For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಕುಮಾರ್ ಡ್ಯಾನ್ಸ್ ನೋಡಿ ಕಣ್ಣೀರಿಟ್ಟ ತಾಯಿ ಮಂಗಳ

  |

  ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಅಭಿಮಾನಿಗಳಿಗೆ ಸಖತ್ ಸ್ಪೆಷಲ್. ಆದ್ರೆ, ಈ ಶೋ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಕ್ಕಳಿಗೆ ಸ್ವರ್ಗ.

  ಹುಬ್ಬಳ್ಳಿ ಜನರ ಮುಂದೆ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗ ಯುವರಾಜ್ ಕುಮಾರ್ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಈ ಡ್ಯಾನ್ಸ್ ನೋಡಿದ ಯುವರಾಜ್ ಕುಮಾರ್ ಅವರ ತಾಯಿ ಮಂಗಳ ಕಣ್ಣೀರಿಟ್ಟಿದ್ದಾರೆ.

  ಮಗನ ಪರ್ಫಾಮೆನ್ಸ್ ನೋಡಿದ ಭಾವುಕರಾದ ಮಂಗಳ ಅವರು, ತಮ್ಮ ಸಂತಸವನ್ನ ಕಣ್ಣೀರಿನ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಇನ್ನು ಮಗನ ಡ್ಯಾನ್ಸ್ ನೋಡಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ''ಸಾಮಾನ್ಯವಾಗಿ ಹೋದ್ಮೇಲೆ ಸ್ವರ್ಗ ನೋಡೋದು. ಆದ್ರೆ, ನಾನು ಇದ್ದಾಗಲೇ ಸ್ವರ್ಗ ನೋಡಿದೆ, ಇದೇ ಸ್ವರ್ಗ'' ಎಂದು ಹರ್ಷಗೊಂಡಿದ್ದಾರೆ.

  ಅಂದ್ಹಾಗೆ, ಯುವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ನಾಯಕನಾಗಿ ಪರಿಚಯವಾಗಲು ಸಜ್ಜಾಗಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ 'ನಟಸಾರ್ವಭೌಮ' ಆಡಿಯೋ ಲಾಂಚ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಡಾ ರಾಜ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಹಾಡಿಗೆ ನೃತ್ಯ ಮಾಡಿದ್ದಾರೆ.

  ಇನ್ನುಳಿದಂತೆ ನಟಸಾರ್ವಭೌಮ ಆಡಿಯೋ ಲಾಂಚ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಜನವರಿ 5 ರಂದು ನಡೆದಿತ್ತು. ಈ ಶೋ ಈಗ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಮಧ್ಯಾಹ್ನ 2ಕ್ಕೆ ಪ್ರಸಾರವಾಗ್ತಿದೆ.

  English summary
  Actor Raghavendra rajkumar expressed happy after his son yuva rajkumar dance performance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X