For Quick Alerts
  ALLOW NOTIFICATIONS  
  For Daily Alerts

  ಊಟಕ್ಕಿಂತ ಯಥರ್ವನಿಗೆ ಅಪ್ಪನ ಮೂಗೇ ರುಚಿ; ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಹಾಗೆ ಇಬ್ಬರು ಮುದ್ದಾದ ಮಕ್ಕಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್. ಐರಾ ಮತ್ತು ಯಥರ್ವ ಅಕ್ಕ-ತಮ್ಮನ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ನಟಿ ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಮಗನಿಗೆ ಹೆದರಿ ಮೂಗು ಮುಚ್ಚಿಕೊಂಡ ಯಶ್

  ರಾಧಿಕಾ ಶೇರ್ ಮಾಡುವ ವಿಡಿಯೋಗೆ ಅಭಿಮಾನಿಗಳಿಂದ, ಸ್ನೇಹಿತರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದೀಗ ರಾಧಿಕಾ ಮಗ ಯಥರ್ವನ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಪುಟ್ಟ ಪೋರ ಯಥರ್ವ ತಂದೆ ಯಶ್ ಜೊತೆ ಆಟವಾಡುತ್ತಿರುವ ವಿಡಿಯೋ ಇದಾಗಿದೆ. ಯಶ್ ಎದೆಯ ಮೇಲೆ ಕುಳಿತು ಯಥರ್ವ ಮೂಗನ್ನು ಕಚ್ಚುತ್ತಿದ್ದಾರೆ. ಯಥರ್ವನ ತುಂಟಾಟಕ್ಕೆ ಯಶ್ ಮೂಗು ಮುಚ್ಚಿಕೊಂಡಿದ್ದಾರೆ, ಅಲ್ಲದೆ ಮಗನಿಗೆ ನೀನು ಜೋಂಬಿನಾ ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ನಟಿ ರಾಧಿಕಾ ಪಂಡಿತ್ ಯಥರ್ವ ಮತ್ತು ಯಶ್ ಆಟವಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ಊಟಕ್ಕಿಂತ ತಂದೆಯ ಮೂಗು ಹೆಚ್ಚು ರುಚಿಯಾದಾಗ" ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಇತ್ತೀಚಿಗಷ್ಟೆ ರಾಧಿಕಾ ಮಗಳು ಐರಾ ಫೋಟೋವನ್ನು ಶೇರ್ ಮಾಡಿದ್ದರು. ಹೊಸ ಮನೆಗೆ ಕಾಲಿಟ್ಟಿರುವ ರಾಧಿಕಾ-ಯಶ್ ದಂಪತಿ ಹೊಸ ಮನೆಯ ಟೆರಾಸ್ ನಿಂದ ಮಗಳ ಜೊತೆ ಫೋಟೋ ಹಂಚಿಕೊಂಡಿದ್ದರು. ಸೆಲ್ಫಿಯಲ್ಲಿ ಮಗಳು ಐರಾ ಎಲ್ಲರಿಗೂ ಹೆಲೋ ಹೇಳುತ್ತಿದ್ದ ಪೋಟೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಧಿಕಾ ಆಗಾಗ ಮುದ್ದಾದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸುತ್ತಿರುತ್ತಾರೆ.

  ಸಿನಿಮಾದಿಂದ ದೂರ ಇದ್ದರು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನಾ ಹಾವಳಿ ಹೆಚ್ಚಿದ್ದ ಸಮಯದಲ್ಲಿ ರಾಧಿಕಾ ತನ್ನ ಇಬ್ಬರು ಮಕ್ಕಳ ಜೊತೆ ಬೀಚ್ ನಲ್ಲಿ ಕುಳಿತಿರುವ ಫೋಟೋ ಶೇರ್ ಮಾಡಿ ಧೈರ್ಯದ ಮಾತುಗಳನ್ನು ಹೇಳಿದ್ದರು.

  'ಇದು ತುಂಬ ಕಷ್ಟದ ಸಮಯ. ನಾವೆಲ್ಲರೂ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವು ಸಂಕಟಕ್ಕೆ ಸಾಕ್ಷಿಯಾಗಿದ್ದೇವೆ. ನಾವು ಭಯದಲ್ಲಿ ಜೀವನ ನಡೆಸುತ್ತಿದ್ದೇವೆ. ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಮುಂದೆ ಏನು ಎನ್ನುವುದು ತಿಳಿದಿಲ್ಲ.' 'ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಹೋರಾಡುತ್ತೇವೆ, ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ' ಎಂದು ರಾಧಿಕಾ ಪಂಡಿತ್ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು.

  ಇನ್ನು ಯಶ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಕೆಜಿಎಫ್-2 ಚಿತ್ರೀಕರಣ ಮುಗಿಸಿ ಬಿಡುಗಡೆ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪುಟ್ಟ ಟೀಸರ್ ಸಂಚಲನ ಸೃಷ್ಟಿಮಾಡಿದೆ. ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲಾಗಿತ್ತು. ಬಳಿಕ ಚಿತ್ರದಿಂದ ಯಾವುದೇ ಅಪ್ ಡೇಟ್ ಹೊರಬಿದ್ದಿಲ್ಲ. ಅಭಿಮಾನಿಗಳು ಕೆಜಿಫ್-2 ಅಪ್ ಡೇಟ್ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಚಿತ್ರತಂಡ ಇತ್ತೀಚಿಗಷ್ಟೆ ಬಹಿರಂಗ ಪಡಿಸಿತ್ತು. ಆದರೆ ಇದುವರೆಗೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

  ಇನ್ನು ಕೆಜಿಎಫ್-2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿ ಮನೆಮಾಡಿದೆ. ಮೂಲಗಳ ಪ್ರಕಾರ ಯಶ್ 'ಮಫ್ತಿ' ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನರ್ತನ್ ಕಥೆ ಕೂಡ ಸಿದ್ಧಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಪರಭಾಷಾ ನಿರ್ದೇಶಕರ ಜೊತೆಯೂ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದುವರೆಯೂ ಯಸ್ ಕಡೆಯಿಂದ ಹೊಸ ಸಿನಿಮಾದ ಬದ್ದೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  English summary
  Kannada Actress Radhika Pandit shares cute video of her son Yatharv playing with father Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X