Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಸ್ಕರ್ ಗೆ 'ಬಾಹುಬಲಿ' ಆಯ್ಕೆಯಾಗದ ಬಗ್ಗೆ ರಾಜಮೌಳಿ ಹೇಳಿದ್ದೇ ಬೇರೆ.!
2018 ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಹಿಂದಿಯ 'ನ್ಯೂಟನ್' ಚಿತ್ರವನ್ನ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಆದ್ರೆ, ಈ ವರ್ಷ ವಿಶ್ವ ಚಿತ್ರಜಗತ್ತಿನಲ್ಲಿ ಹೊಸ ದಾಖಲೆ ಬರೆದ 'ಬಾಹುಬಲಿ-2' ಯಾಕೆ ಆಯ್ಕೆ ಆಗಿಲ್ಲವೆನ್ನುವುದು ಬಹುತೇಕರ ಪ್ರಶ್ನೆ.
ಹೌದು, ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ 'ಬಾಹುಬಲಿ' ಭಾರತದ ಹೊರಗಡೆಯೂ ಸೌಂಡ್ ಮಾಡಿತ್ತು. ಬಾಕ್ಸ್ ಆಫಿಸ್ ನಲ್ಲಿ 1800 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಬಾಹುಬಲಿ ಮೇಕಿಂಗ್ ನೋಡಿ ಚಿತ್ರಪ್ರೇಮಿಗಳು ಭಾಷೆಯ ಅಂಗನ್ನ ಮರೆತು ಚಿತ್ರವನ್ನ ಒಪ್ಪಿಕೊಂಡಿದ್ದರು.
ಇಷ್ಟೆಲ್ಲಾ ಖ್ಯಾತಿಗಳಿಸಿಕೊಂಡಿದ್ದ ಚಿತ್ರ ಆಸ್ಕರ್ ಗೆ ಆಯ್ಕೆಯಾಗಿಲ್ಲ. ಕಾರಣ ಗೊತ್ತಿಲ್ಲವಾದರೂ, 'ಬಾಹುಬಲಿ' ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಈ ಬಗ್ಗೆ ಹೇಳೋದೇ ಬೇರೆ. ಮುಂದೆ ಓದಿ...

ನನ್ನ ಗುರಿ ಪ್ರಶಸ್ತಿ ಗೆಲ್ಲುವುದಲ್ಲ
ನಾನು ಸಿನಿಮಾ ಮಾಡುವುದು ಪ್ರಶಸ್ತಿ ಗೆಲ್ಲುವುದಕ್ಕಲ್ಲ. ನನ್ನ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸುವುದು ಮತ್ತು ನನ್ನ ಚಿತ್ರತಂಡಕ್ಕೆ ಆದಾಯ ಮಾಡಿಕೊಡುವುದು ಮಾತ್ರ ನನ್ನ ಉದ್ದೇಶ'' ಎಂದು ರಾಜಮೌಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

ಪ್ರಶಸ್ತಿ ಬಂದರೆ ಖುಷಿ, ಇಲ್ಲ ಅಂದ್ರೆ ಬೇಜಾರಿಲ್ಲ
''ಪ್ರಶಸ್ತಿ ಬರುತ್ತೆ ಎನ್ನುವುದನ್ನ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲ್ಲ. ಮೊದಲು ನನಗೆ ತೃಪ್ತಿಯಾಗಬೇಕು. ಅದನ್ನ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಬೇಕು, ಪ್ರಶಸ್ತಿ ಬಂದ್ರೆ ನನಗೆ ಖುಷಿ. ಬಂದಿಲ್ಲ ಅಂದ್ರೆ ನಾನು ಆ ಬಗ್ಗೆ ಯೋಚನೆ ಮಾಡಲ್ಲ. ಯಾಕಂದ್ರೆ, ಅದು ನನಗೆ ಮುಖ್ಯವಲ್ಲ''

ಭಾರತದಿಂದ ರೇಸ್ ನಲ್ಲಿದ್ದ ಚಿತ್ರಗಳು ಯಾವುದು?
ಒಟ್ಟು ಭಾರತದಿಂದ ವಿವಿಧ ಭಾಷೆಯ 26 ಚಿತ್ರಗಳು ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿತ್ತು. ಹಿಂದಿಯಲ್ಲಿ 12, ಮರಾಠಿಯಲ್ಲಿ 5, ತೆಲಗು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂನಲ್ಲಿ 2 ಹಾಗೂ ತಮಿಳಿನ ಒಂದು ಸಿನಿಮಾ ಪಟ್ಟಿಯಲ್ಲಿತ್ತು. ಆದ್ರೆ, ಅಂತಿಮವಾಗಿ ಹಿಂದಿಯ 'ನ್ಯೂಟನ್' ಅವಕಾಶ ಪಡೆದುಕೊಂಡಿದೆ.
ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ?

'ಬಾಹುಬಲಿ'ಗೆ ವಿಲನ್ ಆಯ್ತಾ 'ನ್ಯೂಟನ್'
'ನ್ಯೂಟನ್' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಆದ್ರೆ, 'ಬಾಹುಬಲಿ' ಏಪ್ರಿಲ್ ತಿಂಗಳಿನಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ 1800 ಕೋಟಿ ಗಳಿಕೆ ಕಂಡಿದ್ದಲ್ಲದೇ, ಚಿತ್ರದ ಮೇಕಿಂಗ್ ವಿಚಾರದಲ್ಲಿ ಚಿತ್ರಪ್ರೇಮಿಗಳನ್ನ ಮನಸೋರೆಗೊಳಿಸಿತ್ತು. ಹೀಗಾಗಿ, ಎಲ್ಲರ ನಿರೀಕ್ಷೆ ಈ ಚಿತ್ರದ ಮೇಲಿತ್ತು.

'ನ್ಯೂಟನ್' ಉತ್ತಮ ಆಯ್ಕೆ
26 ಚಿತ್ರಗಳ ಪೈಕಿ ಹಿಂದಿಯ 'ನ್ಯೂಟನ್' ಚಿತ್ರವನ್ನ ಆಯ್ಕೆ ಮಾಡಿರುವ ಬಗ್ಗೆ 'ಭಾರತೀಯ ಚಲನಚಿತ್ರ ಸಂಸ್ಥೆ' (film federation of india) ಹಾಗೂ 'ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿ' ಸಮರ್ಥಿಸಿಕೊಂಡಿದೆ. 'ನ್ಯೂಟನ್' ಉತ್ತಮ ಆಯ್ಕೆ ಎಂದು ಒಪ್ಪಿಕೊಂಡಿದ್ದಾರೆ.