For Quick Alerts
  ALLOW NOTIFICATIONS  
  For Daily Alerts

  ಲವ್ ಗುರು ರಾಜೇಶ್ ಗೆ ಏನೂ ಆಗಿಲ್ಲ : ಮಿಸ್ಟೇಕ್ ಮಾಡ್ಕೋಬೇಡಿ

  By Naveen
  |
  ಲವ್ ಗುರು ರಾಜೇಶ್ ಮೇಲೆ ಮರಣಾಂತಿಕ ಹಲ್ಲೆ ? | Filmibeat Kannada

  ರೇಡಿಯೋ ಸಿಟಿ 91.1 ಎಫ್ ಎಂ ಕೇಳುಗರಿಗೆ ಅಚ್ಚು ಮೆಚ್ಚಿನ ಕಾರ್ಯಕ್ರಮ ಲವ್ ಗುರು. ಈ ಕಾರ್ಯಕ್ರಮ ಪ್ರಮುಖವಾಗಿ ಪ್ರೇಮಿಗಳು ಪಾಲಿಗೆ ಫೇವರೇಟ್ ಆಗಿತ್ತು. ಲವ್ ಗುರು ಶೋ ನಲ್ಲಿ ತಮ್ಮ ಧ್ವನಿಯ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದವರು ಆರ್ ಜಿ ರಾಜೇಶ್. ಆರ್ ಜಿ ಆಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಹ ಎಂಟ್ರಿ ಕೊಟ್ಟಿದ್ದರು. 'ಫಸ್ಟ್ ಲವ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಆರ್.ಜಿ.ರಾಜೇಶ್ ಪ್ರೇಕ್ಷಕರ ಗಮನ ಸೆಳೆದರು.

  ದುಷ್ಕರ್ಮಿಗಳಿಂದ 'RJ ರಾಜೇಶ್' ಬರ್ಬರ ಕೊಲೆ ದುಷ್ಕರ್ಮಿಗಳಿಂದ 'RJ ರಾಜೇಶ್' ಬರ್ಬರ ಕೊಲೆ

  ಇಂತಿಪ್ಪ ಆರ್.ಜಿ.ರಾಜೇಶ್ ಮರಣಾಂತಿಕ ಹಲ್ಲೆಗೊಳಗಾಗಿ ಸಾವನ್ನಪ್ಪಿದರೆ ಎಂಬ ಸುದ್ದಿ ಇಂದು ಮದ್ಯಾಹ್ನದಿಂದ ಹರಿದಾಡುತ್ತಿದೆ. ಸ್ಟೂಡಿಯೋದಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದಾಗ ಆರ್.ಜೆ.ರಾಜೇಶ್ ಮೇಲೆ ನಾಲ್ವರು ಹಲ್ಲೆ ನಡೆಸಿ ಪರಾರಿ ಆಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್ ಅಸುನಿಗಿದ್ದಾರೆ ಎಂದು ಕೆಲ ಪತ್ರಿಕೆಗಳು ಕೂಡ ವರದಿ ಮಾಡಿದೆ. ಈ ವಿಚಾರ ತಿಳಿದ ಕೂಡಲೇ ಹಲವರು ಆರ್.ಜೆ.ರಾಜೇಶ್ ಗೆ ಫೋನ್ ಮಾಡಿದ್ದಾರೆ. ಆಗಲೇ ಸಾವನಪ್ಪಿರುವುದು ಕನ್ನಡಿಗ ಆರ್.ಜೆ.ರಾಜೇಶ್ ಅಲ್ಲ, ಬದಲಾಗಿ ಕೇರಳದ ರೆಡ್ ಎಫ್ ಎಂ ನ ಮಾಜಿ ಆರ್.ಜೆ ರಾಜೇಶ್ ಎಂಬ ಸತ್ಯ ಕೆಲವರಿಗೆ ಗೊತ್ತಾಗಿದೆ.

  ವಿಪರೀತ ಫೋನ್ ಕರೆಗಳು ಬರುತ್ತಿದ್ದ ಕಾರಣ ಕನ್ನಡಿಗ ಆರ್.ಜೆ ರೋಹಿತ್, ಹಲ್ಲೆಗೊಳಗಾಗಿರುವುದು ತಾವಲ್ಲ ಎಂದು ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ''ದೇವರ ದಯೇ ಯಿಂದ ಆರಾಮಾಗಿ ಇದ್ದೇನೆ. ಇದೆಲ್ಲ ಸುಳ್ಳು ಸುದ್ದಿ ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಇರಲಿ.'' ಎಂದು ಆರ್.ಜೆ.ರಾಜೇಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಅಂದಹಾಗೆ, ಕೇರಳದ ತಿರುವನಂತಪುರಂ ನಲ್ಲಿ ಮಂಗಳವಾರ ಮುಂಜಾನೆ ರೆಡ್ ಎಫ್ ಎಂ ನ ಮಾಜಿ ಆರ್.ಜೆ ರಾಜೇಶ್ (36) ಹಾಗೂ ಸ್ನೇಹಿತನ ಮೇಲೆ ಮರಣಾಂತಿಕ ಹಲ್ಲೆ ನಡೆದಿದೆ. ಸ್ವಿಫ್ಟ್ ಕಾರ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ರಾಜೇಶ್ ರನ್ನು ಕೊಲೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.

  English summary
  91.1 Radio jockey and Kannada actor Rajesh gave clarification about his death rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X