»   » 'ರಾಧಾಳ ಗಂಡ'ನಾದ 'ರಾಧಿಕನ್ ಗಂಡ' ಕೋಮಲ್

'ರಾಧಾಳ ಗಂಡ'ನಾದ 'ರಾಧಿಕನ್ ಗಂಡ' ಕೋಮಲ್

Posted By:
Subscribe to Filmibeat Kannada
Radhala Ganda still
ಚಿತ್ರದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಯಾರೊಬ್ಬರನ್ನೂ ಉದ್ದೇಶಿಸಿದ್ದಲ್ಲ. ಕೇವಲ ಕಾಲ್ಪನಿಕ ಎಂದು ಆರಂಭದಿಂದಲೂ ಹಾಸ್ಯ ನಟ ಕೋಮಲ್ ಹೇಳುತ್ತಾ ಬಂದಿದ್ದರೂ ಕಡೆಗೂ ಅವರು ತಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿದ್ದಾರೆ. ಪಾಪ ಅವರಿಗೆ ಯಾವ ಕಡೆಯಿಂದ ಬೆದರಿಕೆ ಕರೆ ಬಂದಿತ್ತೋ ಏನೋ?

'ರಾಧಿಕನ ಗಂಡ' ಎಂಬ ಚಿತ್ರವನ್ನು ಅವರು ಕೈಗೆತ್ತಿಕೊಂಡ ಬಗ್ಗೆ ಗೊತ್ತೇ ಇದೆ. ಆದರೆ ಈ ಚಿತ್ರದ ಶೀರ್ಷಿಕೆ ಬಗ್ಗೆ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೋಮಲ್ ಸ್ಪಷ್ಟೀಕರಣವನ್ನೂ ನೀಡಿದ್ದರು.

ರಾಧಿಕಾ ಎಂದರೆ ಅವರೊಬ್ಬರೇ ಆಗಬೇಕು ಎಂದೇನು ಇಲ್ಲವಲ್ಲ. ರಾಧಿಕಾ ಪಂಡಿತ್ ಅವರೂ ಆಗಬಹುದು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದಿದ್ದರು.

ಅವರ ಪರ್ಸನಲ್ ಲೈಫ್ ನಮಗ್ಯಾಕೆ ಬೇಕು. ಅವರ ವೈಯಕ್ತಿಕ ವಿಚಾರಗಳಿಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ ಎಂದಿದ್ದರು. ಈ ಹಿಂದೆ 'ವಿಶಾಲಾಕ್ಷ್ಮಮ್ಮನ ಗಂಡ' ಎಂಬ ಚಿತ್ರ ಬಂದಿತ್ತು. ಚಿತ್ರದ ಶೀರ್ಷಿಕೆ ಆಕರ್ಷಕವಾಗಿಲ್ಲದ ಕಾರಣ ಆ ಚಿತ್ರ ಬಾಕ್ಸಾಫೀಸಲ್ಲಿ ಡುಂಕಿ ಹೊಡೀತು. ನಾವೂ ಅದೇ ರೀತಿ ಶೀರ್ಷಿಕೆ ಇಟ್ಟು ಕೈಸುಟ್ಟುಕೊಳ್ಳಬೇಕೆ ಎಂದಿದ್ದರು ಕೋಮಲ್.

ಈಗ ಅವರು ಹೇಳೋದೋ ಏನೆಂದರೆ...ಫಿಲಂ ಚೇಂಬರ್ ನಲ್ಲಿ 'ರಾಧಿಕನ್ ಗಂಡ' ಟೈಟಲ್ ನಮಗೆ ಸಿಕ್ಕಿಲ್ಲ. ಹಾಗಾಗಿ ಚಿತ್ರದ ಶೀರ್ಷಿಕೆಯನ್ನು 'ರಾಧಾಳ ಗಂಡ' ಎಂದು ಬದಲಾಯಿಸಿಕೊಂಡಿದ್ದೇವೆ. ಶೀರ್ಷಿಕೆಗಾಗಿ ಫೈಟ್ ಮಾಡುವಷ್ಟು ಸಮಯವಿಲ್ಲ. ಹಾಗಾಗಿ ಶೀರ್ಷಿಕೆಯನ್ನು ಬದಲಾಯಿಸಿದ್ದೇವೆ ಎಂದಿದ್ದಾರೆ ಚಿತ್ರದ ನಿರ್ಮಾಪಕ ಎಂ ರವಿಕುಮಾರ್ (ಕಿಂಗ್ ರವಿ).

ಈಗಾಗಲೆ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ.

ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ಪೂರ್ಣ, ಆರ್ಯ, ಪೂರ್ಣ, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಅಮ್ಮನಾಗೇಶ್ ನೃತ್ಯ ನಿರ್ದೇಶನ, ಥ್ರಿಲ್ಲರ್‍ಮಂಜು ಸಾಹಸ ನಿರ್ದೇಶನ ಹಾಗು ಮೋಹನ್ ಬಿ ಕೆರೆ ಕಲಾ ನಿರ್ದೇಶನ 'ರಾಧಾಳ ಗಂಡ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Comedy actor Komal Kumar's Radhikan Ganda film title changed as Radhala Ganda. The movie is loosely based on the French romcom, My Wife is an Actress. Tamil actor Poorna, who also did Josh in Kannada, plays the actor said Komal.
Please Wait while comments are loading...