For Quick Alerts
  ALLOW NOTIFICATIONS  
  For Daily Alerts

  ಏಕೆ ಇತರರ ಜೀವನದ ಜೊತೆ ಆಟವಾಡುತ್ತಿದ್ದೀರಾ: ರಾಗಿಣಿ ಪ್ರಶ್ನೆ

  |

  ಕೊರೊನಾ ಭೀತಿಯಿಂದ ಬೆಂಗಳೂರು ಬಿಟ್ಟು ಹಳ್ಳಿಗಳ ಕಡೆಗೆ ಹೊರಟಿರುವವರ ಮೇಲೆ ತುಪ್ಪದ ಹುಡುಗಿ ರಾಗಿಣಿ ಕೆಂಡ ಕಾರಿದ್ದಾರೆ.

  ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲಿ ಸತತವಾಗಿ ಏರುತ್ತಿರುವ ಕಾರಣ ಹಲವರು ಬೆಂಗಳೂರು ತೊರೆದು ಹಳ್ಳಿಗಳಿಗೆ ವಾಪಸ್ ಹೋಗುತ್ತಿದ್ದಾರೆ.

  ಇಂದು ಮಧ್ಯಾಹ್ವ ಯಡಿಯೂರಪ್ಪ ಅವರು, 'ಊರಿಗೆ ಹೋಗುವವರು, ಬೆಂಗಳೂರಿಗೆ ಬರುವವರಿಗೆ ಇಂದೇ ಕೊನೆಯ ದಿನ'' ಎಂದು ಹೇಳಿಕೆ ಕೊಟ್ಟ ಮೇಲಂತೂ ಸಾವಿರಾರು ಮಂದಿ ಏಕಾಏಕಿ ಬೆಂಗಳೂರು ತೊರೆಯುತ್ತಿದ್ದಾರೆ. ಇದರ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ನಟಿ ರಾಗಿಣಿ ದ್ವಿವೇದಿ ಸಹ ಒಬ್ಬರು.

  ಯಾಕೆ ಊರು ಬಿಟ್ಟು ಹೋಗ್ತಿದ್ದೀರಾ: ರಾಗಿಣಿ ಪ್ರಶ್ನೆ

  ಯಾಕೆ ಊರು ಬಿಟ್ಟು ಹೋಗ್ತಿದ್ದೀರಾ: ರಾಗಿಣಿ ಪ್ರಶ್ನೆ

  ''ಯಾಕೆ ಊರು ಬಿಟ್ಟು ಹೋಗ್ತಿದ್ದೀರಾ? ಯಾಕೆ ಬಸ್ಸುಗಳಲ್ಲಿ, ಇತರೆ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದೀರಾ? ಯಾಕೆ ಬೇರೆಯವರ ಜೀವನದ ಜೊತೆ ಆಟವಾಡುತ್ತಿದ್ದೀರ? ಎಂದು ರಾಗಿಣಿ ಅಸಮಾಧಾನ ವ್ಯಕ್ತಪಡಿಸದ್ದಾರೆ.

  ಸಾರ್ವಜನಿಕ ಸಾರಿಗೆ ಬಳಸುವುದು ಸರಿಯಲ್ಲ: ರಾಗಿಣಿ

  ಸಾರ್ವಜನಿಕ ಸಾರಿಗೆ ಬಳಸುವುದು ಸರಿಯಲ್ಲ: ರಾಗಿಣಿ

  ಕರ್ಪ್ಯೂ ಆಗಿರೋದು, ಲಾಕ್ ಡೌನ್ ಆಗಿರೋದು, ಸೋಷಿಯಲ್ ಡಿಸ್ಟೆನ್ಸಿಂಗ್ ಮಾಡಲು ಹೇಳಿರುವುದು ನಮ್ಮ ಒಳಿತಿಗೆ ಅದನ್ನು ಬಿಟ್ಟು ಹೊರಗೆ ಬಂದಿದ್ದಲ್ಲದೆ, ಒಟ್ಟಿಗೆ ಪ್ರಯಾಣ ಮಾಡುವುದು ಸರಿಯಲ್ಲ ಎಂದು ರಾಗಿಣಿ ಆಕ್ರೋಶ ಹೊರಹಾಕಿದ್ದಾರೆ.

  ಹೊರಗೆ ಓಡೇಡಬೇಡಿ: ರಾಗಿಣಿ ಸಂದೇಶ

  ಹೊರಗೆ ಓಡೇಡಬೇಡಿ: ರಾಗಿಣಿ ಸಂದೇಶ

  ಅಷ್ಟೆ ಅಲ್ಲದೆ, ಕರ್ಪ್ಯೂ ಆದೇಶವನ್ನು ಧಿಕ್ಕರಿಸಿ ಹೊರಗೆ ಓಡಾಡುತ್ತಿದ್ದಾರೆ. ಅವರ ಜೀವನನ್ನು ಮಾತ್ರವಲ್ಲದೆ ಇತರರ ಜೀವನದ ಜೊತೆಯೂ ಅವರು ಆಟವಾಡುತ್ತಿದ್ದಾರೆ ಎಂದು ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ.

  ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸಿ: ರಾಗಿಣಿ

  ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸಿ: ರಾಗಿಣಿ

  ದಯವಿಟ್ಟು ಯಾರೂ ಸಹ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡಬೇಡಿ, ಸರ್ಕಾರ ವಿಧಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಿ, ಯಾರೂ ಸಹ ಊರು ಬಿಟ್ಟು ಹೊರಗೆ ಹೋಗಬೇಡಿ ಎಂದು ರಾಗಿಣಿ ಮನವಿ ಮಾಡಿದ್ದಾರೆ.

  English summary
  Actress Ragini Dwivedi lambasted on people who violating curfew and traveling in a bus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X