»   » ರಾಘವೇಂದ್ರ ರಾಜ್ ಮನೆಗೆ ರೋವರ್ ಅಪ್ಸರೆ

ರಾಘವೇಂದ್ರ ರಾಜ್ ಮನೆಗೆ ರೋವರ್ ಅಪ್ಸರೆ

By: ಉದಯರವಿ
Subscribe to Filmibeat Kannada
Raghavendra Rajkumar
ವರನಟ ಡಾ.ರಾಜ್ ಕುಮಾರ್ ಕುಟುಂಬದ ಆಧಾರಸ್ತಂಭಗಳಲ್ಲಿ ಒಂದಾಗಿರುವ ರಾಘವೇಂದ್ರ ರಾಜ್ ಕುಮಾರ್ ಮನೆಗೆ ಹೊಸ ಚೆಲುವೆಯ ಆಗಮನವಾಗಿದೆ. ಅವರೇನಾದರೂ ಹೊಸ ಚಿತ್ರ ಆರಂಭಿಸಿದರೇ ಏನು ಕಥೆ ಎಂದು ಯೋಚಿಸುತ್ತಿದ್ದೀರಾ. ಸ್ವಲ್ಪ ತಡೆಯಿರಿ ಆ ಹೊಸ ಚೆಲುವೆ ಬೇರಾರು ಅಲ್ಲ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಐಶಾರಾಮಿ ಕಾರು.

ಈಗವರು ಲ್ಯಾಂಡ್ ರೋವರ್ ದುಬಾರಿ ಕಾರಿನ ಒಡೆಯ. ಈ ಸ್ಪೋರ್ಟ್ಸ್ ಕಾರನ್ನು ಅವರು ಇತ್ತೀಚೆಗೆ ಖರೀದಿಸಿದರು. ತೀರಾ ಇತ್ತೀಚೆಗಷ್ಟೇ ಈ ದುಬಾರಿ ಕಾರು ಭಾರತದ ರಸ್ತೆಗೆ ಇಳಿದಿತ್ತು. ಈ ಕಾರಿನ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ ರು. 39.77 ರಿಂದ ರು. 45.10 ಲಕ್ಷಗಳಲ್ಲಿದೆ.

ಸ್ಪೋರ್ಟ್ಸ್ ಯುಟಿಲಿಟಿ ಕಾರುಗಳಲ್ಲೇ ಅತ್ಯಂತ ಆಕರ್ಷಕವಾಗಿರುವ ಕಾರು ಲ್ಯಾಂಡ್ ರೋವರ್. ಅದರಲ್ಲೂ ಶ್ವೇತ ವರ್ಣದ ಕಾರಂತೂ ರಸ್ತೆ ಮೇಲೆ ಸಾಗುತ್ತಿದ್ದರೆ ಅಪ್ಸರೆಯಂತೆ ಕಾಣುತ್ತದೆ. ಈಗ ರಾಘವೇಂದ್ರ ರಾಜ್ ಕುಮಾರ್ ಅವರು ಖರೀದಿಸಿರುವ ಕಾರು ಶ್ವೇತ ವರ್ಣದ್ದು ಎಂಬುದು ವಿಶೇಷ.

ಸಿನಿಮಾ ತಾರೆಗಳಿಗೆ, ರಾಜಕೀಯ ವ್ಯಕ್ತಿಗಳಿಗೆ, ಉದ್ಯಮಿಗಳ ಅಚ್ಚುಮೆಚ್ಚಿನ ಕಾರು ಇದಾಗಿದ್ದು ಈಗ ರಾಘವೇಂದ್ರ ರಾಜ್ ಕುಮಾರ್ ಸಹ ಈ ಕಾರಿನ ಒಡೆಯರಾಗಿದ್ದಾರೆ. 3.2 ಎಂಜಿನ್ ಸಾಮರ್ಥ್ಯದ ಈ ಕಾರು ಸೆಕೆಂಡ್ ಜನರೇಷನ್ ವಾಹನವಾಗಿದೆ. (ಏಜೆನ್ಸೀಸ್)

English summary
Kannada films producer actor Raghavendra Rajkumar is now the proud owner of the SUV luxuary car Land Rover Freelander 2. Recently he has purchased a white colour model. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada