For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನ ಮಗಳ ಜೊತೆ ರಾಜಮೌಳಿ ಮಗನ ಮದುವೆ

  By Pavithra
  |

  ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಸದಾ ಸಿನಿಮಾ ಬಗ್ಗೆ ಮಾತನಾಡುತ್ತಿದ್ದ ಮನೆಯಲ್ಲಿ ಈಗ ಮದುವೆಯದ್ದೇ ಸದ್ದು ಗದ್ದಲ. ಹೌದು ರಾಜಮೌಳಿಯ ಮಗ ಕಾರ್ತಿಕೇಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

  ಇತ್ತೀಚಿಗಷ್ಟೆ ರಾಜಮೌಳಿ ಮನೆಯಲ್ಲಿ ಮಗನ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು ಮನೆಯಲ್ಲಿ ಈಗಾಗಲೇ ವಿವಾಹಕ್ಕೆ ತಯಾರಿ ಆರಂಭವಾಗಿದೆ. ವಿಶೇಷ ಎಂದರೆ ರಾಜಮೌಳಿ ಅವರ ಪುತ್ರ ಕಾರ್ತಿಕೇಯ ಸ್ಟಾರ್ ನಟನ ಕುಟುಂಬಕ್ಕೆ ಅಳಿಯನಾಗುತ್ತಿದ್ದಾರೆ.

  ಸಿನಿಮಾ ನಿರ್ದೇಶನ ಮಾಡಿ ಅದ್ದೂರಿಯಾಗಿ ತೆರೆ ಮೇಲೆ ಕಟ್ಟಿಕೊಡುವ ರಾಜಮೌಳಿ ತಮ್ಮ ಮಗನ ಮದುವೆ ಹೇಗೆ ಮಾಡಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ. ಅಷ್ಟೇ ಅಲ್ಲದೆ ರಾಜಮೌಳಿ ಮನೆಗೆ ಸೊಸೆಯಾಗಿ ಬರುತ್ತಿರುವ ಸ್ಟಾರ್ ನಟನ ಮಗಳು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ.

  ಮದುವೆ ಸಂಭ್ರಮದಲ್ಲಿ ರಾಜಮೌಳಿ ಕುಟುಂಬ

  ಮದುವೆ ಸಂಭ್ರಮದಲ್ಲಿ ರಾಜಮೌಳಿ ಕುಟುಂಬ

  ನಿರ್ದೇಶಕ ರಾಜಮೌಳಿ ಮನೆಯಲ್ಲಿ ಮದುವೆ ತಯಾರಿ ಶುರು ಆಗಿದೆ. ಪುತ್ರ ಕಾರ್ತಿಕೇಯ ಅವರ ವಿವಾಹದ ತಯಾರಿ ಮಾಡಿಕೊಳ್ಳುತ್ತಿರುವ ಕುಟುಂಬಸ್ಥರು ಟಾಲಿವುಡ್ ನಾಯಕ ಮಗಳನ್ನು ಸೊಸೆ ಮಾಡಿಕೊಳ್ಳುತ್ತಿದ್ದಾರೆ.

  ರಾಮ್ ಪ್ರಸಾದ್ ಪುತ್ರಿಯೇ ಸೊಸೆ

  ರಾಮ್ ಪ್ರಸಾದ್ ಪುತ್ರಿಯೇ ಸೊಸೆ

  ಕಾರ್ತಿಕೇಯ ಮದುವೆ ಆಗುತ್ತಿರುವ ಹುಡುಗಿ ಸ್ಟಾರ್ ನಟ ಜಗಪತಿ ಬಾಬು ಅವರ ಸಹೋದರನ ಮಗಳು. ಪೂಜಾ ಪ್ರಸಾದ್ ಹಾಗೂ ಕಾರ್ತಿಕೇಯ ನಿಶ್ಚಿತಾರ್ಥ ನಿನ್ನೆಯಷ್ಟೆ ನಡೆದಿದ್ದು ಕುಟುಂಬಸ್ಥರು ಆತ್ಮೀಯರು ಮಾತ್ರ ಭಾಗಿ ಆಗಿದ್ದಾರೆ.

  ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು

  ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು

  ಪೂಜಾ ಪ್ರಸಾದ್ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ಉತ್ತಮ ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಲೋಕದಲ್ಲಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ.

  ವರ್ಷಾಂತ್ಯದಲ್ಲಿ ಮದುವೆ

  ವರ್ಷಾಂತ್ಯದಲ್ಲಿ ಮದುವೆ

  ಮೂಲಗಳ ಪ್ರಕಾರ ಕಾರ್ತಿಕೇಯ ಹಾಗೂ ಪೂಜಾ ಪ್ರಸಾದ್ ಮದುವೆ ಈ ವರ್ಷದ ಅಂತ್ಯ ನಡೆಯಲಿದೆಯಂತೆ. ಸಿನಿಮಾವನ್ನು ತೆರೆ ಮೇಲೆ ಅದ್ಬುತವಾಗಿ ಕಟ್ಟಿಕೊಡುವ ರಾಜಮೌಳಿ ಹಾಗೂ ಪತ್ನಿ ತಮ್ಮ ಮಗನ ಮದುವೆ ಯಾವ ರೀತಿಯಲ್ಲಿ ಮಾಡುತ್ತಾರೆ ಎನ್ನುವುದೇ ಕುತೂಹಲ.

  ಯೂನಿಟ್ ಡೈರೆಕ್ಟರ್ ಕಾರ್ತಿಕೇಯ

  ಯೂನಿಟ್ ಡೈರೆಕ್ಟರ್ ಕಾರ್ತಿಕೇಯ

  ಕಾರ್ತಿಕೇಯ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದು 'ಬಾಹುಬಲಿ' ಸಿನಿಮಾದಲ್ಲಿ ಯೂನಿಟ್ ನಿರ್ದೇಶಕನಾಗಿ ತಂದೆ ರಾಜಮೌಳಿ ಜೊತೆ ಕೆಲಸ ಮಾಡಿದ್ದಾರೆ. ಸದ್ಯ ನಿಶ್ಚಿತಾರ್ಥದ ವಿಚಾರವನ್ನು ಕಾರ್ತಿಕೇಯ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದ್ದಾರೆ.

  English summary
  Tollywood director Rajamouli's son Karthikeya gets engaged. Karthikeya will be married to Jagapathi Babu's brother's daughter Pooja Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X