For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆ ಕುಟುಂಬದ ಮುಂದಿನ ಪಾರ್ವತಮ್ಮ ರಾಜ್‌ಕುಮಾರ್ ಯಾರು? ರಾಘಣ್ಣ ಹೇಳಿದ ಮಾತೇನು?

  |

  ಸ್ಯಾಂಡಲ್‌ವುಡ್‌ನಲ್ಲಿ ಅಣ್ಣಾವ್ರ ಕುಟುಂಬ ದೊಡ್ಮನೆ ಅಂತ ಅನಿಸಿಕೊಳ್ಳುವುದಕ್ಕೆ ಪ್ರಮುಖ ಕಾರಣ ಪಾರ್ವತಮ್ಮ ರಾಜ್‌ಕುಮಾರ್. ಈ ಕುಟುಂಬಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಮಾಡಿದ ಸೇವೆ ಬಹುಶ: ಯಾರಿಂದಲ್ಲೂ ಮಾಡಲು ಸಾಧ್ಯವಿಲ್ಲ.

  ಡಾ.ರಾಜ್‌ಕುಮಾರ್ ಸಿನಿಮಾರಂಗದಲ್ಲಿ ಸಕ್ಸಸ್ ಕಾಣುವುದಕ್ಕೆ ಕಾರಣನೇ ಪಾರ್ವತಮ್ಮ ರಾಜ್‌ಕುಮಾರ್. ಅಣ್ಣಾವ್ರ ಯಶಸ್ಸಿನ ಹಿಂದಿನ ಶಕ್ತಿಯೇ ಇವರು. ಮೇರು ನಟನ ಪತ್ನಿಯಾಗಿ, ಸೂಪರ್‌ಸ್ಟಾರ್ ಮಕ್ಕಳ ತಾಯಿಯಾಗಿ, ನಿರ್ಮಾಪಕಿಯಾಗಿ ಯಶಸ್ಸು ಕಂಡಿದ್ದರು.

  ರಾಘಣ್ಣನನ್ನು 'ಗಂಧದಗುಡಿ' ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವ ಅಪ್ಪು!ರಾಘಣ್ಣನನ್ನು 'ಗಂಧದಗುಡಿ' ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವ ಅಪ್ಪು!

  ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕನ್ನು ಕೊಟ್ಟ ನಿರ್ಮಾಪಕಿ. ಕಾದಂಬರಿ ಆಧಾರಿಸಿತ ಸಿನಿಮಾಗಳು, ಇಡೀ ಕುಟುಂಬ ಕೂತು ನೋಡಬಹುದಾದ ಸಿನಿಮಾಗಳನ್ನು ಕೊಟ್ಟು ಗೆದ್ದವರು. ಮಾಲಾಶ್ರೀ, ಸುಧಾರಾಣಿಯಿಂದ ಹಿಡಿದು ರಕ್ಷಿತಾ, ರಮ್ಯಾವರೆಗೂ ಬದುಕು ಕೊಟ್ಟಿದ್ದು ಇವರೇ. ಪಾರ್ವತಮ್ಮ ರಾಜ್‌ಕುಮಾರ್ ಕಾಲವಾದ ಬಳಿಕ ದೊಡ್ಮನೆಯಲ್ಲಿ ಆಸ್ಥಾನ ಅಲಂಕರಿಸೋದು ಯಾರು? ಅವರಂತೆ ನಿರ್ಮಾಪಕಿಯಾಗಿ ಮುಂದುವರೆಯೋದು ಯಾರು? ಅನ್ನುವ ಪ್ರಶ್ನೆಗೆ ರಾಘವೇಂದ್ರ ರಾಜ್‌ಕುಮಾರ್ ಸುಳಿವು ನೀಡಿದ್ದಾರೆ.

  ದೊಡ್ಮನೆಯ ಪವರ್‌ಹೌಸ್ ಯಾರು?

  ದೊಡ್ಮನೆಯ ಪವರ್‌ಹೌಸ್ ಯಾರು?

  ಪಾರ್ವತಮ್ಮ ರಾಜ್‌ಕುಮಾರ್ ಅಗಲಿಕೆ ಬಳಿಕ ಅಭಿಮಾನಿಗಳು ಆಸ್ಥಾನದಲ್ಲಿ ಯಾರನ್ನೂ ಊಹಿಸಿಕೊಳ್ಳಲೂ ಇಲ್ಲ. ಇತ್ತ ದೊಡ್ಮನೆ ಕುಟುಂಬದ ಸದಸ್ಯರೂ ಕೂಡ ಈ ಬಗ್ಗೆ ಮಾತಾಡಿದ್ದೂ ಇಲ್ಲ. ಆದರೆ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ ದೊಡ್ಮನೆಯ ಪವರ್‌ಹೌಸ್ ಅಂತೂ ಆಗಿದ್ದರು. ಪುನೀತ್ ರಾಜ್‌ಕುಮಾರ್ ನಿಜಕ್ಕೂ ಅಣ್ಣಾವ್ರ ಕುಟುಂಬದ ಪವರ್‌ಸ್ಟಾರ್ ಅಂತಲೇ ಅಭಿಮಾನಿಗಳು ಭಾವಿಸಿದ್ದರು. ತಾಯಿಯಂತೆಯೇ ಪುನೀತ್ ಅವರಲ್ಲಿ ಅಗಾಧವಾದ ವ್ಯವಹಾರಿಕ ಜ್ಞಾನವಿತ್ತು. ಆದರೆ, ಇನ್ನೇನು ಪಾರ್ವತಮ್ಮ ರಾಜ್‌ಕುಮಾರ್‌ರಂತೆ ಪುನೀತ್ ಅಂತ ಹೇಳಬೇಕು ಅನ್ನುವಾಗಲೇ ಅಪ್ಪು ದಿಢೀರನೇ ಎಲ್ಲರಿಂದಲೂ ದೂರವಾಗಿಟ್ಟರು.

  67ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಡಾ.ಪುನೀತ್ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ!67ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಡಾ.ಪುನೀತ್ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ!

  ಅಪ್ಪು ಬೆನ್ನೆಲುಬು ಪತ್ನಿ ಅಶ್ವಿನಿ

  ಅಪ್ಪು ಬೆನ್ನೆಲುಬು ಪತ್ನಿ ಅಶ್ವಿನಿ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನಾಗಿ ಯಶಸ್ಸು ಕಂಡಿದ್ದರು. ಆರಂಭದಲ್ಲಿ ಅಪ್ಪು ಸಿನಿಮಾಗಳಿಗೆ ಕಥೆ ಓಕೆ ಮಾಡುತ್ತಿದ್ದದ್ದು ರಾಘವೇಂದ್ರ ರಾಜ್‌ಕುಮಾರ್. ಆ ಬಳಿಕ ಪುನೀತ್ ಗ್ರೀನ್ ಸಿಗ್ನಲ್ ಕೊಡುತ್ತಿದ್ದ ಸಿನಿಮಾಗಳ ಹಿಂದೆ ಆಶ್ವಿನಿ ಪುನೀತ್ ರಾಜ್‌ಕುಮಾರ್ ಇರುತ್ತಿದ್ದರು. ಇತ್ತೀಚೆಗೆ ಅಪ್ಪು ಆರಂಭಿಸಿದ್ದ ಪಿಆರ್‌ಕೆ ಸ್ಟುಡಿಯೋ ಮೇಲ್ವಿಚಾರಣೆ ಕೂಡ ಅಶ್ವಿನಿಯವರೇ ನೋಡಿಕೊಳ್ಳುತ್ತಿದ್ದರು. ಪುನೀತ್ ತಮ್ಮಲ್ಲಿದ್ದ ವ್ಯವಹಾರಿಕ ಜ್ಞಾನವನ್ನು ಅಶ್ವಿನಿಯವರಿಗೂ ಹೇಳಿಕೊಟ್ಟಿದ್ದರು. ಅಪ್ಪು ಅಗಲಿದ ದಿನದಿಂದ ತಮ್ಮ ಎದುರಿಗಿದ್ದ ಸಮಸ್ಯೆಗಳನ್ನು ಸಮರ್ಥವಾಗಿಯೇ ಎದುರಿಸಿಕೊಂಡು ಬಂದಿದ್ದಾರೆ. ಅದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರನ್ನು ಪಾರ್ವತಮ್ಮ ಅವರಿಗೆ ಹೋಲಿಸುವುದಕ್ಕೆ ಶುರು ಮಾಡಿದ್ದರು. ಆ ಪ್ರಶ್ನೆಗೀಗ ರಾಘಣ್ಣ ಸ್ಪಷ್ಟ ಸಂದೇಶ ನೀಡಿದ್ದಾರೆ.

  ಇನ್ಮುಂದೆ ಅಶ್ವಿನಿಯವರೇ ಪಾರ್ವತಮ್ಮ ರಾಜ್‌ಕುಮಾರ್‌

  ಇನ್ಮುಂದೆ ಅಶ್ವಿನಿಯವರೇ ಪಾರ್ವತಮ್ಮ ರಾಜ್‌ಕುಮಾರ್‌

  ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಮುಂದೆ ಅವರ ಕೆಳಗಡೆಗೆನೇ ನಾವೆಲ್ಲರೂ ಹೋಗುತ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ. "ತುಂಬಾ ಜನ ಹೇಳುತ್ತಿದ್ದರು. ಇನ್ಮುಂದೆ ಅಶ್ವಿನಿಯವರೇ ಪಾರ್ವತಮ್ಮರಾಜ್‌ಕುಮಾರ್‌ ತರ ಅಂತ. ಖಂಡಿತವಾಗಿಯೂ ಅವರೇ ನಮ್ಮ ತಾಯಿ. ಅವರ ಕೆಳಗಡೆನೇ ಇನ್ಮುಂದೆ ನಾವೆಲ್ಲರೂ ಹೋಗುತ್ತೇವೆ. ನನ್ನ ಮಕ್ಕಳಾಗಲಿ, ನಾವಾಗಲಿ. ಅವರ ಕೈ ಕೆಳಗೆ ನಾವು ಹೋಗುತ್ತೇವೆ. ಅವರೇ ನಮ್ಮ ತಾಯಿಯಾಗಿ ನಿಂತುಕೊಳ್ಳುತ್ತಾರೆ. ಅವರೇ ನಮ್ಮನ್ನು ನೋಡಿಕೊಳ್ಳುತ್ತಾರೆ. ಅಶ್ವಿನಿ ಇದ್ದರೆ ನಮಗೆ ಧೈರ್ಯ ಈಗ" ಎಂದು ರಾಘವೇಂದ್ರ ರಾಜ್‌ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಆ ಚೇರ್ ಕೊಟ್ಟುಬಿಡ್ರಯ್ಯಾ ಸಾಕು.. 'ಲಕ್ಕಿಮ್ಯಾನ್' ಸಿನ್ಮಾ ನಾನು ಹೋದ ಮೇಲೂ ನನ್ನ ಜೊತೆ ಇರುತ್ತೆ: ರಾಘಣ್ಣಆ ಚೇರ್ ಕೊಟ್ಟುಬಿಡ್ರಯ್ಯಾ ಸಾಕು.. 'ಲಕ್ಕಿಮ್ಯಾನ್' ಸಿನ್ಮಾ ನಾನು ಹೋದ ಮೇಲೂ ನನ್ನ ಜೊತೆ ಇರುತ್ತೆ: ರಾಘಣ್ಣ

  ಅಣ್ಣಾವ್ರ ಕುಟುಂಬ ಏನು ಹೇಳುತ್ತೆ?

  ಅಣ್ಣಾವ್ರ ಕುಟುಂಬ ಏನು ಹೇಳುತ್ತೆ?

  ರಾಘವೇಂದ್ರ ರಾಜ್‌ಕುಮಾರ್ ಈಗಾಗಲೇ ಅಶ್ವಿನಿಯವರೇ ನಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ಅಣ್ಣಾವ್ರ ಮಕ್ಕಳು ಹಾಗೂ ಕುಟುಂಬ ಯಾವ ರೀತಿ ಸ್ಪಂದಿಸುತ್ತೋ ಸದ್ಯಕ್ಕಂತೂ ಅಸ್ಪಷ್ಟ. ಆದರೆ, ಆಶ್ವಿನಿ ಪುನೀತ್‌ ರಾಜ್‌ಕುಮಾರ್ ಇಡುತ್ತಿರುವ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಪಾರ್ವತಮ್ಮ ಅವರಂತೆಯೇ ಯಶಸ್ವಿ ಮಹಿಳೆಯಾಗಬಹುದು ಅನ್ನೋ ಸೂಚನೆಯಂತೂ ಇದೆ.

  English summary
  Raghavendra Rajkumar Says Ashwini Puneeth Rajkumar Is Like Parvathamma Rajkumar, Know More.
  Monday, October 10, 2022, 16:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X