For Quick Alerts
  ALLOW NOTIFICATIONS  
  For Daily Alerts

  'ಅರಸಯ್ಯನ ಪ್ರೇಮ ಪ್ರಸಂಗ': ಸ್ಯಾಂಡಲ್‌ವುಡ್‌ನಲ್ಲಿ ಕಾಮಿಡಿ ಹಂಗಾಮ!

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್‌ ಹೊಸ ಕಾನ್ಸೆಪ್ಟ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಯಶಸ್ಸಿನ ಉತ್ತುಂಗದಲ್ಲಿರುವ ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಭಿನ್ನ ಸಿನಿಮಾಗಳು ಬರುತ್ತಿವೆ.‌ ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುತ್ತಿವೆ.

  ಇಂತಹ ಸಿನಿಮಾಗಳ ಸಾಲಿನಲ್ಲಿ ಮತ್ತೊಂದು ಸಿನಿಮಾ ಸೇರ್ಪಡೆಗೆ ಸಜ್ಜಾಗಿದೆ. ಅದುವೇ 'ಅರಸಯ್ಯನ ಪ್ರೇಮ ಪ್ರಸಂಗ'. ಕಾಮಿಡಿ ಸಿನಿಮಾಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿಯೇ ಈ ಹೊಸ ಸಿನಿಮಾ ಗಮನ ಸೆಳೆಯುವುದಕ್ಕೆ ಸಜ್ಜಾಗಿ ನಿಂತಿದೆ.

  ಈಗಾಗಲೇ 'ಫ್ರೆಂಚ್ ಬಿರಿಯಾನಿ' , 'ಗುರು ಶಿಷ್ಯರು' ಅಂತಹ ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ಮಹಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೈಲೆಂಟ್ ಚಿತ್ರೀಕರಣ ಮಾಡಿರೊ 'ಅರಸಯ್ಯನ ಪ್ರೇಮಪ್ರಸಂಗ' ಚಿತ್ರದ ಪೋಸ್ಟರನ್ನು ಇತ್ತೀಚೆಗೆ ಲಾಂಚ್ ಮಾಡಲಾಯ್ತು. ರಾಘವೇಂದ್ರ ‌ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳ ರಾಘವೇಂದ್ರ ರಾಜ್‌ಕುಮಾರ್ ಈ ಪೋಸ್ಟರ್‌ ಅನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ಅಂದ್ಹಾಗೆ ಮೇಘಶ್ರೀ ರಾಜೇಶ್ 'ಅರಸಯ್ಯನ ಪ್ರೇಮಪ್ರಸಂಗ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಸಿನಿಮಾ. ಮೇಘಶ್ರೀ ಅವರಿಗೆ ಸಿನಿಮಾ ನಿರ್ಮಾಣ ಮಾಡಲು ಪತಿ ರಾಜೇಶ್ ಜೊತೆಯಾಗಿದ್ದಾರೆ. ರಾಜೇಶ್ ಸದ್ಯ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಜೆ.ವಿ.ಆರ್ ದೀಪು ಕಥೆ, ಚಿತ್ರಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಸಂಪೂರ್ಣ ಮುಗಿದಿದೆ. ಹಾಸನ, ಗೋರೂರಿನ ಸುತ್ತಮುತ್ತ ಈ ಸಿನಿಮಾವನ್ನು ಶೂಟ್ ಮಾಡಲಾಗಿದೆ. ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ, ಹರೀಶ್ ಹಾಗೂ ಜಿ.ವಿ.ಆರ್ ದೀಪು ಡೈಲಾಗ್ ಬರೆದಿದ್ದಾರೆ.

  Raghavendra Rajkumar Launched Arasaiyyana Prema Prasanga Poster

  'ಅರಸಯ್ಯನ ಪ್ರೇಮಪ್ರಸಂಗ'ದಲ್ಲಿ ಮಹಂತೇಶ್ ಹಿರೇಮಠ್‌ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಸ್ಟಾರ್ ಕಾಸ್ಟ್‌ನಲ್ಲಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ಪಿ.ಡಿ.ಸತೀಶ್, ರಘು ರಮಣಕೊಪ್ಪ, ಜಹಂಗೀರ್ ಸೇರಿದಂತೆ ಪ್ರಮುಖ ನಟರು ನಟಿಸಿದ್ದಾರೆ.

  English summary
  Raghavendra Rajkumar Launched Arasaiyyana Prema Prasanga Poster, Know More.
  Sunday, November 6, 2022, 23:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X