»   » ಮತ್ತೊಮ್ಮೆ ಸವಾರಿ ಹೊರಟ ನಟ ರಘು ಮುಖರ್ಜಿ

ಮತ್ತೊಮ್ಮೆ ಸವಾರಿ ಹೊರಟ ನಟ ರಘು ಮುಖರ್ಜಿ

Posted By:
Subscribe to Filmibeat Kannada
Actor Raghu Mukharjee
ರಘು ಮುಖರ್ಜಿ ಒಂದು ವಿಶಿಷ್ಠ ಹೆಸರಿನ ಸಿನಿಮಾವೊಂದರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ನಾಯಕರಿರುವ ಚಿತ್ರಗಳಲ್ಲೇ ಜಾಸ್ತಿ ಕಾಣಿಸಿಕೊಂಡಿರುವ ರಘು, ಈ ಚಿತ್ರದಲ್ಲಿ ಏಕಮೇವಾದಿತ್ಯ. ಚಿತ್ರದ ಹೆಸರು 'ಸವಾರಿ ಟು 1000 AD'.

ಸವಾರಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಘುವಿನ ಜುಗಲ್ ಬಂದಿಯಿತ್ತು. ಆ ಚಿತ್ರ ಯಶಸ್ವಿಯಾಯ್ತು. ಅದರ ಯಶಸ್ಸನ್ನ ಎನ್‌ಕ್ಯಾಷ್ ಮಾಡಿಕೊಳ್ಳಲೆಂದೇ ಚಿತ್ರತಂಡ ಇದಕ್ಕೆ 'ಸವಾರಿ ಟು 1000 ಎಡಿ' ಈ ಹೆಸರಿಟ್ಟಿರಬೇಕು. ತಿಮ್ಮಾಪಳ್ಳಿ ಚಂದ್ರ ನಿರ್ದೇಶಕ. ಅವರೇ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳ ಹದಿನೇಳಕ್ಕೆ ಮುಹೂರ್ತ ನೆರವೇರಲಿದೆ.

ಪಿ ಚಂದ್ರಶೇಖರ್ ಎಂಬುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಿಲನ ಎಂಬ ಹೊಸ ಹುಡುಗಿಯೊಬ್ಬಳು ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ರಂಗಾಯಣ ರಘು, ರಾಮಕೃಷ್ಣ, ಚಿತ್ರಾ ಶೆಣೈ, ವೀಣಾ ಸುಂದರ್ ಈ ಚಿತ್ರದ ಕೆಲ ಪ್ರಮುಖ ಪಾತ್ರಧಾರಿಗಳು. (ಒನ್‌ಇಂಡಿಯಾ ಕನ್ನಡ)

English summary
Indian model turned Kannada actor Raghu Mukherjee new film titled as 'Savaari to 1000 AD'. Raghu will romance actress Milana in his Savaari while it is being produced by P Chandrashekar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada