Just In
Don't Miss!
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Sports
ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದಶ'ನಟಿಯರಿಂದ 'ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ಪ್ರಶಸ್ತಿ ಅನಾವರಣ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸಲು ಜನಪ್ರಿಯ ಎಫ್.ಎಮ್ ಸ್ಟೇಷನ್ 'ರೇಡಿಯೋ ಸಿಟಿ' ಇದೇ ಮೊಟ್ಟ ಮೊದಲ ಬಾರಿಗೆ 'ಸಿಟಿ ಸಿನಿ ಅವಾರ್ಡ್ಸ್' ಹೆಸರಿನಲ್ಲಿ ಪ್ರಶಸ್ತಿ ನೀಡಲು ಮುಂದಾಗಿದೆ.
ವೋಟ್ ಮಾಡುವ ಮೂಲಕ 'ರೇಡಿಯೋ ಸಿಟಿ' ಕೇಳುಗರು ತಮ್ಮ ನೆಚ್ಚಿನ ನಾಯಕ, ನಾಯಕಿ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರನ್ನ ವಿಜೇತರನ್ನಾಗಿ ಆಯ್ಕೆ ಮಾಡಬಹುದು. ಪಾರದರ್ಶಕವಾಗಿ ನಡೆಯುವ ಈ ಮತ ಚಲಾವಣೆಯಲ್ಲಿ ಅಂತಿಮವಾಗಿ ಲಭ್ಯವಾಗುವ ಫಲಿತಾಂಶದ ಆಧಾರದ ಮೇಲೆ 'ಸಿಟಿ ಸಿನಿ ಅವಾರ್ಡ್ಸ್' ಪ್ರಶಸ್ತಿ ಪ್ರದಾನ ಮಾಡಲಾಗುವುದು.
'ಸಿಟಿ ಸಿನಿ ಅವಾರ್ಡ್ಸ್-2017' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನುಡಿಯಂತೆ ನಿನ್ನೆ (ಸೆಪ್ಟೆಂಬರ್ 25) ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.
ಆರ್.ಜೆ ಪ್ರದೀಪ ಹಾಗೂ ಆರ್.ಜೆ ನೇತ್ರ ನಿರೂಪಣೆಯಲ್ಲಿ ಮೂಡಿಬಂದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿಯರಾದ ಶ್ರುತಿ ಹರಿಹರನ್, ಸುಮನ್ ರಂಗನಾಥ್, ರಾಧಿಕಾ ಚೇತನ್, ಶರ್ಮಿಳಾ ಮಾಂಡ್ರೆ, ಸಂಗೀತಾ ಭಟ್, ನೀತು ಶೆಟ್ಟಿ, ಮಾನ್ವಿತಾ ಹರೀಶ್, 'ಸ್ಪರ್ಶ' ರೇಖಾ, ಕಾರುಣ್ಯ ರಾಮ್ ಮತ್ತು ಹಿತಾ ಚಂದ್ರಶೇಖರ್ 'ಸಿಟಿ ಸಿನಿ ಅವಾರ್ಡ್ಸ್-2017' ಟ್ರೋಫಿಯನ್ನ ಅನಾವರಣಗೊಳಿಸಿದರು.
''ತಮ್ಮ ಮೆಚ್ಚಿನ ಕಲಾವಿದರನ್ನು ಆರಿಸಿಕೊಳ್ಳಲು ನಮ್ಮ 'ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ನಮ್ಮ ಕೇಳುಗರಿಗೆ ಕೇವಲ ಒಂದು ವೇದಿಕೆಯಾಗಿರದೆ, ಕನ್ನಡ ತಾರೆಯರ ಮತ್ತು ಅವರ ಅಭಿಮಾನಿಗಳ ನಡುವೆ ಒಂದು ಸೇತುವೆಯಾಗಲಿದೆ'' ಎನ್ನುತ್ತಾರೆ ರೇಡಿಯೋ ಸಿಟಿ ಸಿ.ಇ.ಒ ಅಬ್ರಹಾಂ ಥಾಮಸ್.
''ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ರೇಡಿಯೋ ಸಿಟಿಯ ಅದ್ಭುತ ಪ್ರಯತ್ನ. ಈ ವರ್ಷ ಬಹಳ ಶ್ರಮವಹಿಸಿರುವ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಗೌರವವನ್ನು ಕೊಡುವುದಲ್ಲದೆ, ತಮ್ಮ ನೆಚ್ಚಿನ ತಾರೆಯರನ್ನು ಆಯ್ಕೆ ಮಾಡಿ, ಮತ ಚಲಾಯಿಸಲು ಕೇಳುಗರಿಗೂ ಅವಕಾಶ ನೀಡುತ್ತದೆ. ಕೇಳುಗರ ವಿಶ್ವಾಸವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕನ್ನಡ ಚಲನಚಿತ್ರರಂಗದ ಬಗ್ಗೆ ಅವರ ಒಲವನ್ನು ಕಾಪಾಡುವಲ್ಲಿ 'ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ದೊಡ್ಡ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ'' ಎಂದರು ನಟಿ ಸುಮನ್ ರಂಗನಾಥ್
ಸಾರ್ವಜನಿಕ ಮತಗಳ ಮೂಲಕ ನಾಮನಿರ್ದೇಶಿತರು ಮತ್ತು ವಿಜೇತರನ್ನು ನಿರ್ಧರಿಸಲಾಗುತ್ತದೆ. ಎಸ್.ಎಂ.ಎಸ್, ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ ಆಪ್ ಮೂಲಕ ಮತ ಚಲಾವಣೆ ಮಾಡುವ ಅವಕಾಶವಿರುತ್ತದೆ.
ಮೆಚ್ಚಿನ ನಟ, ಮೆಚ್ಚಿನ ನಟಿ, ಮೆಚ್ಚಿನ ನಿರ್ದೇಶಕ, ಮೆಚ್ಚಿನ ಕೃತಿಗಾರ, ಮೆಚ್ಚಿನ ಸಂಗೀತ ನಿರ್ದೇಶಕ, ಮೆಚ್ಚಿನ ಗಾಯಕ, ಮೆಚ್ಚಿನ ಗಾಯಕಿ, ಮೆಚ್ಚಿನ ಹಾಸ್ಯನಟ, ಮೆಚ್ಚಿನ ಛಾಯಾಗ್ರಾಹಕ ಮತ್ತು ಮೆಚ್ಚಿನ ಚಲನಚಿತ್ರ... ಈ ಎಲ್ಲಾ ಕ್ಯಾಟಗರಿಯಲ್ಲಿ ಮತ ಚಲಾವಣೆಗೆ ಇಂದಿನಿಂದಲೇ ಅವಕಾಶವಿರುತ್ತದೆ.