For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ನಿಜವಾದ ಹೀರೋಗಳೊಂದಿಗೆ ರಾಗಿಣಿ ಸಂವಾದ ಮತ್ತು ಸಲಾಂ

  |

  ನಿಜವಾದ ಹೀರೋಗಳಿಗೆ ನಮಿಸುವ ಅವಕಾಶ ಇಂದು ನಟಿ ರಾಗಿಣಿ ಗೆ ದೊರೆತಿದೆ. ಯಾರಿಂದ ತಾವು ಸ್ವಚ್ಛವಾಗಿ ಬದುಕಲು ಸಾಧ್ಯವಾಗಿದೆಯೋ ಅವರಿಗೆ ಸಲಾಂ ಹೇಳಿದ್ದಾರೆ ರಾಗಿಣಿ.

  ಪೌರ ಕಾರ್ಮಿಕರೊಂದಿಗೆ ಕಾಫಿ ಕುಡಿದು ಧನ್ಯವಾದ ಹೇಳಿದ ರಾಗಿಣಿ | Ragini Dwivedi | Filmibeat kannada

  ರಾಗಿಣಿ ಅವರು ಇದು ಬಿಬಿಎಂಪಿ ಸ್ವಚ್ಛತಾ ಕಾರ್ಮಿಕರೊಂದಿಗೆ ಮಾತನಾಡಿ, ಅವರೊಂದಿಗೆ ಟೀ ಕುಡಿದು ಧನ್ಯವಾದ ಅರ್ಪಿಸಿದ್ದಾರೆ.

  ರಾಗಿಣಿ ಅವರ ಯಲಹಂಕದ ಮನೆಯ ಮುಂದೆ ಸ್ವಚ್ಛತಾ ಕಾರ್ಮಿಕರು ಕೆಲಸ ಮಾಡುವಾಗ ಅಲ್ಲಿಗೆ ತೆರಳಿ, ಇಬ್ಬರು ಕಾರ್ಮಿಕರ ಕಷ್ಟ-ಸುಖ ವಿಚಾರಿಸಿದ್ದಾರೆ ರಾಗಿಣಿ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ''ಇವರೇ ನಮ್ಮ ನಿಜವಾದ ಹೀರೋಗಳು''

  ''ಇವರೇ ನಮ್ಮ ನಿಜವಾದ ಹೀರೋಗಳು''

  ಇವರೇ ನಮ್ಮ ನಿಜವಾದ ಹೀರೋಗಳು, ಇವರು ನಗರವನ್ನು ಸ್ವಚ್ಛವಾಗಿಡುತ್ತಿರುವುದರಿಂದಲೇ ನಾವು ಯಾವುದೇ ಕಾಯಿಲೆಗಳಿಲ್ಲದೆ ಓಡಾಡುತ್ತಿದ್ದೇವೆ. ಇವರಿಗೆ ನನ್ನದೊಂದ ಸಲಾಂ ಎಂದು ರಾಗಿಣಿ ತಮ್ಮ ವಿಡಿಯೋ ದಲ್ಲಿ ಹೇಳಿದ್ದಾರೆ.

  ಸ್ವಚ್ಛತಾ ಕಾರ್ಮಿಕರೊಂದಿಗೆ ರಾಗಿಣಿ ಆಪ್ತ ಮಾತು

  ಸ್ವಚ್ಛತಾ ಕಾರ್ಮಿಕರ ಜೀವನ, ಕೆಲಸದ ಕಷ್ಟ-ಸುಖಗಳ ಬಗ್ಗೆ ವಿಚಾರಿಸಿದ ರಾಗಿಣಿ, ಅವರಿಗೆ ಟೀ ನೀಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರು ಬಿಬಿಎಂಪಿ ಬಗ್ಗೆಯೂ ಒಳ್ಳೆಯ ಮಾತನ್ನಾಡಿದ್ದಾರೆ.

  ಗ್ಲೌಸ್ ಉಚಿತವಾಗಿ ವಿತರಿಸಿದ್ದ ರಾಗಿಣಿ

  ಗ್ಲೌಸ್ ಉಚಿತವಾಗಿ ವಿತರಿಸಿದ್ದ ರಾಗಿಣಿ

  ಕೊರೊನಾ ಭೀತಿ ಆವರಿಸಿದಾಗ ರಾಗಿಣಿ ಅವರು ಗ್ಲೌಸ್‌ಗಳನ್ನು ಉಚಿತವಾಗಿ ವಿತರಿಸಿದ್ದರು. ಮಾಸ್ಕ್‌ ಗಳಷ್ಟೆ ಗ್ಲೌಸ್ ಧರಿಸುವುದು ಸಹ ಅವಶ್ಯಕ, ಹಾಗಾಗಿ ಎಲ್ಲರೂ ಗ್ಲೌಸ್‌ಗಳನ್ನು ಧರಿಸಿ ಎಂದು ರಾಗಿಣಿ ಮನವಿ ಮಾಡಿದ್ದರು.

  ಕೊರೊನಾ ದಿಂದಾಗಿ ಮನೆಯಲ್ಲಿರುವ ರಾಗಿಣಿ

  ಕೊರೊನಾ ದಿಂದಾಗಿ ಮನೆಯಲ್ಲಿರುವ ರಾಗಿಣಿ

  ಕೊರೊನಾ ಭೀತಿಯಿಂದ ರಾಗಿಣಿ ಅವರು ಸದ್ಯಕ್ಕೆ ಮನೆಯಲ್ಲಿಯೇ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಂದಿಗಿಂತಲೂ ಸಕ್ರಿಯವಾಗಿದ್ದಾರೆ. ಅಡುಗೆಯ ವಿಡಿಯೋಗಳು, ಬ್ಯೂಟಿ ಟಿಪ್ಸ್ ವಿಡಿಯೋಗಳನ್ನೂ ಸಹ ಅಪ್‌ಲೋಡ್ ಮಾಡುತ್ತಿದ್ದಾರೆ.

  English summary
  Actress Ragini Dwivedi salutes BBMP pourakarmiks She talked to two BBMP daily wagers and appreciates their work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X