For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಬೇಸರ ಮೂಡಿಸಿದ ರಾಧಿಕಾ ಪಂಡಿತ್

  |
  ಅಭಿಮಾನಿಗಳಿಗೆ ಬೇಸರ ಮೂಡಿಸಿದ ರಾಧಿಕಾ ಪಂಡಿತ್..! | FILMIBEAT KANNADA

  ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದ ಸ್ಯಾಂಡಲ್ ವುಡ್ ನ ಸಿಂಡ್ರೆಲಾ ರಾಧಿಕಾ ಪಂಡಿತ್ ಈಗ ಗಂಡ, ಮಗು ಅಂತ ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಈಗ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನ ನೀಡಿದ್ದಾರೆ.

  ಇದೇ ತಿಂಗಳು ಅಂದರೆ ಮಾರ್ಚ್ 7 ರಂದು ರಾಕಿಂಗ್ ಸ್ಟಾರ್ ಪ್ರೀತಿಯ ಮಡದಿಯ ಹುಟ್ಟುಹಬ್ಬ. ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಯಾವಾಗಲು ಅಭಿಮಾನಿಗಳ ಜೊತೆಯೆ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಮಾತ್ರ ರಾಧಿಕಾ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ದರ್ಶನ ನೀಡುವುದಿಲ್ಲ ಅಂತ ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

  ಈ ವರ್ಷದ ಹುಟ್ಟುಹಬ್ಬ ರಾಧಿಕಾ ಪಂಡಿತ್ ಪಾಲಿಗೆ ಮತ್ತಷ್ಟು ವಿಶೇಷವಾಗಿದೆ. ಯಾಕಂದರೆ ಈ ಬಾರಿ ರಾಧಿಕಾ ಯಶ್ ಮನೆಗೆ ವಿಶೇಷ ಅತಿಥಿಯೊಬ್ಬರ ಆಗಮನವಾಗಿದೆ. ಅವರು ಮತ್ಯಾರು ಅಲ್ಲ ರಾಧಿಕಾ ಯಶ್ ದಂಪತಿಯ ಮುದ್ದಿನ ಮಗು. ಮಗಳ ಜೊತೆ ರಾಧಿಕಾ ಪಂಡಿತ್ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತಿದ್ದಾರೆ.

  ಅಸಲಿಗೆ ರಾಧಿಕಾ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವುದಿಲ್ಲ ಅಂತ ನಿರ್ಧರಿಸಲು ಕಾರಣ, ಹುಟ್ಟುಹಬ್ಬದ ದಿನ ಸ್ಯಾಂಡಲ್ ವುಡ್ ಸಿಂಡ್ರೆಲಾ ಬೆಂಗಳೂರಿನಲ್ಲಿ ಇರುವುದಿಲ್ಲವಂತೆ. ಹಾಗಾಗಿ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

  ಆದರೆ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರನ್ನು ಭೇಟಿ ಮಾಡುತ್ತೇನೆ ಅಂತ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವಾದರು ರಾಧಿಕಾ ಪಂಡಿತ್ ಸಿಗುತ್ತಾರಲ್ಲಾ ಅಂತ ನೆಮ್ಮದಿಯ ನಿಟ್ಟುಸಿರು ಬಿಡಬೇಕಾಗಿದೆ.

  ತಮ್ಮ ನೆಚ್ಚಿನ ನಟಿ ರಾಧಿಕಾ ಪಂಡಿತ್ ಅವರನ್ನು ನೋಡದೆ ವರ್ಷಗಳೇ ಕಳೆದಿವೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬದ ದಿನ ರಾಧಿಕಾ ಪಂಡಿತ್ ಜೊತೆಗೆ ಮಗುವನ್ನು ನೋಡುವ ಆಸೆಯಿಂದ ಕಾದುಕುಳಿತಿದ್ದ ಅಭಿಮಾನಿ ಬಳಗಕ್ಕೆ ರಾಧಿಕಾ ಪಂಡಿತ್ ಅವರ ಮಾತು ಬಾರಿ ನಿರಾಸೆ ಮೂಡಿಸಿದೆ.

  English summary
  Kannada actress Radhika pandit has decided, not to celebrate her birthday (March 7th) this year with fans. because she is out of the station on that day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X