twitter
    For Quick Alerts
    ALLOW NOTIFICATIONS  
    For Daily Alerts

    ಬಾಹುಬಲಿ ಚಿತ್ರದಿಂದ ಬಾಕ್ಸಾಫೀಸ್ ದಾಖಲೆಗಳ ಧೂಳಿಪಟ

    By ಜೇಮ್ಸ್ ಮಾರ್ಟಿನ್
    |

    ನಿರ್ದೇಶಕ ಶ್ರೀಶೈಲ ಎಸ್. ರಾಜಮೌಳಿ ಅವರು ಬಳ್ಳಾರಿಯಲ್ಲಿ ಸಕುಟುಂಬ, ಸಪರಿವಾರ ಸಮೇತ 'ಬಾಹುಬಲಿ' ವೀಕ್ಷಿಸಿ ಬಾಕ್ಸಾಫೀಸ್ ಕಲೆಕ್ಷನ್ ವಿವರ ಕೂಡಾ ನೀಡಿದ್ದರು. ವಿಶ್ವದೆಲ್ಲೆಡೆ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಹು ಭಾಷಾ ಚಿತ್ರ ಬಾಹುಬಲಿ ಬಿಡುಗಡೆಯಾದ ಮೂರನೇ ದಿನದ ಅಂತ್ಯಕ್ಕೆ ಬಂಡವಾಳದ ಶೇ 90ರಷ್ಟು ಅಸಲು ಬಂದಿದೆ. 160 ಕೋಟಿ ರು ಪಾಲು ಸಿಕ್ಕಿದೆ. ಜವಾಬ್ದಾರಿ ಹೆಚ್ಚಿದೆ ಎಂದಿದ್ದರು.

    ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬಂದ ಭಾರತದ ಅತ್ಯಂತ ದುಬಾರಿ ವೆಚ್ಚ(ಸುಮಾರು 250 ಕೋಟಿ ರು) 'ಬಾಹುಬಲಿ' ಯು.ಎಸ್.ಎ ಬಾಕ್ಸಾಫೀಸ್ ನಲ್ಲೂ ಸದ್ದು ಮಾಡಿದೆ. ಜಗತ್ತಿನೆಲ್ಲೆಡೆ ಸೇರಿ 4,000ಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆ ಕಂಡು ದಾಖಲೆ ಬರೆದಿದೆ. [ಬಾಹುಬಲಿ 3 ದಿನಕ್ಕೆ ಶೇ 90ರಷ್ಟು ಅಸಲು ಗಳಿಕೆ]

    ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 169 ಕೋಟಿ ರು ಗಳಿಸಿ ಎಲ್ಲಾ ಸಿನಿಮಾಗಳ ದಾಖಲೆ ಮುರಿ 'ಬಾಹುಬಲಿ' ಜಾಗತಿಕವಾಗಿ ಎಲ್ಲಾ ಲೆಕ್ಕಾಚಾರ 197 ಪ್ಲಸ್ ಕೋಟಿ ರು ಗಳಿಕೆಯಾಗಿತ್ತು. ನಿರೀಕ್ಷೆಯಂತೆ ನಾಲ್ಕು ದಿನಕ್ಕೆ 200 ಕೋಟಿ ರು ಗಡಿ ದಾಟಿತು. ಐದನೇ ದಿನಕ್ಕೆ (ಮಂಗಳವಾರ ಜುಲೈ 14) ಸರಿ ಹೊಂದುವಂತೆ ಚಿತ್ರದ ಗಳಿಕೆ ವಿವರ ಮುಂದಿದೆ...

    ಗಳಿಕೆ ಹೆಚ್ಚಳಕ್ಕೆ ಪ್ರೇಕ್ಷಕರೇ ಕಾರಣ

    ಗಳಿಕೆ ಹೆಚ್ಚಳಕ್ಕೆ ಪ್ರೇಕ್ಷಕರೇ ಕಾರಣ

    ವಿಮರ್ಶಕರ ಮೆಚ್ಚುಗೆ ಮಾತಿಗಿಂತ ಪ್ರೇಕ್ಷಕರು ನೀಡಿದ ಒನ್ ಲೈನ್ ವಿಮರ್ಶೆಯಿಂದಾಗಿ ಬಾಹುಬಲಿ ಚಿತ್ರ ದಿನದಿಂದ ದಿನಕ್ಕೆ ಭರ್ಜರಿ ಗಳಿಕೆ ಕಾಣುತ್ತಿದೆ. ಶನಿವಾರದಂದು ಜಾಗತಿಕ ಮಾರುಕಟ್ಟೆ ಲಾಭ ಸೇರಿಸಿ 65 ಕೋಟಿ ರು (ನಿವ್ವಳ 52 ಕೋಟಿ ರು) ಗಳಿಸಿ ಹೊಸ ದಾಖಲೆ ಕಂಡಿತ್ತು.

    ಹಿಂದಿಗೆ ಡಬ್ ಆಗಿರುವ ಬಾಹುಬಲಿ ದಾಖಲೆ ಗಳಿಕೆ

    ಹಿಂದಿಗೆ ಡಬ್ ಆಗಿರುವ ಬಾಹುಬಲಿ ದಾಖಲೆ ಗಳಿಕೆ ಮುಂದುವರೆದಿದೆ ಎಂದಿರುವ ಮಾರುಕಟ್ಟೆ ತಜ್ಞ ತರಣ್ ಆದರ್ಶ್, ಶುಕ್ರವಾರದಿಂದ ಮಂಗಳವಾರದ ತನಕ ವಿವರ ಬಿಚ್ಚಿಟ್ಟಿದ್ದಾರೆ. ಒಟ್ಟಾರೆ 34.55 ಕೋಟಿ ರು ಗಳಿಸಿದೆ.

    ಐದು ದಿನಕ್ಕೆ 230 ಕೋಟಿ ರು ಬಂದಿದೆ

    ಐದು ದಿನಕ್ಕೆ 230 ಕೋಟಿ ರು ಬಂದಿದೆ ಮೊದಲ ವಾರದೊಳಗೆ ಚಿತ್ರಕ್ಕೆ ಹೂಡಿದ್ದ ಬಂಡವಾಳ ಕೈ ಸೇರಲಿದೆ.

    ಐಎಂಡಿಬಿ ರೇಟಿಂಗ್ ನಲ್ಲೂ ಮುಂದು

    ಐಎಂಡಿಬಿ ರೇಟಿಂಗ್ ನಲ್ಲೂ ಮುಂದು 300 ಚಿತ್ರದ ರೇಟಿಂಗ್ ಹಿಂದಿಕ್ಕಿದ ಬಾಹುಬಲಿ.

    ಚಿತ್ರದ ಹೆಗ್ಗಳಿಕೆಗಳು

    ಚಿತ್ರದ ಹೆಗ್ಗಳಿಕೆಗಳು

    ಯುಎಸ್ ನಲ್ಲಿ ತೆಲುಗು ಚಿತ್ರಗಳು ಎಂದೂ ಕಾಣದ ಹಣದ ಹೊಳೆಯನ್ನು ಹರಿಸುತ್ತಿದೆ.
    * ಬಿಡುಗಡೆಯಾದ 36 ಗಂಟೆಗಳಲ್ಲೇ 100 ಕೋಟಿ ರು ಗಳಿಕೆ ಕ್ಲಬ್ ಸೇರಿತು.
    * ಬಿಡುಗಡೆಯಾದ 4 ದಿನಗಳಲ್ಲೇ 200 ಕೋಟಿ ರು ಗಳಿಸಿದೆ.
    * ಚಲನಚಿತ್ರಕ್ಕಾಗಿ ಪ್ರತ್ಯೇಕ ಮ್ಯೂಸಿಯಂ ಹೊಂದಿರುವ ಏಕೈಕ ಚಿತ್ರ.
    * ಬಿಬಿಸಿ ಸಾಕ್ಷ್ಯಚಿತ್ರದಲ್ಲೂ ಬಾಹುಬಲಿ ಬಗ್ಗೆ ಪ್ರಸ್ತಾಪಿಸಲಾಗಿದೆ.

    English summary
    Baahubali film which released in multiple languages managed to gross Rs 60 odd crores over all on day one, by the end of two days, the film crossed Rs 100 crore mark and by the end of four days, the film crossed Rs 200 crore mark.
    Wednesday, July 15, 2015, 16:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X