For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ಸ್ ಕಿತ್ತಾಡುವಾಗ ರಾಗಿಣಿ ಇರಲಿಲ್ವಂತೆ.?

  |

  ನಟಿ ರಾಗಿಣಿ ಸಿನಿಮಾ ವಿಷಯಗಳಿಗಿಂತ ಹೆಚ್ಚು ಖಾಸಗಿ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಖಾಸಗಿ ಹೋಟೆಲ್ ಒಂದರಲ್ಲಿ ತುಪ್ಪದ ಬೆಡಗಿಗಾಗಿ ಮಾಜಿ ಮತ್ತು ಹಾಲಿ ಬಾಯ್ ಫ್ರೆಂಡ್ಸ್ ರವಿ ಮತ್ತು ಶಿವಪ್ರಕಾಶ್ ಇಬ್ಬರು ಬಿಯರ್ ಬಾಟಲ್ ನಲ್ಲಿ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  ಈ ಬಗ್ಗೆ ಶಿವಪ್ರಕಾಶ್ ಮತ್ತು ರವಿ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಈ ಕಿತ್ತಾಟ ಮತ್ತಷ್ಟು ತಾರಕ್ಕೇರಿತ್ತು. ಹೋಟೆಲ್ ಗೆ ರಾಗಿಣಿ ಜೊತೆ ರವಿ ಊಟಕ್ಕೆ ಹೋಗಿದ್ದನ್ನು ಸಹಿಸದ ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್ 'ರಾಗಿಣಿ ಜೊತೆ ಯಾಕೆ ಬಂದಿದ್ದೀಯಾ' ಎಂದು ಹಲ್ಲೆ ಮಾಡಿದ್ದರು ಎನ್ನಲಾಗಿದ್ದು, ಹಲ್ಲೆಗೊಳಗಾದ ರವಿ ಪೊಲೀಸರಿಗೆ ದೂರು ನೀಡಿದ್ದಾರೆ.

  ಇಬ್ಬರ ಕಿತ್ತಾಟ ಜೋರಾಗುತ್ತಿದಂತೆ ನಟಿ ರಾಗಿಣಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಕೈಗೂ ಸಿಗದೆ ಸೈಲೆಂಟ್ ಆಗಿದ್ದರು. ಅಲ್ಲದೆ ದುಬೈ ಫ್ಲೈಟ್ ಹತ್ತಿದ್ದಾರೆ ಅಂತಾನು ಹೇಳಲಾಗಿತ್ತು. ಆದ್ರೀಗ ಇಬ್ಬರು ಬಾಯ್ ಫ್ರೆಂಡ್ಸ್ ಕಿತ್ತಾಟದ ಬಗ್ಗೆ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

  ನಟಿ ರಾಗಿಣಿಗಾಗಿ ಇಬ್ಬರು ವ್ಯಕ್ತಿಗಳು ಹೊಡೆದಾಟ: ಕಾರಣ ಪ್ರೀತಿಯಂತೆ.!

  ಬಾಯ್ ಫ್ರೆಂಡ್ಸ್ ಕಿತ್ತಾಟದ ಬಗ್ಗೆ ರಾಗಿಣಿ ಹೇಳಿದ್ದೇನು?

  ಬಾಯ್ ಫ್ರೆಂಡ್ಸ್ ಕಿತ್ತಾಟದ ಬಗ್ಗೆ ರಾಗಿಣಿ ಹೇಳಿದ್ದೇನು?

  'ರವಿ ಮೇಲೆ ಶಿವಪ್ರಕಾಶ್ ಹಲ್ಲೆ ಮಾಡಿದ್ದಾರೆ ಎನ್ನುವ ವಿಚಾರ ಕೇಳಿ ತುಂಬ ಶಾಕ್ ಆಗಿದೆ. ಇವರಿಬ್ಬರ ಕಿತ್ತಾಟಕ್ಕು ನನಗೂ ಏನು ಸಂಬಂಧವಿಲ್ಲ. ನಾನು ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಈ ಘಟನೆ ಅವರಿಬ್ಬರಿಗೆ ಮಾತ್ರ ಸಂಬಂಧ ಪಟ್ಟಿರುವುದು. ಅಗತ್ಯವಿದ್ದರೆ ಪೊಲೀಸರು ಪ್ರಶ್ನಿಸಿದರೆ ಹೇಳಿಕೆ ನೀಡುವೆ' ಎಂದು ರಾಗಿಣಿ ಸ್ಪಷ್ಟನೆ ನೀಡಿದ್ದಾರೆ.

  ಇಮೇಜ್ ಗೆ ಧಕ್ಕೆ ತರುವ ಕೆಲಸ ಆಗುತ್ತಿದೆ

  ಇಮೇಜ್ ಗೆ ಧಕ್ಕೆ ತರುವ ಕೆಲಸ ಆಗುತ್ತಿದೆ

  'ಅನಗತ್ಯವಾಗಿ ಈ ಸುದ್ದಿಯನ್ನು ಎಳೆದಾಡುವುದು ಮತ್ತು ವಿವಾದ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನನ್ನ ಇಮೇಜ್ ಗೆ ಧಕ್ಕೆ ತರುವಂತಹ ಕೆಲಸ ಮಾಡಿದ ಇಬ್ಬರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ನನ್ನ ಬಗ್ಗೆ ಅನಗತ್ಯ ಸುದ್ದಿಗಳನ್ನು ಹೆಚ್ಚು ಎಳೆಯಬೇಡಿ'

  ಸ್ಯಾಂಡಲ್ ವುಡ್ 'ಗಿಣಿ' ರಾಗಿಣಿ ಟೆರರಿಸ್ಟ್ ಆಗಿದಾದ್ರೂ ಹೇಗೆ.?

  ಅಂದು ರಾತ್ರಿ ಹೋಟೆಲ್ ನಲ್ಲಿ ಆಗಿದ್ದೇನು?

  ಅಂದು ರಾತ್ರಿ ಹೋಟೆಲ್ ನಲ್ಲಿ ಆಗಿದ್ದೇನು?

  ಸುಮಾರು 10 ವರ್ಷಗಳಿಂದ ಶಿವಪ್ರಕಾಶ್ ಅವರೊಂದಿಗೆ ಗೆಳೆತನ ಹೊಂದಿದ್ದ ನಟಿ ರಾಗಿಣಿ, ಕಾರಣಾಂತರಗಳಿಂದ ಶಿವಪ್ರಕಾಶ್ ಸ್ನೇಹವನ್ನ ದೂರು ಮಾಡಿಕೊಂಡಿದ್ದರು ಎನ್ನಲಾಗಿದೆ. ನಂತರ ರವಿ ಅವರ ಜೊತೆ ರಾಗಿಣಿ ಹೆಚ್ಚು ಆತ್ಮೀಯರಾಗಿದ್ದರು. ಶನಿವಾರ ರಾತ್ರಿ ರವಿ ಜೊತೆ ರಾಗಿಣಿ ಖಾಸಗಿ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಅದೇ ಹೋಟೆಲ್ ಗೆ ಬಂದ ಶಿವಪ್ರಕಾಶ್, 'ರಾಗಿಣಿ ಜೊತೆ ಯಾಕೆ ಬಂದಿದ್ದೀಯಾ ಎಂದು' ರವಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ರವಿ, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಶಿವಪ್ರಕಾಶ್ ವಿರುದ್ದ ದೂರ ದಾಖಲಿಸಿದ್ದಾರೆ.

  2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?

  ಯಾರು ಈ ಶಿವಪ್ರಕಾಶ್ ಮತ್ತು ರವಿ

  ಯಾರು ಈ ಶಿವಪ್ರಕಾಶ್ ಮತ್ತು ರವಿ

  ಸುಮಾರು ವರ್ಷಗಳಿಂದ ರಾಗಿಣಿ ಗೆಳೆಯನಾಗಿರುವ ಶಿವಪ್ರಕಾಶ್ ಗಣಿ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ. ರವಿ ಕೋರಮಂಗಲ ಆರ್ ಟಿ ಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಗಿಣಿ ಮೊದಲು ಶಿವಪ್ರಕಾಶ್ ಅವರನ್ನು ಪ್ರೀತಿಸುತ್ತಿದ್ದರಂತೆ. ಪ್ರೀತಿಯ ಸಂಕೇತವಾಗಿ ರಾಗಿಣಿ ಅವರಿಗೆ ದುಬಾರಿ ಕಾರು ಸಹ ನೀಡಿದ್ದರಂತೆ. ಇವರಿಬ್ಬರ ಪ್ರೀತಿಯ ಮಧ್ಯೆ ಈಗ ರವಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಶಿವಪ್ರಕಾಶ್ ನೀಡಿದ್ದ ಕಾರನ್ನು ಕಿತ್ತುಕೊಂಡಿದ್ದಾರಂತೆ ಎಂದು ಹೇಳಲಾಗುತ್ತಿದೆ.

  English summary
  'This is in account of the issue of Mr Shivaprakash assaulting Mr Ravi Very shocked and disappointed. I’ve been away busy at shoot. I am in no way associated with the incident in question' said ragini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X