For Quick Alerts
  ALLOW NOTIFICATIONS  
  For Daily Alerts

  'ಕಾನೂನಿನ ಮೇಲೆ ನನ್ನ ನಂಬಿಕೆ ಬಲಗೊಂಡಿದೆ' ಎಂದು ಪೂಜೆಯ ಫೋಟೋ ಹಂಚಿಕೊಂಡ ನಟಿ ರಾಗಿಣಿ

  |

  ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟಿ ರಾಗಿಣಿ ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದು, ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಸುಮಾರು 140 ಕ್ಕೂ ಹೆಚ್ಚು ದಿನಗಳು ಜೈಲು ವಾಸ ಅನುಭವಿಸಿದ್ದ ರಾಗಿಣಿಗೆ ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

  ಜೈಲಿನಿಂದ ಹೊರಗೆ ಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಗಿಣಿ, 'ನ್ಯಾಯಕ್ಕೆ ಸಿಕ್ಕ ಜಯ ಇದು, ಸಾಕಷ್ಟು ವಿಚಾರಗಳನ್ನು ಮಾತನಾಡುವುದು ಬಾಕಿ ಇದೆ, ಪ್ರೆಸ್ ಮೀಟ್ ಮಾಡಿ ಎಲ್ಲವನ್ನು ಚರ್ಚೆ ಮಾಡುತ್ತೇನೆ, ಸದ್ಯಕ್ಕೆ ಏನೂ ಹೇಳುವುದಿಲ್ಲ' ಎಂದ ಹೇಳಿದ್ದರು.

  140 ದಿನದ ನಂತರ ರಾ'ಗಿಣಿ' ಬಿಡುಗಡೆ: ಕಾನೂನು ಹೋರಾಟದಲ್ಲಿ ನಟಿ ಕಂಡ ಏಳು ಬೀಳು!

  ಇದೀಗ ರಾಗಿಣಿ ಕುಟುಂಬದ ಜೊತೆ ಪೂಜೆ ಸಮಾರಂಭದಲ್ಲಿ ಭಾಗಿಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ವರ್ಷಕ್ಕೆ ಎಲ್ಲರಿಗೂ ಶುಭಾಶಯ ಕೋರಿ, ಈ ವರ್ಷದಿಂದ ಕಾನೂನಿನ ಮೇಲಿದ್ದ ನಂಬಿಕೆ ಬಲವಾಗಿದೆ ಎಂದು ಹೇಳಿದ್ದಾರೆ.

  'ಈ ಹೊಸ ವರ್ಷ ಕಾನೂನಿನ ನಿಯಮ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿನ ನಂಬಿಕೆ ಬಲಗೊಂಡಿದೆ. ದೇವರ ಆಶೀರ್ವಾದದಿಂದ ನಾನು ಕೆಟ್ಟದರಿಂದ ಒಳ್ಳೆಯದನ್ನು ಜಯಿಸಿದ್ದೀನಿ. ನನ್ನ ಕುಟುಂಬ, ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ನಾನು ಗೆದ್ದು ಬರಲು ನನಗೆ ಶಕ್ತಿ ನೀಡಿತು. ಈ ವರ್ಷ ಎಲ್ಲರಿಗೂ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.

  ಇನ್ನು ಇಂದು ರಾಗಿಣಿ ಕೋರ್ಟಿಗೆ ಹಾಜರಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ರಾಗಿಣಿ, 'ಕನ್ನಡ ಚಿತ್ರರಂಗದಲ್ಲಿ 12 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದಲ್ಲಿ ನಾನು ಮುಗ್ಧೆ' ಎಂದು ರಾಗಿಣಿ ಹೇಳಿದ್ದಾರೆ.

  ಸುದೀಪ್ ಮನೆ ಅಡವಿಟ್ಟು ಮಾಡಿದ ಸಿನಿಮಾ ಇದು | Filmibeat Kannada

  'ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ತುಂಬ ನೊಂದಿದ್ದೇವೆ. ನಾನು ತಪ್ಪು ಮಾಡಿಲ್ಲ ಎಂದು ವಿವರಣೆ ಕೊಡುವ ಅವಶ್ಯಕತೆ ಇಲ್ಲ. ನನಗೆ ಉಸಿರಾಡಲು ಸಮಯಕೊಡಿ, ಒಂದಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ' ಎಂದು ಹೇಳಿದ್ದಾರೆ.

  English summary
  Actress Ragini Dwivedi wishing everybody a happy New Year, shared a few pictures with her family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X