For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ನಟನೆಯ ಸಿನಿಮಾಕ್ಕೆ ಬಾಲಿವುಡ್‌ನಲ್ಲಿ ಸಖತ್ ಡಿಮ್ಯಾಂಡ್‌!

  |

  ನಟಿ ರಾಗಿಣಿ ದ್ವಿವೇದಿ ಈಗ ಪಂಜರದ ಗಿಣಿಯಾಗಿದ್ದಾರೆ. ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

  ನಟಿ ರಾಗಿಣಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ರಾಗಿಣಿ ಅಭಿನಯಿಸುತ್ತಿದ್ದ ಸಿನಿಮಾಗಳ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ರಾಗಿಣಿ ವಿರುದ್ಧ ಸಾರ್ವಜನಿಕ ಆಕ್ರೋಶವೊಂದು ಎದ್ದಿದ್ದು, ರಾಗಿಣಿ ಅಭಿನಯದ ಸಿನಿಮಾಗಳ ಮೇಲೆ ಈ ಪ್ರಕರಣ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.

  ನಟಿ ರಾಗಿಣಿ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿ

  ಆದರೆ ಇದಕ್ಕೆ ವಿರುದ್ಧವೆಂಬಂತೆ ರಾಗಿಣಿ ನಟನೆಯ ಸಿನಿಮಾ ಒಂದಕ್ಕೆ ಬಾಲಿವುಡ್‌ ನಲ್ಲಿ ಸಖತ್ ಬೇಡಿಕೆ ಕುದುರಿದೆ. ಬಾಲಿವುಡ್‌ ನ ಸ್ಟಾರ್ ನಟಿ ಆ ಸಿನಿಮಾದ ರೀಮೇಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ!

  'ದಿ ಟೆರರಿಸ್ಟ್' ಸಿನಿಮಾಕ್ಕೆ ಬೇಡಿಕೆ

  'ದಿ ಟೆರರಿಸ್ಟ್' ಸಿನಿಮಾಕ್ಕೆ ಬೇಡಿಕೆ

  2018 ರಲ್ಲಿ ಪಿ.ಸಿ.ಶೇಖರ್ ನಿರ್ದೇಶನದ 'ದಿ ಟೆರರಿಸ್ಟ್' ಹೆಸರಿನ ಸಿನಿಮಾ ಒಂದು ಬಿಡುಗಡೆ ಆಗಿತ್ತು. ರಾಗಿಣಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲವಾದರೂ, ಭಿನ್ನ ಕತೆಗೆ ಹಾಗೂ ಮಹಿಳಾ ಪ್ರಾಧಾನ್ಯ ಸಿನಿಮಾ ಎಂಬ ಕಾರಣಕ್ಕೆ ತುಸು ಗಮನ ಸೆಳೆದಿತ್ತು.

  ಬಾಲಿವುಡ್‌ನಲ್ಲಿ ಸಖತ್ ಬೇಡಿಕೆ

  ಬಾಲಿವುಡ್‌ನಲ್ಲಿ ಸಖತ್ ಬೇಡಿಕೆ

  ಈಗ ಇದೇ ಸಿನಿಮಾಕ್ಕೆ ಬಾಲಿವುಡ್‌ನಲ್ಲಿ ಸಖತ್ ಬೇಡಿಕೆ ಉಂಟಗಿದೆಯಂತೆ. ಎಕೆಲಾನ್ ಪ್ರೊಡಕ್ಷನ್‌ನ ನಿರ್ಮಾಪಕ ವಿಶಾಲ್ ರಾಣಾ ಎಂಬುವರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿದ್ದು, ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರಂತೆ.

  ಸೋನಮ್ ಕಪೂರ್ ಅಥವಾ ವಿದ್ಯಾ ಬಾಲನ್

  ಸೋನಮ್ ಕಪೂರ್ ಅಥವಾ ವಿದ್ಯಾ ಬಾಲನ್

  ರಾಗಿಣಿ ನಟನೆಯ ಪಾತ್ರವನ್ನು ಹಿಂದಿಯಲ್ಲಿ ನಟಿ ವಿದ್ಯಾ ಬಾಲನ್ ಅಥವಾ ಸೋನಮ್ ಕಪೂರ್ ನಿರ್ವಹಿಸಿದ್ದಾರಂತೆ. ಅದರಲ್ಲಿಯೂ ನಟಿ ಸೋನಮ್ ಕಪೂರ್ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

  Sanjjana ಗೊಳಾಟಕ್ಕೆ full stop | Filmibeat Kannada
  ಇಬ್ಬರು ಸಹೋದರಿಯರ ಕತೆ

  ಇಬ್ಬರು ಸಹೋದರಿಯರ ಕತೆ

  'ದಿ ಟೆರರಿಸ್ಟ್' ಸಿನಿಮಾವು ರೇಷ್ಮಾ ಹಾಗೂ ಆಸ್ಮಾ ಹೆಸರಿನ ಇಬ್ಬರು ಸಹೋದರಿಯರ ಕತೆಯಾಗಿದ್ದು. ಆಸ್ಮಾ ಳ ಅಪಹರಣವಾದಾಗ, ಆಕೆಯನ್ನು ಬಿಡಿಸಿಕೊಂಡು ಬರಲು ಸಹೋದರಿ ರೇಷ್ಮಾ ಕೆಲವು ಸಮಾಜ ವಿರೋಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದೇ ಸಿನಿಮಾ ಕತೆಯ ಎಳೆಯಾಗಿದೆ.

  ನಟಿ ರಾಗಿಣಿ ಅರೆಸ್ಟ್: 'ಗಾಂಧಿಗಿರಿ'ಗೆ ಹೆಚ್ಚಿದ ತಲೆನೋವು

  English summary
  Actress Ragini's movie 'The Terrorist' movie's Hindi remake rights sold. Sonam Kapoor or Vidya Balan may act in movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X