»   » ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ

ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ

Posted By:
Subscribe to Filmibeat Kannada

ನಟ ಶರಣ್ ಅಭಿನಯದ ಮುಂದಿನ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಈ ಹಿಂದೆ ಶರಣ್ ಅವರ 'ವಿಕ್ಟರಿ' ಸಿನಿಮಾದ 'ಯಕ್ಕ ನಿನ್ ಮಗಳು...' ಹಾಡಿನಲ್ಲಿ ಸ್ಪೆಷಲ್ ಸ್ಪೆಪ್ ಹಾಕಿದ್ದ ರಾಗಿಣಿ ಈಗ ಶರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ

ಶರಣ್ ಅಭಿನಯದ ಮೊದಲ ಚಿತ್ರದಿಂದ ಇತ್ತೀಚಿನ 'ರಾಜ್ ವಿಷ್ಣು'ವರೆಗೆ ಎಲ್ಲ ನಾಯಕಿಯರು ಉತ್ತಮ ಆಯ್ಕೆ ಎನಿಸಿಕೊಂಡಿದ್ದಾರೆ. ಈಗ ಶರಣ್ ಅವರ ಹೊಸ ಸಿನಿಮಾದಲ್ಲಿ ತುಪ್ಪದ ಹುಡುಗಿ ರಾಗಿಣಿ ನಟಿಸುತ್ತಿರುವುದು ವಿಶೇಷವಾಗಿದೆ. ಮುಂದೆ ಓದಿ...

ತೆಲುಗು ರಿಮೇಕ್ ನಲ್ಲಿ ಶರಣ್

ಶರಣ್ ಅಭಿನಯದ 'ರಾಜ್ ವಿಷ್ಣು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಬಳಿಕ ಶರಣ್ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದು, ಇದು ತೆಲುಗಿನ ಸಿನಿಮಾವೊಂದರ ರಿಮೇಕ್ ಎನ್ನಲಾಗಿದೆ.

ರಾಗಿಣಿ ದ್ವಿವೇದಿ ನಾಯಕಿ

ಶರಣ್ ಅಭಿನಯಿಸಲಿರುವ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಈ ಸಿನಿಮಾಗಾಗಿ ರಾಗಿಣಿ ಹೊಸ ಹೇರ್ ಸ್ಟೈಲ್ ಮಾಡಿಸಿದ್ದು, ಸ್ಟೈಲಿಶ್ ಲುಕ್ ನಲ್ಲಿ ಮಿಂಚಲಿದ್ದಾರಂತೆ.

ಯೋಗಾನಂದ್ ನಿರ್ದೇಶನ

'ಮುಕುಂದ ಮುರಾರಿ' ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್ ಅವರು ಶರಣ್ ನಟನೆಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕನಕಪುರದಲ್ಲಿ ಚಿತ್ರೀಕರಣ

ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದ್ದು, ಸದ್ಯ, ಕನಕಪುರದಲ್ಲಿ ಚಿತ್ರದ ಚಿತ್ರೀಕರಣ ಮಾಡುತ್ತಿದೆ.

English summary
Kannada Actress Ragini Dwivedi is selected to play lead opposite Kannada Actor Sharan in a new movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada