twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ರಾಗಿಣಿ ಮಾಡಿದ ಚಿತ್ರ ಎಷ್ಟು?

    |

    'ಜುಮ್ ಜುಮ್ ಮಾಯಾ...ಜುಮ್ ಜುಮ್ ಮಾಯಾ... ಪ್ರಾಯ ಅಂದ್ರೆ ಏನಿದು ಮಾಯಾ...' ಎಂಬ ಹಾಡಿನ ಮೂಲಕ ಒಬ್ಬ ಕ್ಯೂಟ್, ಸ್ವೀಟ್ ಹುಡುಗಿ ಕನ್ನಡಿಗರ ಮುಂದೆ ಬಂದಳು. ಸೌಂದರ್ಯ ಪ್ಲಸ್ ನಟನೆ ಎರಡೂ ಇದ್ದ ಆ ಹುಡುಗಿ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಪಡೆದಳು.

    ಮೊದಲ ಹೆಜ್ಜೆಯಲ್ಲಿಯೇ ಗೆಲುವಿನ ರುಚಿ ಸವಿಯುತ್ತಾ ಬಂದ ಈ ನಟಿ ಬಳಿಕ ತುಪ್ಪದ ರುಚಿ ತೋರಿಸಿದರು. ಆ ನಟಿಯೇ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ. 'ವೀರ ಮದಕರಿ' ಸಿನಿಮಾದ ಮೂಲಕ ಕೆರಿಯಲ್ ಶುರು ಮಾಡಿದ ರಾಗಿಣಿ ಈಗ ದಶಕವನ್ನು ಪೂರೈಸಿದ್ದಾರೆ.

    ರಾಗಿಣಿ ದ್ವಿವೇದಿ ಕುರಿತ ಕೆಲವು ಸೀಕ್ರೆಟ್ ಸಂಗತಿಗಳು ರಾಗಿಣಿ ದ್ವಿವೇದಿ ಕುರಿತ ಕೆಲವು ಸೀಕ್ರೆಟ್ ಸಂಗತಿಗಳು

    ಅಂದ, ಅಭಿನಯ, ಅದೃಷ್ಟ ಈ ಮೂರು ಹೊಂದಿದ್ದ ರಾಗಿಣಿ ಕನ್ನಡದ ಟಾಪ್ ನಟಿಯರ ಪೈಕಿ ಒಬ್ಬರಾದರು. ಇದೀಗ 10 ವರ್ಷವನ್ನು ಚಿತ್ರರಂಗದಲ್ಲಿ ಪೂರೈಸಿರುವ ಸಂತಸದಲ್ಲಿ ಇರುವ ಅವರು ತಮ್ಮ ಖುಷಿಯನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ....

    ಖುಷಿ ಹಂಚಿಕೊಂಡ ರಾಗಿಣಿ

    ದಶಕ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ರಾಗಿಣಿ ''10 ವರ್ಷ ನನ್ನ ಪಯಣ ಚಿತ್ರರಂಗದಲ್ಲಿ ಆಗಿದೆ. ಆದರೆ, ನನಗೆ ಇದು ನಿನ್ನೆ ಹಾಗೂ ಇನ್ನೂ ಹೊಸತು ಎನಿಸುತ್ತಿದೆ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವನ್ನು ನನಗೆ ಸತತವಾಗಿ ನೀಡುತ್ತಿರುವುದಕ್ಕೆ ಧನ್ಯವಾದ. ಇದು ನನಗೆ ಗೌರವ ಹಾಗೂ ಮನಸ್ಸು ಮುಟ್ಟಿದೆ. ಇನ್ನು ಮುಂದಿನ ಹೊಸ ಶುರುವಿಗೆ ಚೀರ್ಸ್'' ಎಂದು ಸಂತಸ ಹಂಚಿಕೊಂಡಿದ್ದಾರೆ.

    ಮದಕರಿಯಿಂದ ಮಹಾರಾಣಿಯಾದ ರಾಗಿಣಿ

    ಮದಕರಿಯಿಂದ ಮಹಾರಾಣಿಯಾದ ರಾಗಿಣಿ

    ಮಾಡೆಲ್ ಆಗಿದ್ದ ರಾಗಿಣಿ ದ್ವಿವೇದಿ 'ವೀರ ಮದಕರಿ' ಚಿತ್ರದ ಮೂಲಕ ಸಿನಿಮಾ ಪಯಣ ಆರಂಭ ಮಾಡಿದರು. ಸುದೀಪ್ ಈ ಚಿತ್ರದ ನಾಯಕ ಹಾಗೂ ನಿರ್ದೇಶಕ ಆಗಿದ್ದರು. ಈ ಸಿನಿಮಾದ ನಂತರ 'ಶಂಕರ್ ಐಪಿಎಸ್', 'ಗಂಡೆದೆ', 'ಹೋಳಿ', 'ನಾಯಕ' ಸಿನಿಮಾಗಳಲ್ಲಿ ರಾಗಿಣಿ ನಟಿಸಿದರು. ಆದರೆ, ಈ ಸಿನಿಮಾಗಳು ದೊಡ್ಡ ಯಶಸ್ಸು ಕಾಣಲಿಲ್ಲ.

    ನಟಿ ರಾಗಿಣಿ ದ್ವಿವೇದಿ 'ಸ್ಪೆಷಲ್ ಫ್ರೆಂಡ್' ಗುಟ್ಟು-ರಟ್ಟು ನಟಿ ರಾಗಿಣಿ ದ್ವಿವೇದಿ 'ಸ್ಪೆಷಲ್ ಫ್ರೆಂಡ್' ಗುಟ್ಟು-ರಟ್ಟು

    ಮತ್ತೆ ಗೆಲ್ಲಿಸಿದ ಸುದೀಪ್ ಸಿನಿಮಾ

    ಮತ್ತೆ ಗೆಲ್ಲಿಸಿದ ಸುದೀಪ್ ಸಿನಿಮಾ

    'ವೀರ ಮದಕರಿ' ಸಿನಿಮಾದ ನಂತರ ಮತ್ತೆ ರಾಗಿಣಿಗೆ ಜಯ ಸಿಕ್ಕಿದ್ದು, 'ಕೆಂಪೇಗೌಡ' ಸಿನಿಮಾದಲ್ಲಿಯೇ. ಈ ಸಿನಿಮಾ ಕೂಡ ರಾಗಿಣಿ ಕೆರಿಯರ್ ನಲ್ಲಿ ಹಿಟ್ ಚಿತ್ರವಾಯ್ತು. ಆ ಬಳಿಕ 'ಕಳ್ಳ ಮಳ್ಳ ಸುಳ್ಳ'ದ ತುಪ್ಪ ಹಾಡು ತುಪ್ಪದ ಬೆಡಗಿ ಎಂದು ಖ್ಯಾತಿ ನೀಡಿತು. ಈ ನಡುವೆ ಮಲೆಯಾಳಂ ನಲ್ಲಿ ಒಂದು ಸಿನಿಮಾ ಮಾಡಿದರು.

    ಸ್ಟಾರ್ ಗಳ ಸಿನಿಮಾದಲ್ಲಿ ಸ್ಥಾನ

    ಸ್ಟಾರ್ ಗಳ ಸಿನಿಮಾದಲ್ಲಿ ಸ್ಥಾನ

    ಶಿವರಾಜ್ ಕುಮಾರ್ ಜೊತೆಗೆ 'ಶಿವ', ಉಪೇಂದ್ರ ಅವರ ಜೊತೆಗೆ 'ಆರಕ್ಷಕ' ಹಾಗೂ 'ಶಿವಂ' ಸಿನಿಮಾದಲ್ಲಿ ರಾಗಿಣಿ ನಟಿಸಿದರು. ಲೂಸ್ ಮಾಸ ಯೋಗಿ ಜೊತೆಗೆ 'ಬಂಗಾರಿ' ಚಿತ್ರದಲ್ಲಿ ಕಾಣಿಸಿಕೊಂಡರು. ಭಟ್ಟರ 'ಪರಪಂಚ'ವನ್ನು ಸುತ್ತು ಹಾಕಿದರು. 'ವಿಕ್ಟರಿ' ಸಿನಿಮಾದ 'ಅಕ್ಕ ನಿನ್ ಮಗಳು..' ಹಾಡು ಮತ್ತೆ ರಾಗಿಣಿಗೆ ಫೇಮ್ ತಂದು ಕೊಡ್ತು.

    ರಾಗಿಣಿ ಖಾಕಿ ಹಾಕಿದರೆ ಪ್ರೇಕ್ಷಕರಾಗುವರೇ ಕಂಗಾಲು! ರಾಗಿಣಿ ಖಾಕಿ ಹಾಕಿದರೆ ಪ್ರೇಕ್ಷಕರಾಗುವರೇ ಕಂಗಾಲು!

    ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚಾಯ್ತು

    ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚಾಯ್ತು

    ರಾಗಿಣಿ ಹೀಗಿಗಾ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬ್ರಾಂಡ್ ಆಗಿದ್ದಾರೆ. 'ರಾಗಿಣಿ ಐಪಿಎಸ್', 'ವೀರ ರಣಚಂಡಿ' 'ನಮಸ್ತೆ ಮೇಡಮ್', 'ಎಮ್ ಎಮ್ ಸಿ ಹೆಚ್', 'ದಿ ಟೆರರಿಸ್ಟ್' ಹೀಗೆ ಒಂದರ ನಂತರ ಒಂದರಂತೆ ಮಹಿಳಾ ಪ್ರಧಾನ ಸಿನಿಮಾ ಮಾಡಿದರು. ಇದರಲ್ಲಿ ಗೆದ್ದ ಚಿತ್ರಗಳಿಗಿಂತ ಸೋತ ಸಿನಿಮಾಗಳೇ ಹೆಚ್ಚು.

    30 ಸಿನಿಮಾಗಳಲ್ಲಿ ನಟನೆ

    30 ಸಿನಿಮಾಗಳಲ್ಲಿ ನಟನೆ

    ಕಳೆದ ಹತ್ತು ವರ್ಷದಲ್ಲಿ ರಾಗಿಣಿ 30 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಈ ಪೈಕಿ ತಲಾ ಒಂದೊಂದು ಮಲೆಯಾಳಂ, ಹಿಂದಿ ತಮಿಳು ಹಾಗೂ ತೆಲುಗು ಸಿನಿಮಾ ಸೇರಿಕೊಂಡಿದೆ. ಬಾಲಿವುಡ್ ನಲ್ಲಿ 'ಆರ್ ರಾಜಕುಮಾರ್' ಸಿನಿಮಾದ ಒಂದು ಹಾಡಿಗೆ ರಾಗಿಣಿ ಹೆಜ್ಜೆ ಹಾಕಿದ್ದರು. ಸದ್ಯ, 'ಅಮೇರಿಕಾದಲ್ಲಿ ಅಧ್ಯಕ್ಷ' ಹಾಗೂ 'ಗಾಂಧಿಗಿರಿ' ಚಿತ್ರದಲ್ಲಿ ಅವರು ಬ್ಯುಸಿ ಇದ್ದಾರೆ.

    English summary
    Kannada actress Ragini Dwivedi completed 10 years in kannada film industry.
    Monday, April 1, 2019, 15:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X