»   » ರಾಘಣ್ಣ ಒಪ್ಪಿಕೊಂಡಿರುವ ಮೂರು ಹೊಸ ಸಿನಿಮಾ ಯಾವುದು.?

ರಾಘಣ್ಣ ಒಪ್ಪಿಕೊಂಡಿರುವ ಮೂರು ಹೊಸ ಸಿನಿಮಾ ಯಾವುದು.?

Posted By:
Subscribe to Filmibeat Kannada

ಸುಮಾರು 14 ವರ್ಷದ ನಂತರ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ದವಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅಭಿನಯಿಸುತ್ತಿರುವ 'ಚೀಲಂ' ಚಿತ್ರದಲ್ಲಿ ನೆಗಿಟೀವ್ ಪಾತ್ರದಲ್ಲಿ ರಾಘಣ್ಣ ಬಣ್ಣ ಹಚ್ಚಲಿದ್ದಾರಂತೆ.

ಇದು ರಾಘಣ್ಣ ಅಭಿಮಾನಿಗಳಿಗೆ ಡಾ ರಾಜ್ ಅಭಿಮಾನಿಗಳಿಗೆ ಸಂತಸ ತಂದಿದೆ. ಬಹುಕಾಲದಿಂದ ರಾಘವೇಂದ್ರ ರಾಜ್ ಕುಮಾರ್ ಅವರ ಕಮ್ ಬ್ಯಾಕ್ ಗೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ. ಹೌದು, ರಾಘಣ್ಣ ಕೇವಲ ಒಂದು ಸಿನಿಮಾದಲ್ಲಿ ಮಾತ್ರವಲ್ಲ ಮತ್ತೆರೆಡು ಚಿತ್ರಗಳಲ್ಲಿ ಅಭಿನಯಿಸಲಿದ್ದಾರಂತೆ.

14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್

ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಲಿದ್ದಾರಂತೆ.

Raghavendra Rajkumar new movies

ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್

ಇನ್ನು ಇದರ ಜೊತೆಗೆ ಪ್ರತಾಪ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹಾರರ್ ಸಿನಿಮಾವನ್ನ ಒಪ್ಪಿಕೊಂಡಿದ್ದಾರಂತೆ. ಈ ಮಧ್ಯೆ ಎಸ್ ಕೆ ಭಗವಾನ್ ನಿರ್ದೇಶನದ 'ಆಡುವ ಗೊಂಬೆ' ಚಿತ್ರದ ಹಾಡೊಂದಕ್ಕೆ ರಾಘಣ್ಣ ಧ್ವನಿಯಾಗಿದ್ದು, ಈಗಾಗಲೇ ಹಾಡು ಸಿದ್ದವಾಗಿದೆ. ಬಿಡುಗಡೆ ಮಾತ್ರ ಬಾಕಿಯಿದೆ.

ಒಟ್ನಲ್ಲಿ, ಅನಾರೋಗ್ಯದ ಕಾರಣದಿಂದ ಬೆಳ್ಳಿತೆರೆಯಿಂದ ದೂರವಿದ್ದ ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದು ಎಲ್ಲರಿಗೂ ಸಂತಸವಾಗಿದೆ.

English summary
Kannada actor Raghavendra Rajkumar will play villain in Kannada Chilam movie. after fourteen years later, Raghavendra Rajkumar is again acting in the film, Manoranjan Ravichandran is the hero for Chilam movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X