For Quick Alerts
  ALLOW NOTIFICATIONS  
  For Daily Alerts

  ಈ ಸಂಜೆ ಸರ್ಪ್ರೈಸ್ ನೀಡಲಿದ್ದಾರಂತೆ ರಾಧಿಕಾ ಪಂಡಿತ್

  |

  ರಕ್ಷಾ ಬಂಧನದ ಸಂದರ್ಭದಲ್ಲಿ ತಾರೆಯರು ತಮ್ಮ ಒಡಹುಟ್ಟಿದವರು, ಸ್ನೇಹದಿಂದ ಸಹೋದರ-ಸಹೋದರಿಯ ಸ್ಥಾನ ಪಡೆದವರನ್ನು ನೆನಪಿಸಿಕೊಂಡು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಸಹೋದರ ಸಂಬಂಧದ ಆಪ್ತತೆ, ಅದರ ಸವಿ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೇರೆ ಊರಿನಲ್ಲಿರುವ ಸಹೋದರ- ಸಹೋದರಿಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿಯೇ ರಕ್ಷಾ ಬಂಧನ ಆಚರಿಸುತ್ತಿದ್ದಾರೆ.

  ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

  ನಟಿ ರಾಧಿಕಾ ಪಂಡಿತ್ ಕೂಡ ತಮ್ಮ ರಕ್ಷಾ ಬಂಧನದ ಸಂಭ್ರಮವನ್ನು ಸಾಮಾಜಿಕ ಜಾಲತಾಣಕ್ಕೆ ಸೀಮಿತಗೊಳಿಸುವಂತಾಗಿದೆ. ಏಕೆಂದರೆ ಅವರ ಪ್ರೀತಿಯ ಸಹೋದರ ಗೌರಂಗ್ ಪಂಡಿತ್ ಸಪ್ತಸಾಗರದಾಚೆಗಿನ ಅಮೆರಿಕದಲ್ಲಿದ್ದಾರೆ. ಪ್ರತಿ ವರ್ಷ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದಂದು ಆ ಬಾಂಧವ್ಯದ ಖುಷಿಯನ್ನು ಹಂಚಿಕೊಳ್ಳುತ್ತಿದ್ದ ರಾಧಿಕಾ, ಈ ಬಾರಿ ತಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಓದಿ.

  ಬುಕ್ ಹಿಡಿದು ಓದುತ್ತಿರುವ ಐರಾ ಯಶ್: ಅನು ಪ್ರಭಾಕರ್ ಗೆ ಧನ್ಯವಾದ ತಿಳಿಸಿದ ರಾಧಿಕಾಬುಕ್ ಹಿಡಿದು ಓದುತ್ತಿರುವ ಐರಾ ಯಶ್: ಅನು ಪ್ರಭಾಕರ್ ಗೆ ಧನ್ಯವಾದ ತಿಳಿಸಿದ ರಾಧಿಕಾ

  ರಾಖಿ ಕಳುಹಿಸಲು ಆಗುತ್ತಿಲ್ಲ

  ರಾಖಿ ಕಳುಹಿಸಲು ಆಗುತ್ತಿಲ್ಲ

  ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್, ಪತ್ನಿ ಮತ್ತು ಮಗಳ ಜತೆಗೆ ಅಮೆರಿಕದ ಷಿಕಾಗೋದಲ್ಲಿ ನೆಲೆಸಿದ್ದಾರೆ. ಹೀಗಾಗಿ ಈ ಬಾರಿ ನಿನಗೆ ರಾಖಿಯನ್ನು ಕಳುಹಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

  ನೀನಿನ್ನೂ ಚಿಕ್ಕ ಮಗು

  ನೀನಿನ್ನೂ ಚಿಕ್ಕ ಮಗು

  ರಾಖಿ ಕಳುಹಿಸಲಾಗದೆ ಇದ್ದರೂ ಷಿಕಾಗೋದಲ್ಲಿರುವ ನನ್ನ ಡಾರ್ಲಿಂಗ್ ಗೌರಂಗ್‌ಗೆ ತುಂಬು ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀನಿನ್ನೂ ನನ್ನ ಚಿಕ್ಕ ಮಗು. ಮಿಸ್ ಯು ಗೊಲ್ಲು ಎಂದು ರಾಧಿಕಾ, ತಮ್ಮನ ಕುರಿತಾದ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

  ಕೊರೊನಾ ಲಾಕ್ ಡೌನ್ ನಿಂದ ರಾಧಿಕಾ ಪಂಡಿತ್ ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆಕೊರೊನಾ ಲಾಕ್ ಡೌನ್ ನಿಂದ ರಾಧಿಕಾ ಪಂಡಿತ್ ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ

  ಸಂಜೆ ಸಣ್ಣ ಸರ್ಪ್ರೈಸ್

  ಸಂಜೆ ಸಣ್ಣ ಸರ್ಪ್ರೈಸ್

  ನನ್ನ ಎಲ್ಲ ವಿಶೇಷ ಸಹೋದರರು ಹಾಗೂ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ರಾಧಿಕಾ ತಿಳಿಸಿದ್ದಾರೆ. ಜತೆಗೆ ಈ ಸಂಜೆ ನಮ್ಮ ಸಣ್ಣದೊಂದು ಸರ್ಪ್ರೈಸ್‌ ಅನ್ನು ನೋಡಿ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

  ಯಶ್ ರಕ್ಷಾಬಂಧನ

  ಯಶ್ ರಕ್ಷಾಬಂಧನ

  ನಟ ಯಶ್ ಕೂಡ ಪ್ರತಿ ಬಾರಿ ಸಹೋದರಿ ನಂದಿನಿ ಅವರನ್ನು ಭೇಟಿ ಮಾಡಿ ರಾಖಿ ಕಟ್ಟಿಸಿಕೊಳ್ಳುತ್ತಿದ್ದರು. ಈ ಹಿಂದಿನಂತೆ ವಿಶೇಷವಾಗಿ ರಕ್ಷಾಬಂಧನ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಗಷ್ಟೇ ಎರಡನೆಯ ಮಗುವಿನ ತಾಯಿಯಾಗಿರುವ ತಂಗಿಯನ್ನು ಸಂಜೆ ವೇಳೆ ಭೇಟಿ ಮಾಡಿ ಯಶ್ ರಾಖಿ ಕಟ್ಟಿಸಿಕೊಳ್ಳಲಿದ್ದಾರೆ.

  ಕುಟುಂಬದ ಸದಸ್ಯರೊಬ್ಬರನ್ನು ರಾಧಿಕಾ ಪಂಡಿತ್ ಪರಿಚಯಿಸಿದ್ದು ಹೀಗೆ...ಕುಟುಂಬದ ಸದಸ್ಯರೊಬ್ಬರನ್ನು ರಾಧಿಕಾ ಪಂಡಿತ್ ಪರಿಚಯಿಸಿದ್ದು ಹೀಗೆ...

  English summary
  Actress Radhika Pandit wished her brother Gourang on the occasion of Raksha Bandhan and said watch out for a little surprise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X