»   » 'ಗಾಂಧಿಗಿರಿ' ಚಿತ್ರದಲ್ಲಿ ಪ್ರೇಮ್ ಗೆ ರಾಗಿಣಿ ನಾಯಕಿ.!

'ಗಾಂಧಿಗಿರಿ' ಚಿತ್ರದಲ್ಲಿ ಪ್ರೇಮ್ ಗೆ ರಾಗಿಣಿ ನಾಯಕಿ.!

Posted By:
Subscribe to Filmibeat Kannada

ಬಳುಕುವ ಬಳ್ಳಿಯಂತೆ ಆದ್ಮೇಲೆ 'ತುಪ್ಪದ ಬೆಡಗಿ' ರಾಗಿಣಿಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗ್ಬಿಟಿದೆ. 'ಅಕ್ಕ ಬಾಂಡ್' ತರಹದ ಚಿತ್ರಗಳಿಗೆಲ್ಲಾ ಫುಲ್ ಸ್ಟಾಪ್ ಇಟ್ಟು, ಗ್ಲಾಮರ್ ರೋಲ್ ಗಳ ತಲಾಶ್ ನಲ್ಲಿ ಇರುವ ರಾಗಿಣಿ ಇದೀಗ 'ಗಾಂಧಿಗಿರಿ' ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ.

ಅಷ್ಟಕ್ಕೂ 'ಗಾಂಧಿಗಿರಿ' ಸಿನಿಮಾ ಈ ಹಿಂದೆ ಸುದ್ದಿ ಆಗಿದ್ದು 'ಹಿಟ್ಲರ್' ನಿಂದ.! ಹೇಗೆ ಅಂದ್ರೆ....ಮೊದಲು ಈ ಚಿತ್ರಕ್ಕೆ 'ಹಿಟ್ಲರ್' ಅಂತ ಶೀರ್ಷಿಕೆ ಇಡಲಾಗಿತ್ತು. ಟೈಟಲ್ ಕಾಂಟ್ರವರ್ಸಿ ಆದ್ಮೇಲೆ 'ಗಾಂಧಿಗಿರಿ' ಅಂತ ಬದಲಾವಣೆ ಮಾಡಲಾಯ್ತು. ['ಗಾಂಧಿ'ಯಾಗಿ ಬದಲಾದ ಜೋಗಿ ಪ್ರೇಮ್ 'ಹಿಟ್ಲರ್']


Ragini Dwivedi to play lead in Prem starrer 'Gandhigiri'

'ಗಾಂಧಿಗಿರಿ' ಚಿತ್ರಕ್ಕೆ 'ಜೋಗಿ' ಪ್ರೇಮ್ ನಾಯಕ. ಪ್ರೇಮ್ ತಾಯಿ ಪಾತ್ರದಲ್ಲಿ ಅರುಂಧತಿ ನಾಗ್ ನಟಿಸಲಿದ್ದಾರೆ. ಇನ್ನೂ ನಿರ್ದೇಶನ ಮಾಡುತ್ತಿರುವವರು ರಘು ಹಾಸನ್. ['ಜೋಗಿ'ಗೆ ಮತ್ತೆ ಅಮ್ಮನಾದ ಅರುಂಧತಿ ನಾಗ್..!]


Ragini Dwivedi to play lead in Prem starrer 'Gandhigiri'

ನಟನೆಯಿಂದ ಕೊಂಚ ಬ್ರೇಕ್ ತಗೊಂಡು ಮರಳಿ ಡೈರೆಕ್ಟರ್ ಕ್ಯಾಪ್ ತೊಡಲು ಸಿದ್ಧತೆ ಮಾಡಿಕೊಂಡಿದ್ದ ಪ್ರೇಮ್, 'ದಿ ವಿಲನ್' ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ. ಇದೇ ತಿಂಗಳ 12 ರಂದು 'ದಿ ವಿಲನ್' ಮುಹೂರ್ತ ನಿಗದಿ ಆಗಿದೆ. [ಸುದೀಪ್ Vs ಪ್ರೇಮ್ ಸ್ಯಾಂಡಲ್ ವುಡ್ 'ಹಿಟ್ಲರ್' ಯಾರು?]


Ragini Dwivedi to play lead in Prem starrer 'Gandhigiri'

ಇದರ ನಡುವೆ ಆಗಸ್ಟ್ 17 ರಿಂದ 'ಗಾಂಧಿಗಿರಿ' ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಬಿಜಿ ಶೆಡ್ಯೂಲ್ ನ ಪ್ರೇಮ್ ಹೇಗೆ ಮ್ಯಾನೇಜ್ ಮಾಡ್ತಾರೋ..?

English summary
Kannada Actress Ragini Dwivedi is roped into play female lead in 'Jogi' Prem starrer 'Gandhigiri'. The movie is directed by Raghu Hassan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada