»   » ಬಾಹುಬಲಿ 3 ದಿನಕ್ಕೆ ಶೇ 90ರಷ್ಟು ಅಸಲು ಗಳಿಕೆ

ಬಾಹುಬಲಿ 3 ದಿನಕ್ಕೆ ಶೇ 90ರಷ್ಟು ಅಸಲು ಗಳಿಕೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಶ್ರೀಶೈಲ ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ ವಿಶ್ವದೆಲ್ಲೆಡೆ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಹು ಭಾಷಾ ಚಿತ್ರ ಬಾಹುಬಲಿ ಬಿಡುಗಡೆಯಾದ ಮೂರನೇ ದಿನದ ಅಂತ್ಯಕ್ಕೆ ಹಾಕಿದ ಬಂಡವಾಳದ ಶೇ 90ರಷ್ಟು ಅಸಲು ವಾಪಸ್ ತಂದು ಕೊಟ್ಟಿದೆಯಂತೆ.

ನಾಲ್ಕನೇ ದಿನದ ಆರಂಭಕ್ಕೂ ಮುನ್ನವೇ 200 ಕೋಟಿ ರು ನಿವ್ವಳ ಗಳಿಕೆ ಮಾಡಿರುವ ವರದಿಗಳು ಬಂದಿವೆ. ಜಾಗತಿಕವಾಗಿ ಎಲ್ಲಾ ಲೆಕ್ಕಾಚಾರ 197 ಪ್ಲಸ್ ಕೋಟಿ ರು ಗಳಿಕೆಯಾಗಿದೆ, ಇದು ಬಿಗಿನಿಂಗ್ ಅಷ್ಟೇ ಇನ್ನೂ ಗಳಿಕೆ ಬಾಕಿ ಇದೆ ಎಂದು ಪಂಡಿತರು ಹೇಳುತ್ತಿದ್ದಾರೆ. ಎಲ್ಲಾ ಕಳೆದು ಲೆಕ್ಕಾಚಾರ ಹಾಕಿದರೂ 160 ಪ್ಲಸ್ ಗಳಿಕೆಯಂತೂ ಬಂದಿದೆ.

ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬಂದ ಭಾರತದ ಅತ್ಯಂತ ದುಬಾರಿ ವೆಚ್ಚ(ಸುಮಾರು 250 ಕೋಟಿ ರು) 'ಬಾಹುಬಲಿ' ಯು.ಎಸ್.ಎ ಬಾಕ್ಸಾಫೀಸ್ ನಲ್ಲೂ ಸದ್ದು ಮಾಡಿದೆ. ಜಗತ್ತಿನೆಲ್ಲೆಡೆ ಸೇರಿ 4,000ಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆ ಕಂಡು ದಾಖಲೆ ಬರೆದಿದೆ. [ಎರಡು ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?]

'ಬಾಹುಬಲಿ' ತೆಲುಗು ಚಿತ್ರ ಮೊದಲ ದಿನವೇ 66 ಕೋಟಿ ರು ನಿವ್ವಳ ಗಳಿಕೆ (75 ಕೋಟಿ ರು ಒಟ್ಟಾರೆ) ಮಾಡುವ ಮೂಲಕ ಅಮೀರ್ ಖಾನ್ ಅವರ 'ಪಿಕೆ' ಚಿತ್ರದ ದಾಖಲೆ ಮುರಿದಿತ್ತು. ಈಗ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 169 ಕೋಟಿ ರು ಗಳಿಸಿ ಎಲ್ಲಾ ಟಾಲಿವುಡ್ ಸಿನಿಮಾಗಳ ದಾಖಲೆ ಮುರಿದಿದೆ.

ಗಳಿಕೆ ಹೆಚ್ಚಳಕ್ಕೆ ಪ್ರೇಕ್ಷಕರೇ ಕಾರಣ

ವಿಮರ್ಶಕರ ಮೆಚ್ಚುಗೆ ಮಾತಿಗಿಂತ ಪ್ರೇಕ್ಷಕರು ನೀಡಿದ ಒನ್ ಲೈನ್ ವಿಮರ್ಶೆಯಿಂದಾಗಿ ಬಾಹುಬಲಿ ಚಿತ್ರ ದಿನದಿಂದ ದಿನಕ್ಕೆ ಭರ್ಜರಿ ಗಳಿಕೆ ಕಾಣುತ್ತಿದೆ. ಶನಿವಾರದಂದು ಜಾಗತಿಕ ಮಾರುಕಟ್ಟೆ ಲಾಭ ಸೇರಿಸಿ 65 ಕೋಟಿ ರು (ನಿವ್ವಳ 52 ಕೋಟಿ ರು) ಗಳಿಸಿ ಹೊಸ ದಾಖಲೆ ಕಂಡಿತ್ತು.

ಜಾಗತಿಕ ಮಾರುಕಟ್ಟೆ ಲಾಭ

ಭಾನುವಾರದಂದು ಜಾಗತಿಕ ಮಾರುಕಟ್ಟೆ ಲಾಭ ಸೇರಿಸಿ 70 ಕೋಟಿ ರು (ನಿವ್ವಳ 57 ಕೋಟಿ ರು) ಗಳಿಸಿತು.

ಅತ್ತಾರಿಂಟಿಕಿ ದಾರೇದಿ ಗಳಿಕೆ ದಾಖಲೆ ಢಮಾರ್

ಪವನ್ ಕಲ್ಯಾಣ್ ಅವರ ಅತ್ತಾರಿಂಟಿಕಿ ದಾರೇದಿ ಚಿತ್ರದ ಒಟ್ಟಾರೆ ಗಳಿಕೆಯೇ 74.88 ಕೋಟಿ ರು ನಷ್ಟಿತ್ತು. ಬಾಹುಬಲಿ ಈ ಎಲ್ಲಾ ದಾಖಲೆಯನ್ನು ಅಳಿಸಿ ಹಾಕಿ ಹೊಸ ಮಟ್ಟಕ್ಕೇರಿದೆ. ಈ ಮೂಲಕ ಚಿತ್ರಕ್ಕೆ ಹಾಕಿದ ಬಂಡವಾಳದ ಶೇ 90ರಷ್ಟು ಮೊತ್ತ ಮೊದಲ ವೀಕೆಂಡ್ ನಲ್ಲೇ ಬಂದು ಬಿಟ್ಟಿದೆ.

ವೀಕೆಂಡ್ ಗಳಿಕೆ ಅಸಲಿ ಲೆಕ್ಕಾಚಾರ ಹೀಗಿದೆ

ಬಿಡುಗಡೆಯಾದ ಮೊದಲ ವೀಕೆಂಡ್ ನಲ್ಲಿ ವಿವಿಧ ಭಾಷೆಗಳಲ್ಲಿ ಎಷ್ಟೆಷ್ಟು ಗಳಿಕೆಯಾಗಿದೆ ಎಂಬ ಅಸಲಿ ಲೆಕ್ಕಾಚಾರ ಇಲ್ಲಿದೆ.

ಕೇರಳದಲ್ಲೂ ಗಳಿಕೆ ಭರ್ಜರಿಯಾಗಿದೆ.

ಪೈರಸಿಯಿಂದಾಗಿ ಅನೇಕ ಚಿತ್ರಗಳು ಚಿತ್ರಮಂದಿರ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲೇ ಬಾಹುಬಲಿ ಕೇರಳದಲ್ಲೂ ಸದ್ದು ಮಾಡುತ್ತಿದೆ.

ಯುಎಸ್ ನಲ್ಲಿ ಎಂದೂ ಕಾಣದ ಹಣದ ಹೊಳೆ

ಯುಎಸ್ ನಲ್ಲಿ ತೆಲುಗು ಚಿತ್ರಗಳು ಎಂದೂ ಕಾಣದ ಹಣದ ಹೊಳೆಯನ್ನು ಹರಿಸುತ್ತಿದೆ.

ಹಿಂದಿ ಡಬ್ ಚಿತ್ರಕ್ಕೂ ಬಹುಪರಾಕ್

ಹಿಂದಿ ಡಬ್ ಚಿತ್ರಕ್ಕೂ ಬಹುಪರಾಕ್ ಎಂದ ಪ್ರೇಕ್ಷಕರು. ತರಣ್ ಆದರ್ಶ್ ಅವರಿಂದ ಗಳಿಕೆ ವಿವರ.

English summary
Baahubali has been literally minting money at the Indian Box Office, the film directed by SS Rajamouli has left the critics and fans so impressed that even the weekday shows are getting booked much in advance. At the end of the first weekend, the film will has grossed Rs 160 crores.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada