For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾಗೆ ಇಂದು ವಿಶೇಷ ದಿನ: ವಿಡಿಯೋ ಶೇರ್ ಮಾಡಿ ರಾಕಿಂಗ್ ಸ್ಟಾರ್ ಪತ್ನಿ ಹೇಳಿದ್ದೇನು?

  |

  ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಅವರಿಗೆ ಇಂದು (ಆಗಸ್ಟ್ 12) ತುಂಬಾ ವಿಶೇಷವಾದ ದಿನ. ಚಂದನವನದ ಈ ಸುಂದರ ದಂಪತಿ ಈಗ ಇಬ್ಬರೂ ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ. ಐರಾ ಮತ್ತು ಯಥರ್ವ್ ಇಬ್ಬರೂ ಯಶ್-ರಾಧಿಕಾ ಸಂತಸ, ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಮುದ್ದು ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ರಾಧಿಕಾ-ಯಶ್ ಅವರಿಗೆ ಇಂದು ಮರೆಯಲಾಗದ ದಿನ.

  ಅಂದಹಾಗೆ ಇವತ್ತು ಏನು ವಿಶೇಷ ಅಂತ ಯೋಚಿಸುತ್ತಿದ್ದೀರಾ? ಇವತ್ತಿಗೆ ಸರಿಯಾಗಿ 5 ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಬಹುಕಾಲದ ಗೆಳತಿ, ಪ್ರೇಯಸಿ ರಾಧಿಕಾಗೆ ಉಂಗುರ ತೊಡಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಇಂದು ಆಗಸ್ಟ್ 12 ರಾಧಿಕಾ ಮತ್ತು ಯಶ್ ನಿಶ್ಚಿತಾರ್ಥದ ವಾರ್ಷಿಕೋತ್ಸವದ ದಿನ. ಇದೇ ದಿನ 5 ವರ್ಷಗಳ ಹಿಂದೆ 2016ರಲ್ಲಿ ಯಶ್ ಮತ್ತು ರಾಧಿಕಾ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರ ನಿಶ್ಚಿತಾರ್ಥ ಸಮಾರಂಭದಲ್ಲಿ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಮಾತ್ರ ಭಾಗಿಯಾಗಿದ್ದರು.

  2016ರಲ್ಲಿ ಗೋವಾದಲ್ಲಿ ನಿಶ್ಚಿತಾರ್ಥ

  2016ರಲ್ಲಿ ಗೋವಾದಲ್ಲಿ ನಿಶ್ಚಿತಾರ್ಥ

  2016 ಆಗಸ್ಟ್ 12, ಯಶ್ ಮತ್ತು ರಾಧಿಕಾ ಪ್ರೀತಿಯ ಬಂಧಕ್ಕೆ ನಿಶ್ಚಿತಾರ್ಥದ ಮುದ್ರೆ ಬೀಳುವ ಮೂಲಕ ಅಧಿಕೃತವಾಗಿ ಇಬ್ಬರು ಎಂಗೇಜ್ ಆಗಿದ್ದರು. ಗೋವಾದಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಕೆಲವೇ ಗಣ್ಯರು ಮತ್ತು ಕುಟುಂಬದವರು ಮಾತ್ರ ಹಾಜರಿದ್ದರು.

  ಊಟಕ್ಕಿಂತ ಯಥರ್ವನಿಗೆ ಅಪ್ಪನ ಮೂಗೇ ರುಚಿ; ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾಊಟಕ್ಕಿಂತ ಯಥರ್ವನಿಗೆ ಅಪ್ಪನ ಮೂಗೇ ರುಚಿ; ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ

  ವಿಡಿಯೋ ಹಂಚಿಕೊಂಡ ರಾಧಿಕಾ

  ವಿಡಿಯೋ ಹಂಚಿಕೊಂಡ ರಾಧಿಕಾ

  ನಾನು ಈ ಅದ್ಭುತ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಇಂದಿಗೆ ಸರಿಯಾಗಿ 5 ವರ್ಷ. ನನ್ನ ನೆಚ್ಚಿನ ಸ್ಥಳದಲ್ಲಿ ನನ್ನ ನೆಚ್ಚಿನ ಜನರು ಇದ್ದಾರೆ. ನನಗೆ ಈ ದಿನ ಇನ್ನೂ ನೆನಪಿದೆ. ನಿನ್ನೆ ಮೊನ್ನೆಯಂತೆ. ಆ ಪರಿಪೂರ್ಣ ದಿನವನ್ನು ಮತ್ತೆ ಮೆಲುಕು ಹಾಕಲು ಈ ವಿಡಿಯೋವನ್ನು ಶೇರ್ ಮಾಡಿದೆ" ಎಂದು ಬರೆದುಕೊಂಡು ನಿಶ್ಚಿತಾರ್ಥದ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಅಭಿಮಾನಿಗಳಿಂದ ಶುಭಾಶಯ

  ಅಭಿಮಾನಿಗಳಿಂದ ಶುಭಾಶಯ

  ರಾಧಿಕಾ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅದ್ಭುತ ಜೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸುತ್ತಿರುತ್ತಾರೆ.

  ಯಶ್ ಹೊಸ ಮನೆ ಗೃಹಪ್ರವೇಶ; ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿಯಶ್ ಹೊಸ ಮನೆ ಗೃಹಪ್ರವೇಶ; ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿ

  2016, ಡಿಸೆಂಬರ್ ನಲ್ಲಿ ಮದುವೆ

  ನಿಶ್ಚಿತಾರ್ಥ ನಡೆದು ನಾಲ್ಕು ತಿಂಗಳ ಬಳಿಕ ಅಂದರೆ ಡಿಸೆಂಬರ್ ನಲ್ಲಿ ಯಶ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಐದು ವರ್ಷಗಳು ಇಬ್ಬರು ಸುಂದರ, ಸಂತೋಷದ ದಾಂಪತ್ಯ ನಡೆಸುತ್ತಿದ್ದಾರೆ.

  2016, ಡಿಸೆಂಬರ್ ನಲ್ಲಿ ಮದುವೆ

  2016, ಡಿಸೆಂಬರ್ ನಲ್ಲಿ ಮದುವೆ

  ನಿಶ್ಚಿತಾರ್ಥ ನಡೆದು ನಾಲ್ಕು ತಿಂಗಳ ಬಳಿಕ ಅಂದರೆ ಡಿಸೆಂಬರ್ ನಲ್ಲಿ ಯಶ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಐದು ವರ್ಷಗಳು ಇಬ್ಬರು ಸುಂದರ, ಸಂತೋಷದ ದಾಂಪತ್ಯ ನಡೆಸುತ್ತಿದ್ದಾರೆ.

  ಯಶ್-ರಾಧಿಕಾ ಸಿನಿಮಾಗಳು

  ಯಶ್-ರಾಧಿಕಾ ಸಿನಿಮಾಗಳು

  ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಧಿಕಾ ಮಗಳು ಐರಾಗೆ ಜನ್ಮ ನೀಡಿದ ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಇನ್ನು ಯಶ್ ಸದ್ಯ ಕೆಜಿಎಫ್-2 ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಕೆಜಿಎಫ್-2 ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಮತ್ತು ರಾಧಿಕಾ ಯಾವಾಗ ಬಣ್ಣದ ಲೋಕಕ್ಕೆ ವಾಪಾಸ್ ಆಗ್ತಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  English summary
  Actress Radhika Pandit shares Special video for their engagement day special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X