For Quick Alerts
  ALLOW NOTIFICATIONS  
  For Daily Alerts

  'ಶಿವಾಜಿ ಸುರತ್ಕಲ್' ಸಿನಿಮಾ ವೀಕ್ಷಿಸಿದ ರಾಹುಲ್ ದ್ರಾವಿಡ್

  |
  Rahul Dravid watches Shivaji Surathkal in a special screening

  ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್' ಸಿನಿಮಾ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಇದೀಗ, ಸಿನಿಮಾ ಬಿಡುಗಡೆಗೂ ಮುಂಚೆಯೇ ವಿಶೇಷ ವ್ಯಕ್ತಿಯೊಬ್ಬರು ಸಿನಿಮಾ ನೋಡಿದ್ದಾರೆ.

  ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಇಂದು ಸುರತ್ಕಲ್ ಸಿನಿಮಾ ವೀಕ್ಷಿಸಿದ್ದಾರೆ. ರಿಲೀಸ್ ಗೂ ಮುಂಚೆ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದ್ರಾವಿಡ್ ಭಾಗಿಯಾಗಿದ್ದರು.

  ಶಿವರಾತ್ರಿ ಹಬ್ಬದ ಪ್ರಯುಕ್ತ 'ಶಿವಾಜಿ ಸುರತ್ಕಲ್' ಆಗಿ ರಮೇಶ್ ನಿಮ್ಮ ಮುಂದೆಶಿವರಾತ್ರಿ ಹಬ್ಬದ ಪ್ರಯುಕ್ತ 'ಶಿವಾಜಿ ಸುರತ್ಕಲ್' ಆಗಿ ರಮೇಶ್ ನಿಮ್ಮ ಮುಂದೆ

  ಈ ಖುಷಿಯನ್ನ ಸ್ವತಃ ರಮೇಶ್ ಅರವಿಂದ್ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರ ಕ್ರೈಂ ಥ್ರಿಲ್ಲಿಂಗ್ ಕಥಾಹಂದರವನ್ನು ಹೊಂದಿದ್ದು, ಈಗಾಗಲೇ ಟ್ರೈಲರ್ ಕುತೂಹಲ ಹೆಚ್ಚಿಸಿದೆ.

  ರಮೇಶ್ ಅರವಿಂದ್ ಜೊತೆಯಲ್ಲಿ ರಾಧಿಕಾ ಚೇತನ್, ಆರೋಹಿ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ. ಜೂಡಾ ಸ್ಯಾಂಡಿ ಸಂಗೀತವಿದ್ದು, ಗುರುಪ್ರಸಾದ್ ಛಾಯಾಗ್ರಹಣ ಹೊಂದಿದೆ.

  English summary
  Indian ex cricket player Rahul Dravid has watch ramesh aravind starrer Shivaji Surathkal movie before release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X