For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಐರಾ ಭಜನೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್

  |

  ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಮುದ್ದು ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಯಶ್ ಪುತ್ರ ಯಥರ್ವ್ 'ಜಾನಿ ಜಾನಿ ಎಸ್ ಪಪ್ಪಾ' ಕಲಿಯುತ್ತಿದ್ರೆ ಮಗಳು ಐರಾ ಭಜನೆ ಕಲಿಯುತ್ತಿದ್ದಾಳೆ.

  ಹೌದು, ಐರಾ ಯಶ್ ಭಜನೆ ಮಾಡುತ್ತಿರುವ ಮುದ್ದಾದ ವಿಡಿಯೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಅಂದ್ಹಾಗೆ ಐರಾ 'ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ...' ಕನ್ನಡದ ಭಜನೆಯನ್ನು ಹಾಡುತ್ತಿದ್ದಾಳೆ. ಈ ವಿಡಿಯೋ ಜೂನಲ್ಲಿ ಮಾಡಿರುವುದಂತೆ. ಈಗ ಮತ್ತಷ್ಟು ಉತ್ತಮವಾಗಿ ಹಾಡುತ್ತಾಳೆ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

  ವಿಡಿಯೋ ವೈರಲ್: ಮುದ್ದು ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ನಟ ಯಶ್

  ಐರಾ ಕೈಯಲ್ಲಿ ಬೊಂಬೆ ಹಿಡಿದು ಹಾಡುತ್ತಿರುವ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ. ಈ ಬಗ್ಗೆ ನಟಿ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 'ಈಗ ಅವಳು ಉತ್ತಮವಾಗಿ ಹಾಡುತ್ತಾಳೆ. ಈ ವಿಡಿಯೋವನ್ನು ಜೂನ್ ನಲ್ಲಿ ಮಾಡಲಾಗಿದೆ. ಲೆಜೆಂಡ್ ಪಂಡಿತ್ ಭೀಮಸೇನ ಜೋಷಿ ಅವರ ಪುಟ್ಟ ಅಭಿಮಾನಿ ನಮ್ಮ ಮನೆಯಲ್ಲಿ.' ಎಂದು ಹೇಳಿದ್ದಾರೆ.

  'ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ...' ಹಾಡಿನ ಸಾಲುಗಳನ್ನು ಬರೆದು ನವರಾತ್ರಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ 'ಈ ಕ್ರೆಡಿಟ್ ನಾನು ತೆಗೆದುಕೊಳ್ಳುವುದಿಲ್ಲ. ಇದು ಸಂಪೂರ್ಣ ನನ್ನ ಅಪ್ಪನ ತರಬೇತಿ' ಎಂದು ಹೇಳಿದ್ದಾರೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ರಾಧಿಕಾ ಪಂಡಿತ್ ಮದ್ದು ಮಕ್ಕಳ ಫೋಟೋ ಮತ್ತು ವಿಡಿಯೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ರಾಧಿಕಾ ಸದ್ಯ ಸಿನಿಮಾದಿಂದ ದೂರ ಇದ್ದು ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಅಭಿಮಾನಿಗಳ ಬೇಡಿಕೆಯಂತೆ ಸದ್ಯದಲ್ಲೇ ಮತ್ತೆ ಬಣ್ಣಹಚ್ಚುವ ಸಾಧ್ಯತೆಯೂ ಇದೆ.

  English summary
  Actress Radhika Pandit shares adorable video of her daughter singing. She wishes happy Navaratri to all.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X