕೊಟ್ಟಿರುವ ರಾಧಿಕಾ, 'ಮಗನ ಹೆಸರು ಆಯುಶ್ ಅಲ್ಲ' ಎಂದಿದ್ದಾರೆ. ಆಯುಷ್ ಎಂದು ಹೆಸರಿಡಿ ಎಂದು ಹಲವಾರು ಅಭಿಮಾನಿಗಳು ಸಲಹೆ ನೀಡಿದ್ದರು. ಆಯುಷ್ ಎಂದು ಹೆಸರು ಇಡಲಾಗಿದೆ ಎಂದು ಸಹ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ ರಾಧಿಕಾ ಹೇಳಿರುವಂತೆ ಮಗುವಿನ ಹೆಸರು ಆಯುಷ್ ಅಲ್ಲವಂತೆ.

  ಮಗನಿಗೆ ಯಾವ ಹೆಸರಿಡಲಿದ್ದಾರೆಂಬ ಕುತೂಹಲ

  ಮಗನಿಗೆ ಯಾವ ಹೆಸರಿಡಲಿದ್ದಾರೆಂಬ ಕುತೂಹಲ

  ಮಗಳಿಗೆ ಐರಾ ಎಂದು ಮುದ್ದಾದ ಹೆಸರಿಟ್ಟಿದ್ದ ರಾಧಿಕಾ-ಯಶ್ ದಂಪತಿ ಮಗನಿಗೆ ಯಾವ ಹೆಸರಿಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮಗನಿಗೆ ಯಾವ ಹೆಸರಿಡುತ್ತೀರಿ ಎಂದು ಅಭಿಮಾನಿಗಳು ಯಾವಾಗಲೂ ಪ್ರಶ್ನೆ ಕೇಳುತ್ತಿದ್ದರಂತೆ ರಾಧಿಕಾಗೆ. ಇದೀಗ ಕೆಲವೇ ದಿನಗಳಲ್ಲಿ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ ರಾಧಿಕಾ.

  English summary
  Actress Radhika Pandit said they selected a cute name for her 10 months old baby boy. Radhika's daughter name is Ayra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X