»   » ಕಾಫಿ ಎಸ್ಟೇಟ್ ನಲ್ಲಿ ತುಪ್ಪದ ಹುಡುಗಿ ರಾಗಿಣಿಗೆ ಏನು ಕೆಲಸ?

ಕಾಫಿ ಎಸ್ಟೇಟ್ ನಲ್ಲಿ ತುಪ್ಪದ ಹುಡುಗಿ ರಾಗಿಣಿಗೆ ಏನು ಕೆಲಸ?

Posted By:
Subscribe to Filmibeat Kannada

ಬಣ್ಣ ಬಣ್ಣದ ಮಾರ್ಡನ್ ಉಡುಗೆ ಬಿಟ್ಟು, ಮೇಕಪ್ ಬದಿಗಿಟ್ಟು, ಉದ್ದ ಲಂಗ ಹಾಗೂ ಶರ್ಟ್ ತೊಟ್ಟು, ತಲೆಗೆ ತುರುಬು ಕಟ್ಟಿ, ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ಕಾಫಿ ಎಸ್ಟೇಟ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಕೆಲಸ ಮಾಡಿದ್ರೆ ಹೇಗೆ?

ಛೇ...!! ಗ್ಲಾಮ್ ಡಾಲ್ ಅಂತ ಕರೆಯಿಸಿಕೊಳ್ಳುವ ರಾಗಿಣಿ ದ್ವಿವೇದಿ, ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡೋದಾದ್ರೂ ಉಂಟಾ.! ಅಂತಾ ಮೂಗು ಮುರಿಯಬೇಡಿ.

ನಿಮಗೆಲ್ಲಾ ಅಚ್ಚರಿ ನೀಡಲು ನಟಿ ರಾಗಿಣಿ ದ್ವಿವೇದಿ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಮಾಡಲು ಒಪ್ಪಿಕೊಂಡಿದ್ದಾರೆ. ಅದು 'ಕಿಚ್ಚು' ಎನ್ನುವ ಸಿನಿಮಾಗಾಗಿ ಮಾತ್ರ. [ಮತ್ಸ್ಯಕನ್ಯೆ ರಾಗಿಣಿ ದ್ವಿವೇದಿ ಡೈವ್ ಹೊಡೆದಿದ್ದೆಲ್ಲಿ.?]

Ragini Dwivedi as Coffee Estate worker in 'Kichchu'

ಹೌದು, ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳುತ್ತಿರುವ 'ಕಿಚ್ಚು' ಸಿನಿಮಾದಲ್ಲಿ ನಟಿ ರಾಗಿಣಿ ಡೀ-ಗ್ಲಾಮರಸ್ ರೋಲ್ ನಲ್ಲಿ, ಅದರಲ್ಲೂ ಕಾಫಿ ತೋಟದಲ್ಲಿ ಕೂಲಿ ಮಾಡುವ ಹುಡುಗಿಯ ಪಾತ್ರ ನಿರ್ವಹಿಸಲಿದ್ದಾರೆ. [ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]

ಇದುವರೆಗೂ ಸ್ಟೈಲಿಶ್ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಬಂದಿದ್ದ ರಾಗಿಣಿಗೆ ಈ ಪಾತ್ರದ ಆಫರ್ ಬಂದಾಗ ಸರ್ ಪ್ರೈಸ್ ಆಯ್ತಂತೆ. ಪರ್ಫಾಮೆನ್ಸ್ ಗೆ ಹೆಚ್ಚು ಒತ್ತು ಇರುವ ಕಾರಣ, 'ಕಿಚ್ಚು' ಚಿತ್ರವನ್ನ ಕಣ್ಮುಚ್ಚಿಕೊಂಡು ಒಪ್ಪಿಕೊಂಡರಂತೆ ರಾಗಿಣಿ. [ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ಅಮ್ಮ' ಸಿನಿಮಾ ನಿಂತ್ಹೋಯ್ತಾ?]

ಮುಂದಿನ ತಿಂಗಳಿನಿಂದ ಚಿಕ್ಕಮಗಳೂರಿನಲ್ಲಿ ನಡೆಯಲಿರುವ 'ಕಿಚ್ಚು' ಚಿತ್ರದ ಚಿತ್ರೀಕರಣದಲ್ಲಿ ರಾಗಿಣಿ ಭಾಗವಹಿಸಲಿದ್ದಾರೆ. ಸಾಯಿ ಕುಮಾರ್, ಸುಚೇಂದ್ರ ಪ್ರಸಾದ್ ಚಿತ್ರದ ತಾರಾಬಳಗದಲ್ಲಿದ್ದಾರೆ. 'ಕಿಚ್ಚು' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
Kannada Actress Ragini Dwivedi is roped into play as Coffee Estate Worker in Kannada Movie 'Kichchu' directed by Pradeep Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada