For Quick Alerts
  ALLOW NOTIFICATIONS  
  For Daily Alerts

  ವೈಯಕ್ತಿಕ ಛಾಯಾಗ್ರಾಹಕ ಬೇಕು ಎಂದ ರಾಧಿಕಾಗೆ ಯಶ್ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಮಕ್ಕಳ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಇದೀಗ ರಾಧಿಕಾ ಸೆಲ್ಫಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

  ಈ ಸಲ್ಪಿಗಾಗಿ ಸಾಕಷ್ಟು ಪ್ರಯತ್ನದ ಬಳಿಕ ಈ ಫೋಟೋ ಸಿಕ್ಕಿದೆ. ಆದರೂ ನಾನು ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ಹಾಗಾಗಿ ಛಾಯಾಗ್ರಾಹಕ ಬೇಕು ಎಂದಿದ್ದಾರೆ. ರಾಧಿಕಾ ಮಾತಿಗೆ ಪತಿ ಯಶ್ ಸಾಮಾಜಿಕ ಜಾಲತಾಣದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ರಾಧಿಕಾ ಶೇರ್ ಮಾಡಿರುವ ಫೋಟೋಕೆಳಗೆ ಯಶ್ ನಾಜೂಕಾದ ಉತ್ತರ ನೀಡಿದ್ದಾರೆ. ಮುಂದೆ ಓದಿ..

  ಸೆಲ್ಫಿ ಪೋಸ್ಟ್ ಮಾಡಿ ರಾಧಿಕಾ ಹೇಳಿದ್ದೇನು?

  ಸೆಲ್ಫಿ ಪೋಸ್ಟ್ ಮಾಡಿ ರಾಧಿಕಾ ಹೇಳಿದ್ದೇನು?

  ಇತ್ತೀಚಿಗೆ ರಾಧಿಕಾ ಪಂಡಿತ್ ಪರ್ಫೆಕ್ಟ್ ಸೆಲ್ಫಿಗಾಗಿ ಪೋಸ್ ನೀಡುತ್ತಾ ಕಷ್ಟಪಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕೊನೆಗೂ ರಾಧಿಕಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, "ಸಾಕಷ್ಟು ಪ್ರಯತ್ನದ ಬಳಿಕ ಈ ಸೆಲ್ಫಿ ತೆಗೆದಿದ್ದೇನೆ. ಹಿಂದೆ ಬಾತುಕೋಳಿಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆ. ಆದರೆ ಇದರಲ್ಲಿ ನಾನು ಸ್ಪಷ್ಟವಾಗಿ ಕಾಣಿಸುತ್ತಿಲ್ಲ" ಎಂದಿದ್ದಾರೆ. ಅಷ್ಟೆಯಲ್ಲ ಇನ್ನು ಬರೆದುಕೊಂಡಿರುವ ರಾಧಿಕಾ, 'ಅದಕ್ಕಾಗಿಯೇ ನನಗೆ ವೈಯಕ್ತಿಕ ಛಾಯಾಗ್ರಾಹಕ ಬೇಕಾಗಿದ್ದಾರೆ. (ಪತಿ ಎಂದು ಭಾವಿಸಿ ಓದಿ)' ಎಂದಿದ್ದಾರೆ.

  ಯಶ್ ಪ್ರತಿಕ್ರಿಯೆ

  ಯಶ್ ಪ್ರತಿಕ್ರಿಯೆ

  ರಾಧಿಕಾ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಮತ್ತು ಲೈಕ್ಸ್ ಹರಿದು ಬರುತ್ತಿವೆ. ಈ ಪೋಸ್ಟ್ ಗೆ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಒತ್ತಾಯಪೂರ್ವಕವಾಗಿ ಪ್ರತಿ ಗಂಡಂದಿರೂ ಫೋಟೋಗ್ರಾಫರ್ ಗಳೇ. ಎಲ್ಲಾ ಗಂಡಂದಿರು ಮತ್ತು ಬಾಯ್ ಫ್ರೆಂಡ್ ಗಳು ಇದನ್ನು ಒಪ್ಪುತ್ತಾರೆ ಎಂದು ಭಾವಿಸಿದ್ದೇನೆ" ಎಂದು ರಾಧಿಕಾಗೆ ಉತ್ತರಿಸಿದ್ದಾರೆ.

  ಮಗನಿಗೆ ಸರಳವಾಗಿ ನಾಮಕರಣ ಮಾಡಿದ ದಂಪತಿ

  ಮಗನಿಗೆ ಸರಳವಾಗಿ ನಾಮಕರಣ ಮಾಡಿದ ದಂಪತಿ

  ಯಶ್ ಮತ್ತು ರಾಧಿಕಾ ದಂಪತಿ ಇತ್ತೀಚಿಗಷ್ಟೆ ಎರಡೇ ಮಗುವಿನ ನಾಮಕರಣ ಮಾಡಿ ಮುಗಿಸಿದ್ದಾರೆ. ಮುದ್ದು ಮಗನ ನಾಮಕರಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಗನಿಗೆ ಯಥರ್ವ ಯಶ್ ಎಂದು ನಾಮಕರಣ ಮಾಡಿದ್ದಾರೆ. ಹಾಸನದ ಫಾರ್ಮ್ ಹೌಸ್ ನಲ್ಲಿ ಮಗನ ನಾಮಕರಣ ಮಾಡಿದ್ದ ಯಶ್ ಕುಟುಂಬ, ಕೆಲವು ದಿನಗಳು ಅಲ್ಲಿಯೇ ಸಮಯ ಕಳೆದಿದ್ದಾರೆ.

  ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
  'ಕೆಜಿಎಫ್-2' ಚಿತ್ರೀಕರಣ ಪ್ರಾರಂಭ

  'ಕೆಜಿಎಫ್-2' ಚಿತ್ರೀಕರಣ ಪ್ರಾರಂಭ

  ಸಿನಿಮಾ ವಿಚಾರಕ್ಕೆ ಬರುವುದಾದರೆ, ಯಶ್ 'ಕೆಜಿಎಫ್-2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ 'ಕೆಜಿಎಫ್-2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸದ್ಯದಲ್ಲೇ ಯಶ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  English summary
  Actress Radhika Pandit shares a selfie photo and says need a personal photographer. Yash reaction to Radhika Pandit Post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X