Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Babu Vs Ramya:'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ ಬಳಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ
ಮೋಹಕತಾರೆ ರಮ್ಯಾ ಲಾಂಗ್ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿರೋದು ಗೊತ್ತೇ ಇದೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ನಿರ್ಮಾಪಕಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಈ ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದೆ.
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು 'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ ತನ್ನದು. ಈಗಾಗಲೇ ಈ ಹೆಸರಿನ ಸಿನಿಮಾದ ಚಿತ್ರೀಕರಣ ಆರಂಭ ಮಾಡಿದ್ದೇನೆ. ಶೇ.80ರಷ್ಟು ಶೂಟಿಂಗ್ ಮುಗಿದಿದೆ. ರೆಬಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಈ ಸಿನಿಮಾ ಅರ್ಧಕ್ಕೆ ನಿಂತಿದೆ. ಹೀಗಾಗಿ ಈ ಟೈಟಲ್ ಅನ್ನು ಬೇರೆಯವರು ಬಳಸಬಾರದು ಎಂದು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು.
ಸ್ಯಾಂಡಲ್‌ವುಡ್‌ನ
ಫೇಮಸ್
ಜೋಡಿ
ರಾಮ್
ಕುಮಾರ್,
ಶ್ರುತಿ
ಕಿರುತೆರೆಯಲ್ಲಿ
ಮಿಂಚಲು
ರೆಡಿ:
ಧಾರಾವಾಹಿ
ಯಾವುದು?
ಈಗ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಿಂದ ರಾಜೇಂದ್ರ ಸಿಂಗ್ ಬಾಬು ಟೈಟಲ್ ಬಳಕೆಗೆ ತಡೆಯಾಜ್ಞೆಯನ್ನು ತಂದಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್‌ನ ಸಿನಿಮಾವನ್ನು ಸೆನ್ಸಾರ್ ಮಾಡಬಾರದೆಂದು ಸೆನ್ಸಾರ್ ಬೋರ್ಡ್‌ಗೆ, ನಿರ್ಮಾಪಕಿ ರಮ್ಯಾ ಹಾಗೂ ಫಿಲ್ಮ್ ಚೇಂಬರ್ ಅನ್ನು ಪಾರ್ಟಿಯನ್ನಾಗಿ ಮಾಡಿ ತಡೆಯಾಜ್ಞೆಯನ್ನು ತಂದಿದ್ದಾರೆ. ಈ ಸಂಬಂಧ ರಾಜೇಂದ್ರ ಸಿಂಗ್ ಬಾಬು ಮಾಧ್ಯಮಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಟೈಟಲ್ ರಿಜಿಸ್ಟರ್ ಮಾಡಿಕೊಳ್ಳುವ ಅಧಿಕಾರವಿಲ್ಲ
"ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟೈಟಲ್ ಅನ್ನು ಯಾರು ಬಳಸಬಾರದು ಅಂತ ಹೇಳಿದ್ದಾರೆ. ನನ್ನ ಬಳಿ ಆರ್ಡರ್ ಇದೆ. ಇದು ದೊಡ್ಡ ಮಟ್ಟಕ್ಕೆ ಚರ್ಚೆ ಆಗುತ್ತೆ. ಫಿಲ್ಮ್ ಚೇಂಬರ್‌ನವರಿಗೆ ಟೈಟಲ್ ರಿಜಿಸ್ಟ್ರೇಷನ್ ಮಾಡುವುದಕ್ಕೆ ಎಷ್ಟರ ಮಟ್ಟಿಗೆ ಅಧಿಕಾರವಿದೆ. ಈ ಟೈಟಲ್ ರಿಜಿಸ್ಟ್ರೇಷನ್ ಅನ್ನೋದೇ ವ್ಯಾಪಾರ ಆಗಿಬಿಟ್ಟಿದೆ.ಕೆಲವರು ಬೇಕು ಅಂತ ಕೆಲವು ಟೈಟಲ್‌ಗಳನ್ನು ಎತ್ತಿಟ್ಟುಕೊಳ್ಳುವುದು. ನೀವು ಬರುತ್ತೀರಾ ಅಂತ ಗೊತ್ತಾದ ತಕ್ಷಣವೇ ಅದನ್ನು ಒಳಗೊಳಗೆ ನೋಂದಣಿ ಮಾಡಿಕೊಳ್ಳುವುದು. ಆ ಮೇಲೆ ವ್ಯವಹಾರ.. ಎಷ್ಟು ಕೊಡುತ್ತೀರಾ? ನಾವು ಕೊಡಿಸಿಕೊಡುತ್ತೇವೆ ಅಂತ ಕೆಲವರು ವ್ಯವಹಾರ ಮಾಡಿಕೊಂಡಿದ್ದಾರೆ." ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ಮೂವರಿಗೆ ಪಾರ್ಟಿ ಮಾಡಿ ತಡೆಯಾಜ್ಞೆ
"ಈ ಟೈಟಲ್ ಯಾರದ್ದೋ ಕೈಯಲ್ಲಿ ಇತ್ತಂತೆ. ಆ ಟೈಟಲ್ ಅವರು ತೆಗೆದು ಇನ್ನೊಬ್ಬರಿಗೆ ಕೊಟ್ಟಿದ್ದಾರಂತೆ.ಹೀಗಾಗಿ ನಾನು ಫಿಲ್ಮ್ ಚೇಂಬರ್‌ಗೆ ಸೆನ್ಸಾರ್ ಬೋರ್ಡ್‌ಗೆ ಹಾಗೂ ನಿರ್ಮಾಪಕರಿಗೆ ಪಾರ್ಟಿ ಮಾಡಿ ಈ ಚಿತ್ರದ ಟೈಟಲ್‌ನಲ್ಲಿ ಸೆನ್ಸಾರ್ ಮಾಡಬಾರದು ಅಂತ ತೆಗೆದುಕೊಂಡ ಆರ್ಡರ್ ನನ್ನ ಬಳಿ ಇದೆ. ನಮ್ಮ ಸ್ಟೇ ಆರ್ಡರ್‌ಗೆ ಮೂರು ಜನ ಪಾರ್ಟಿ ಆಗಿದ್ದಾರೆ. ಒಂದು ಫಿಲ್ಮ್ ಚೇಂಬರ್, ಎರಡನೆಯದು ಪ್ರಡ್ಯೂಸರ್, ಮೂರನೆಯದ್ದು ಸೆನ್ಸಾರ್ ಬೋರ್ಡ್. ಇವರು ನಮ್ಮ ಕೋರ್ಟ್ ಆದೇಶ ಬರುವವರೆಗೂ ಸಿನಿಮಾವನ್ನು ಸೆನ್ಸಾರ್ ಮಾಡಬಾರದು."

90ರಲ್ಲೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಬಳಸಿದ್ದೆವು
"ನನ್ನ ಟೈಟಲ್ ಅದು. 1991 ಅಥವಾ 1992ರಲ್ಲಿ "ಸ್ವಾತಿ ಮುತ್ತಿನ ಮಳೆ ಹನಿಯೇ.." ಅಂತ 'ಬಣ್ಣದ ಗೆಜ್ಜೆ' ಸಿನಿಮಾದಲ್ಲಿ ನಾವು ಮಾಡಿಬಿಟ್ಟಿದ್ದೇವೆ. ಅಂತಹವರು ನನ್ನ ಬಳಿ ಕೇಳಬೇಕಿತ್ತು. ನಮ್ಮನ್ನು ಓವರ್ ಲೂಪ್ ಮಾಡಿಬಿಡುತ್ತೇವೆ ಅಂತ ಚೇಂಬರ್‌ನವರು ಹೇಳಿ ಹೋದ್ರಲ್ಲ ಅದು ತಪ್ಪಾಗುತ್ತೆ. ನಿಮಗೆ ಟೈಟಲ್ ರಿಜಿಸ್ಟರ್ ಮಾಡುವುದಕ್ಕೆ ಯಾವುದೇ ಅಧಿಕಾರವಿಲ್ಲ. ಆ ಸಾಂಗ್ ನನ್ನ ಪಿಕ್ಚರ್‌ದು. ಪ್ರಡ್ಯೂಸರ್‌ಗೆ ಕಾಪಿ ರೈಟ್ ಆಕ್ಟ್ ಬರುತ್ತೆ."

'ಕಾಪಿ ರೈಟ್ಸ್ ಆಕ್ಟ್' ಬಗ್ಗೆ ಗೊತ್ತಿಲ್ಲ
"ಫಿಲ್ಮ್ ಚೇಂಬರ್‌ನಲ್ಲೂ ಟೈಟಲ್ ಅನ್ನು ರಿಜಿಸ್ಟರ್ ಮಾಡಿಕೊಡುತ್ತೇವೆ ಎಂದು ಒಂದೇ ಒಂದು ಲೈನ್ ಅನ್ನೂ ಹೇಳಿಲ್ಲ. ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ಕಾಪಿ ರೈಟ್ಸ್ ಆಕ್ಟ್ ಅನ್ನೋದು ಒಂದು ಇದೆ. ಸ್ವಲ್ಪ ತಾಳಿ ಅಂತ ಹೇಳಿದ್ದೆ. ಈಗ ಅದೇ ಕಾಪಿ ರೈಟ್ ಆಕ್ಟ್ ಮೇಲೆ ಸ್ಟೇ ಸಿಕ್ಕಿದೆ." ಎಂದು ಹಿರಿಯರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.