ಭಾರತದ ಯಾವುದೇ ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬು

ಕನ್ನಡದ ಮತ್ತೊಂದು ಅದ್ದೂರಿ ಸಿನಿಮಾ 'ಗಂಡುಗಲಿ ವೀರ ಮದಕರಿ' ಚಿತ್ರದ ಮುಹೂರ್ತ ನಿನ್ನೆ (ಡಿಸೆಂಬರ್ 2) ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ನಟ ದರ್ಶನ್ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.

ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ದರ್ಶನ್ ''ಈ ಪಾತ್ರಕ್ಕಾಗಿ ಹಲವು ದಿನಗಳಿಂದ ತಯಾರಿ ಮಾಡಿಕೊಳ್ಳುತ್ತಲೇ ಇದ್ದೇವೆ'' ಎಂದಿದ್ದಾರೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ''ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಲು ತುಂಬ ಜನ ಪ್ರಯತ್ನ ಪಟ್ಟರು ಆದರೆ ಆಗಿರಲಿಲ್ಲ. ಈಗ ಅದು ಸಾಧ್ಯ ಆಗುತ್ತಿದೆ. ಈ ಸಿನಿಮಾವನ್ನು ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರೇ ಮಾಡಬೇಕು ಅಂತ ಇತ್ತೇನೋ'' ಎಂದರು.

Rajendra Singh Babu Spoke About Gandugali Madakari Nayaka Movie

ರಾಕ್ ಲೈನ್ ವೆಂಕಟೇಶ್ ಹೆಸರಿನಲ್ಲಿಯೇ 'ರಾಕ್' ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿಯೇ 'ಚಾಲೆಂಜ್' ಇದೆ. ಈ ಇಬ್ಬರು ಇರುವುದು ನೂರು ಆನೆ ಬಲ ಇದ್ದಂತೆ. ನಮ್ಮ ಸಿನಿಮಾ ಭಾರತದ ಯಾವ ಸಿನಿಮಾಗೂ ಕಡಿಮೆ ಇರುವುದಿಲ್ಲ. ಕನ್ನಡ ಬಾವುಟ ಭಾರತದ ತುಂಬ ಹಾರಿಸುತ್ತೇವೆ. ಅಂತಹ ಸಿನಿಮಾ ಮಾಡುವುದು ನಮ್ಮ ಕೆಲಸ ''ಎಂದು ಸಿನಿಮಾದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಸದ್ಯ ಚಿತ್ರದುರ್ಗದಲ್ಲಿ ಸಿನಿಮಾದ ಪೂಜೆ ನಡೆದಿದೆ. ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸಿನಿಮಾ ಲಾಂಚ್ ಆಗಲಿದೆ.

More from Filmibeat

English summary
Director Rajendra Singh Babu spoke about Gandugali Madakari Nayaka Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X