twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್‌ಗಳಿಲ್ಲದೆ ಚಿತ್ರ ಗೆಲ್ಲುತ್ತದೆ ಎಂಬುದಕ್ಕೆ 'ಮೊಟ್ಟೆ ಕಥೆ' ಸಾಕ್ಷಿ: ರಾಜೇಂದ್ರ ಸಿಂಗ್ ಬಾಬು

    By Suneel
    |

    ಚಲನಚಿತ್ರ ಅಕಾಡೆಮಿ ಕನ್ನಡದ ಯಶಸ್ವಿ ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಗಳನ್ನು ಕೂಡ ಮಾಡುತ್ತಿದೆ. ಇತ್ತೀಚೆಗೆ ಪವನ್ ಕುಮಾರ್ ನಿರ್ಮಾಣದ, ರಾಜ್ ಬಿ ಶೆಟ್ಟಿ ನಿರ್ದೇಶನದ 'ಒಂದು ಮೊಟ್ಟೆಯ ಕಥೆ' ಚಿತ್ರವನ್ನು ಚಲನಚಿತ್ರ ಆಕಾಡೆಮಿ ವತಿಯಿಂದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರದರ್ಶಿಸಿ ಸಂವಾದ ಕಾರ್ಯಕ್ರಮವನ್ನು ನಡೆಸಿತು.

    'ಒಂದು ಮೊಟ್ಟೆಯ ಕಥೆ' ಚಿತ್ರ ಪ್ರದರ್ಶನ ನಂತರ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು ರವರು ಪಾಲ್ಗೊಂಡಿದ್ದರು. ಅವರು ಚಿತ್ರ ನೋಡಿದ ಸಂತೋಷವನ್ನು ಹಂಚಿಕೊಂಡು, 'ಸ್ಟಾರ್ ನಟರ ಹೊರತಾಗಿಯೂ ಒಳ್ಳೆಯ ಕಥೆಗಳಿರುವ ಸಿನಿಮಾಗಳು ಗೆಲ್ಲುತ್ತವೆ ಎಂಬುದಕ್ಕೆ 'ಒಂದು ಮೊಟ್ಟೆಯ ಕಥೆ' ಚಿತ್ರವೇ ಅತ್ಯುತ್ತಮ ಉದಾಹರಣೆ. ಒಳ್ಳೆಯ ಕಥೆ ಇದ್ದಾಗ ನಮಗೆ ಸ್ಟಾರ್ ಗಳು ಬೇಕಿರಲ್ಲ. ಕಥೆಯೇ ಮುಖ್ಯ ಎನ್ನುವುದನ್ನು ಚಿತ್ರೋದ್ಯಮ ಆಗಾಗ ತಿಳಿಸಿಕೊಂಡು ಬಂದಿದೆ' ಎಂದರು.

    Rajendra Singh Babu opinion on 'Ondu Motteya Kathe' Movie

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ರವರು ಮಾತನಾಡಿ 'ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಬೇರೆ ಭಾಷೆಗಳು ಕನ್ನಡವನ್ನು ಆಕ್ರಮಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ 'ಒಂದು ಮೊಟ್ಟೆಯ ಕಥೆ' ಚಿತ್ರಗಳು ಬರುತ್ತಿರುವುದು ಖುಷಿಯ ಸಂಗತಿ. ಇಂತಹ ಚಿತ್ರಗಳಿಗೆ ಹೆಚ್ಚಿನ ಒತ್ತನ್ನು ಅಕಾಡೆಮಿ ನೀಡುತ್ತಿದೆ' ಎಂದರು.

    ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಹೆಚ್ ಬಿ ದಿನೇಶ್, ಒಂದು ಮೊಟ್ಟೆಯ ಕಥೆ ಚಿತ್ರದ ನಟ, ನಿರ್ದೇಶಕ ರಾಜು ಬಿ ಶೆಟ್ಟಿ, ಚಿತ್ರದ ನಿರ್ಮಾಪಕರು ಮತ್ತು ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    English summary
    Raj B Shetty directorial 'Ondu Motteya Kathe' movie Screening and interaction program has conducted recently at 'Chamundeshwari Studio' by 'Karnataka Chalanachitra Academy'. After screening the movie in interaction program Rajnedra Singh Babu talked their opinion the movie.
    Thursday, July 20, 2017, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X