twitter
    For Quick Alerts
    ALLOW NOTIFICATIONS  
    For Daily Alerts

    ಬಿ. ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್‌ಗೆ ದಾದಾ ಸಾಹೇಬ್ ಫಾಲ್ಕೆ ಯಾಕಿಲ್ಲ? ರಾಜೇಂದ್ರ ಸಿಂಗ್ ಬಾಬು ಆಕ್ರೋಶ!

    |

    ಇತ್ತೀಚೆಗಷ್ಟೇ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ 2020ನೇ ಸಾಲಿನ ಫಾಲ್ಕೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಲಾಗಿದೆ. ಗುಜರಾತ್ ಮೂಲದ ಬಾಲಿವುಡ್‌ನಲ್ಲಿ ಫಾಲ್ಕೆ ಪ್ರಶಸ್ತಿ ಸಿಕ್ಕಿರೋದಕ್ಕೆ ಬಾಲಿವುಡ್ ತಾರೆ ಸಂಭ್ರಮಿಸಿದ್ದಾರೆ.

    ಆದರೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿರೋ ಬಗ್ಗೆ ಕನ್ನಡ ಹಿರಿಯ ನಿರ್ದೇಶಕ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಕ್ಕೆ ರಾಜ್‌ಕುಮಾರ್ ಬಿಟ್ಟರೆ ಮತ್ತೊಬ್ಬರಿಗೆ ಪ್ರಶಸ್ತಿಯನ್ನೇ ನೀಡಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

    'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!

    ಬಹುಭಾಷೆಗಳಲ್ಲಿ ನಟಿಸಿರುವ ಡಾ. ಬಿ ಸರೋಜಾ ದೇವಿ ಹಾಗೂ ಪಂಚಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಗುಜರಾತಿನಲ್ಲಿ ಎಲೆಕ್ಷನ್ ಇರುವುದರಿಂದ ಈ ಪ್ರಶಸ್ತಿ ಕೊಟ್ಟಿರಬಹುದು. ದಾದಾ ಸಾಹೇಬ್ ಫಾಲ್ಕೆ ರಾಜಕೀಯ ಪ್ರೇರಿತವಾಗಬಾರದು ಎಂದಿದ್ದಾರೆ. ಈ ಸಂಬಂಧ ರಾಜೇಂದ್ರ ಸಿಂಗ್ ಬಾಬು ಫಿಲ್ಮಿಬೀಟ್ ಜೊತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

     ಡಾ. ಬಿ ಸರೋಜಾ ದೇವಿ ಅವರಿಗೆ ಫಾಲ್ಕೆ ಪ್ರಶಸ್ತಿ ಯಾಕಿಲ್ಲ?

    ಡಾ. ಬಿ ಸರೋಜಾ ದೇವಿ ಅವರಿಗೆ ಫಾಲ್ಕೆ ಪ್ರಶಸ್ತಿ ಯಾಕಿಲ್ಲ?

    "ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿಂದಿಗೆ ಕೊಟ್ಟಿದ್ದಾರೆ. ಅವರು ಮಾಡೋದು ವರ್ಷಕ್ಕೆ 200 ರಿಂದ 250 ಪಿಕ್ಚರ್. ಅವರಿಗೆ ಈಗಾಗಲೇ ಹದಿನೈದೊ-ಇಪ್ಪತ್ತೋ ಪ್ರಶಸ್ತಿ ಹೋಗಿದೆ. ತೆಲುಗಿ ನಾಲ್ಕು. ಬಂಗಾಲಿಗೆ ಏಳೋ-ಎಂಟೋ ಕೊಟ್ಟಿದ್ದಾರೆ. ತಮಿಳಿಗೂ 4-5 ಕೊಟ್ಟಿದ್ದಾರೆ. ಕನ್ನಡಕ್ಕೆ ಅದೂ ದೇವೇಗೌಡರು ಇದ್ದಿದ್ದರಿಂದ ಒಂದು ಬಂತು. ರಾಜ್‌ಕುಮಾರ್ ಅವರಿಗೆ ಯಾವಾಗಲೋ ಬರಬೇಕಿತ್ತು. ಅಲ್ಲಿಂದ ಇವತ್ತಿನವರೆಗೂ ಎರಡನೇ ವ್ಯಕ್ತಿಗೆ ಕೊಟ್ಟೇ ಇಲ್ಲ. ಈಗ ಆಶಾ ಪರೇಖ್‌ಗೆ ಕೊಟ್ಟಿದ್ದಾರೆ. ಅವರಿಗಿಂತ ಸೀನಿಯರ್ ಬಿ ಸರೋಜಾ ದೇವಿ ಇದ್ದಾರೆ. ಅವರು ಆರು ಭಾಷೆಯಲ್ಲಿ ನಟಿಸಿದ್ದಾರೆ. 1952ರಿಂದ ಸಿನಿಮಾರಂಗದಲ್ಲಿ ಇದ್ದಾರೆ. ಅವರಿಗೆ ಪದ್ಮಶ್ರೀ ಕೊಟ್ಟಿದೆ. ಪದ್ಮಭೂಷಣ ಕೊಟ್ಟಿದೆ. ಇಷ್ಟು ಸಾಧನೆ ಮಾಡಿದವರಿಗೆ ಯಾಕೆ ಕೊಡಬಾರದಿತ್ತು.? ಪಂಚಭಾಷಾ ನಟಿ ಭಾರತ ವಿಷ್ಣುವರ್ಧನ್ ಇದ್ದಾರೆ ಅವರಿಗೆ ಯಾಕಿಲ್ಲ." ಎಂದು ರಾಜೇಂದ್ರ ಸಿಂಗ್ ಬಾಬು ಪ್ರಶ್ನೆ ಮಾಡಿದ್ದಾರೆ.

    'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

     ಜ್ಯೂರಿಗಳು ಬರೀ ಕೈ ಎತ್ತೋಕೆ ಹೋಗ್ತಾರಾ?

    ಜ್ಯೂರಿಗಳು ಬರೀ ಕೈ ಎತ್ತೋಕೆ ಹೋಗ್ತಾರಾ?

    "ಇಲ್ಲಿಂದ ಜ್ಯೂರಿಗಳು ಹೋಗುತ್ತಾರಲ್ಲ. ಅವರು ಯಾಕೆ ಫೈಟ್ ಮಾಡೋಕೆ ಹೋಗುವುದಿಲ್ಲ. ಬರೀ ಕೈ ಎತ್ತಲಿಕ್ಕೆ ಹೋಗುತ್ತಾರಾ? ಬೇರೆ ರಾಜ್ಯ ಸರ್ಕಾರದವರು ಪ್ರತಿ ವರ್ಷ ಲೆಟರ್ ಬರುತ್ತಾರಂತೆ. ನಾಲ್ಕೈದು ಹೆಸರುಗಳನ್ನು ಕಳಿಸಿ, ನಮ್ಮವರಿಗೆ ಕೊಡಿ ಅಂತಾರಂತೆ. ಆದರೆ, ನಮ್ಮ ರಾಜ್ಯ ಸರ್ಕಾರದಿಂದ ಹೀಗೆ ಪತ್ರ ಬರೆದಿದ್ದಾರಾ? ನನಗೆ ಮಾಹಿತಿ ಇಲ್ಲ. ಹೀಗಾಗಿ ಕನ್ನಡಕ್ಕೆ ಸಿಗಬೇಕಿದ್ದ ಮನ್ನಣೆ ಸಿಗುತ್ತಿಲ್ಲ ಅನ್ನೋ ಕೊರಗು ಖಂಡಿತಾ ಇದೆ."

     ಗುಜರಾತ್ ಚುನಾವಣೆ ಹಿನ್ನೆಲೆ ನೀಡಿದ ಪ್ರಶಸ್ತಿ

    ಗುಜರಾತ್ ಚುನಾವಣೆ ಹಿನ್ನೆಲೆ ನೀಡಿದ ಪ್ರಶಸ್ತಿ

    "ದಕ್ಷಿಣ ಭಾರತದ ನಾಲ್ಕು ಭಾಷೆಗಳಿಂದ 2500 ಸಿನಿಮಾ ಬರುತ್ತಿವೆ. ಅದು ಹೇಗೆ ಲೆಕ್ಕ ಹಾಕುತ್ತಾರೆ. ದಾದಾ ಸಾಹೇಬ್ ಕೊಡುವುದಕ್ಕೆ ಮಾನದಂಡವೇನು? ಇದೊಂದು ಎಲೆಕ್ಷನ್ ಸ್ಟಂಟ್ ಆಗಿದೆ. ಹಿಂದಿನ ವರ್ಷ ರಜನಿಕಾಂತ್‌ಗೆ ಕೊಟ್ರು. ಆಗ ತಮಿಳುನಾಡಲ್ಲಿ ಎಲೆಕ್ಷನ್ ಇತ್ತು. ಈ ಬಾರಿ ಆಶಾ ಪರೇಖ್‌ಗೆ ಕೊಟ್ಟಿದ್ದಾರೆ. ಗುಜರಾತ್‌ನಲ್ಲಿ ಎಲೆಕ್ಷನ್ ಇದೆ. ಹೀಗಾಗಿ ಪಾರದರ್ಶಕವಾಗಿ ದಾದಾ ಸಾಹೇಬ್ ಪ್ರಶಸ್ತಿ ಕೊಡಬೇಕು." ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

    "ದುನಿಯಾ ವಿಜಯ್‌ ಮತ್ತು ನನ್ನನ್ನು ದುಡ್ಡು ಕೊಡದೆ ದುಡಿಸಿಕೊಂಡಿದ್ದಾರೆ"

     ಉತ್ತರಕ್ಕೊಂದು ದಕ್ಷಿಣಕ್ಕೊಂದು ಕೊಡಲಿ

    ಉತ್ತರಕ್ಕೊಂದು ದಕ್ಷಿಣಕ್ಕೊಂದು ಕೊಡಲಿ

    "ದಾದಾ ಸಾಹೇಬ್ ಪ್ರಶಸ್ತಿ ಕೊಡುವುದಕ್ಕೂ ಒಂದು ಮಾನದಂಡ ಬೇಕು. ಎಷ್ಟೋ ಮಂದಿ ಈ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ನಮ್ಮವರು ಫೈಟ್ ಮಾಡಬೇಕು. ಇಲ್ಲಾ ಅಂದರೆ ಕೊಡುವುದೇ ಇಲ್ಲ. ಕನ್ನಡಕ್ಕೆ ಒಂದೊಂದೇ ಮಿಸ್ ಆಗುತ್ತಿದೆ. ಅದಕ್ಕೆ ಸೌತ್‌ಗೆ ಒಂದು ನಾತ್‌ಗೆ ಒಂದು ಕೊಡಲಿ. ಎರಡು ಕೊಡಲಿ ಬಿಡಿ ತಪ್ಪೇನು? ಕನ್ನಡಕ್ಕೆ ಅವಾರ್ಡ್ ಕೊಡಲಿಲ್ಲ ಅಂದ್ರೆ, ಫೈಟ್ ಮಾಡಬೇಕು. ಇಲ್ಲಾ ಜ್ಯೂರಿಗಳು ರಾಜೀನಾಮೆ ಕೊಟ್ಟು ಬರಬೇಕು. 1936ರಿಂದ ಇದೂವರೆಗೂ ನಾವು 4500 ಸಿನಿಮಾ ಮಾಡಿದ್ದೇವೆ. ಎಷ್ಟು ಜನರಿಗೆ ಮಿಸ್ ಆಗಿದೆ ಯೋಚನೆ ಮಾಡಿ. ಇದು ಪೊಲಿಟಿಕಲ್ ಆಗಬಾರದು. ಕಲಾ ಸೇವೆಗೆ ನೀಡುವ ಪ್ರಶಸ್ತಿಯಾಗಬೇಕು."

     ವಿಷ್ಣುವರ್ಧನ್ ಬೇಸರ

    ವಿಷ್ಣುವರ್ಧನ್ ಬೇಸರ

    ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತ ಕೇಶವಮೂರ್ತಿ ದಾದಾ ಸಾಹೇಬ್ ಪ್ರಶಸ್ತಿ ಬಗ್ಗೆ ವಿಷ್ಣುವರ್ಧನ್ ಅವರು ನೀಡಿದ್ದ ಪ್ರತಿಕ್ರಿಯೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. " ಬಳ್ಳಾರಿ ನಾಗ ಸಮಯದಲ್ಲಿ ವಿಷ್ಣುವರ್ಧನ್ ಅವರಿಗೆ ದಾದಾ ಸಾಹೇಬ್ ಪ್ರಶಸ್ತಿ ಬಗ್ಗೆ ಕೇಳಿದ್ದೆವು. ಆಗ ಅವರು ನನಗೆ ಬರತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಭಾರತಿಯವರಿಗೆ ಬರಲಿಲ್ವಲ್ಲಾ ಅನ್ನೋ ನೋವಿದೆ. ಅವರು ಐದು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನನಗಿಂತ ದೊಡ್ಡ ನಟಿ. ಅವರಿಗೆ ಬರುಬೇಕಿತ್ತು ಎಂದಿದ್ದರು." ಅಂತ ಡಾ.ವಿಷ್ಣುವರ್ಧನ್ ಹೇಳಿದ್ದ ಮಾತನ್ನು ನೆನಪಿಸಿಕೊಳ್ಳುತ್ತಾರೆ ಪತ್ರಕರ್ತ ಕೇಶವ ಮೂರ್ತಿ.

    English summary
    Rajendra Singh Babu Angry On Not Giving Dada Saheb Phalke Award To Saroja Devi, Know More.
    Wednesday, September 28, 2022, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X