»   » ಕಂಟ್ರಿ ಕ್ಲಬ್ ನಲ್ಲಿ ಹಳ್ಳಿಹೈದ ರಾಜೇಶ್ ರಿಮ್ ಝಿಮ್

ಕಂಟ್ರಿ ಕ್ಲಬ್ ನಲ್ಲಿ ಹಳ್ಳಿಹೈದ ರಾಜೇಶ್ ರಿಮ್ ಝಿಮ್

By: ರವಿಕಿಶೋರ್
Subscribe to Filmibeat Kannada

ಹಳ್ಳಿಹೈದ ರಾಜೇಶ್ ಮಳೆಯಲ್ಲಿ ಮಿಂದೆದ್ದ ಸುವರ್ಣ ಸಂಭ್ರಮ. ನಟಿ ದೂಹಿ ಜೊತೆ ರಿಮ್ ಝಿಮ್ ರಿಮ್ ಝಿಮ್ ಎಂದು ಕುಣಿದ ಗಳಿಗೆ. ರಾಜೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಲವ್ ಈಸ್ ಪಾಯಿಸನ್ ಚಿತ್ರದ ರೊಮ್ಯಾಂಟಿಕ್ ಗೀತೆಯನ್ನು ಕಂಟ್ರಿಕ್ಲಬ್ ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಚಿತ್ರಕ್ಕಾಗಿ "ಯಾರೋ ಕಾಣೆ ದಿನ ಸಹವಾಸ ಬೇಡುವೆನು ಪ್ರೇಮ ಬೀದಿಯಲಿ ಸಹಕಾರಿಯಾಗುವೆನು" ಎಂಬ ಗೀತೆಯನ್ನು ರಾಜೇಶ್, ದೂಹಿ, ಅಭಿನಯದೊಂದಿಗೆ ರಘು ನೃತ್ಯ ನಿರ್ದೇಶನದಲ್ಲಿ ಕಂಟ್ರಿ ಕ್ಲಬ್ ನಲ್ಲಿ ವೀನಸ್ ಮೂರ್ತಿ ಛಾಯಾಗ್ರಹಣದಲ್ಲಿ ನಿರ್ದೇಶಕ ನಂದನಪ್ರಭು ಚಿತ್ರಿಸಿಕೊಂಡರು.

ಆಕಾಶ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಕೆ. ಸೋಮಶೇಖರ್ ಕೇಶವಮೂರ್ತಿ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ 'ಲವ್ ಈಸ್ ಪಾಯಿಸನ್' ಚಿತ್ರಕ್ಕೆ ಮತ್ತೊಂದು ಹಂತದ ಚಿತ್ರೀಕರಣ ನಗರದಲ್ಲಿ ಮುಂದುವರೆದಿದೆ. ಚಿತ್ರದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಿರ್ಮಾಪಕ ಸೋಮಶೇಖರ್ ತಿಳಿಸಿದ್ದಾರೆ.

ಚಿತ್ರಕ್ಕೆ ರವಿಶಂಕರನಾಗ್ ಸಾಹಿತ್ಯ ಸಂಭಾಷಣೆ, ವೀನಸ್ ಮೂರ್ತಿ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ, ಶಂಕರ್, ಸುಧಾ, ರಘು ನೃತ್ಯ, ಉಮೇಶ್ ತಿಪಟೂರು ನಿರ್ದೇಶನ ಸಹಕಾರ, ವೇಣು ನಿರ್ಮಾಣ ಮೇಲ್ವಿಚಾರಣೆ, ಈಶ್ವರ್ ಸಂಕಲನ, ಥ್ರಿಲ್ಲರ್ ಮಂಜು ವಿಕ್ರಂ, ಸಾಹಸವಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ನಂದನ್ ಪ್ರಭು

ಷವರ್ ನೀರಿಗೆ ಮೈಯೊಡ್ಡಿದ ಯುವ ಜೋಡಿ

ಲವ್ ಈಸ್ ಪಾಯಿಸನ್ ಚಿತ್ರದ ಈ ಪ್ರೇಮಗೀತೆ ಬಾತ್ ರೂಮ್ ನಿಂದಲೇ ಶುರುವಾಗಿದೆ. ಷವರ್ ನೀರಿಗೆ ಮೈಯೊಡ್ಡಿದ ಯುವ ಜೋಡಿ ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಧೋ ಎಂದು ಸುರಿವ ಮಳೆಯಲ್ಲಿ ಮಿಂದೆದ್ದ ಜೋಡಿ

ಅಲ್ಲಿಂದ ಹೊರಬಿದ್ದ ಯುವಪ್ರೇಮಿಗಳು ಮಿಂದೆದ್ದದ್ದು ಧೋ ಎಂದು ಸುರಿವ ಮಳೆಯಲ್ಲಿ. ನಾಯಕ ರಾಜೇಶ್ ಹಾಗೂ ನಾಯಕಿ ದೂಹಿ ಪಾರದರ್ಶನ ಬಟ್ಟೆಗಳಲ್ಲಿ ತೋಯ್ದು ತೊಪ್ಪೆಯಾದರು.

ಒಂದಷ್ಟು ತುಯ್ದಾಟ ಇನ್ನೊಂದಿಷ್ಟು ಹೊಯ್ದಾಟ

ಮತ್ತೆ ಯುವ ಜೋಡಿ ಅಲ್ಲಿಂದ ಬಾತ್ ರೂಂಗೆ ಮರಳಿತು. ಇಲ್ಲೂ ಅಷ್ಟೆ ಒಂದಷ್ಟು ತುಯ್ದಾಟ ಇನ್ನೊಂದಿಷ್ಟು ಹೊಯ್ದಾಟ.

ಐಟಂ ಹಾಡುಗಳ ನಡುವೆ ಮಳೆ ಹಾಡು

ಎಲ್ಲರೂ ಐಟಂ ಹಾಡುಗಳಿಗೆ ಶರಣಾಗುತ್ತಿದ್ದರೆ. ಇದೇನಿದು ರಾಜೇಶ್ ಚಿತ್ರದಲ್ಲಿ ಮಳೆಯ ಹಾಡಿನ ಅಬ್ಬರ ಅನ್ನಿಸುತ್ತದೆ ತಾನೆ. ಆದರೆ ಈ ಹಾಡಿನ ದೃಶ್ಯಗಳು ಮಾತ್ರ ಯಾವುದೇ ಐಟಂ ಹಾಡಿಗಿಂತಲೂ ಕಡಿಮೆ ಇಲ್ಲ ಬಿಡಿ.

ಲವ್ ಈಸ್ ಪಾಯಿಸನ್ ಪಾತ್ರವರ್ಗ ಹೀಗಿದೆ

ತಾರಾಗಣದಲ್ಲಿ ರಾಜೇಶ್, ಖುಷಿ, ದೂಹಿ, ಚಂದ್ರು, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಹೊನ್ನಾವಳ್ಳಿ ಕೃಷ್ಣ, ಬಿರಾದಾರ್, ಪದ್ಮಾವಾಸಂತಿ, ನಾಗಮಂಗಲ ಜಯರಾಂ ಮುಂತಾದವರಿದ್ದಾರೆ.

English summary
Jungle Jackie fame Rajesh and Duhi Kaushik lead Love is Poison song sequence shot in a beautifully erected set at contry club, Bangalore. This is Nandan Kishore first directorial venture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada