»   » 20 ಲಕ್ಷ + ಮಂದಿ ಮನಗೆದ್ದ ರಜನಿ ಟೀಸರ್

20 ಲಕ್ಷ + ಮಂದಿ ಮನಗೆದ್ದ ರಜನಿ ಟೀಸರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿ ಅವರನ್ನು ಹೊಸ ಗೆಟಪ್, ಲುಕ್ ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಚಿತ್ರದ ಬಿಡುಗಡೆ ಭಾಗ್ಯ ದೀಪಾವಳಿ ಹೊತ್ತಿಗೆ ಆಗುವ ನಿರೀಕ್ಷೆಯಿದೆ. ಗಣೇಶ ಹಬ್ಬದಂದು ರಿಲೀಸ್ ಆದ ಟೀಸರ್ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಈಗಾಗಲೇ 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಸೋಮವಾರ(ಸೆ.9) ಗಣೇಶ ಹಬ್ಬದಂದು ಬಿಡುಗಡೆಗೊಂಡ ಟೀಸರ್ ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಆದರೆ, ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ತಾರೆಗಳಿಂದ ಬಹು ಪರಾಕ್ ಸಿಕ್ಕಿದೆ. ಮೂರು ದಿನಗಳಲ್ಲೇ ಯೂಟ್ಯೂಬ್ ಚಿತ್ರದ ಟೀಸರ್ ನೋಡಿದವರ ಸಂಖ್ಯೆ 2 ಮಿಲಿಯನ್ ದಾಟಿದೆ.

Eros ಇಂಟರ್ ನ್ಯಾಷನಲ್ ಹೊರತಂದಿರುವ ಈ ಟೀಸರ್ ಎಲ್ಲರ ಗಮನ ಸೆಳೆಯುವಂತೆ ರೂಪಿಸುವಲ್ಲಿ ರಜನಿ ಅವರ ಪುತ್ರಿ ಸೌಂದರ್ಯ ಅವರ ಪರಿಶ್ರಮ ಎದ್ದು ಕಾಣುತ್ತದೆ. ಅದ್ಭುತ ಅನಿಮೇಷನ್ ತಂತ್ರಜ್ಞಾನವುಳ್ಳ ಕೊಚಾಡಿಯನ್ ಚಿತ್ರದ ಹೊಸ ಪೋಸ್ಟರ್ ಗಳು ಹುಟ್ಟಿಸಿದ ಕ್ರೇಜ್ ಈಗ ಟೀಸರ್ ಗೂ ಸಿಕ್ಕಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೌಂದರ್ಯ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ಹೊಸ ದಾಖಲೆ

ಚಿತ್ರರಂಗದವರ ಪ್ರಕಾರ ಈ ವಾರಾಂತ್ಯದೊಳಗೆ 5 ಮಿಲಿಯನ್ ದಾಟುವ ನಿರೀಕ್ಷೆ ಇದೆಯಂತೆ. ಹಾಲಿವುಡ್ ಚಿತ್ರಗಳು ಕೂಡಾ ಇಷ್ಟು ತ್ವರಿತ ಗತಿಯಲ್ಲಿ ಜನಪ್ರಿಯತೆ ಗಳಿಸಿಲ್ಲ ಎನ್ನಲಾಗಿದೆ.

ಸೌಂದರ್ಯ ಟ್ವೀಟ್ಸ್

2 ಮಿಲಿಯನ್ ವೀಕ್ಷಣೆ ನಂತರ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ರಜನಿ ಪುತ್ರಿ

ನೀತಾ ಲುಲ್ಲಾ ಅವರ ಹೇಳಿಕೆ

ಚಿತ್ರದ ಬಗ್ಗೆ ರಜನಿ ಬಗ್ಗೆ ನೀತಾ ಲುಲ್ಲಾ ಅವರ ಹೇಳಿಕೆ

ಹೆಚ್ಚಿದ ನಿರೀಕ್ಷೆ

ಇದೊಂದು ಐತಿಹಾಸಿಕ ಚಿತ್ರವಾಗಿದೆ. ಪಾಂಡ್ಯ ಅರಸು ಕೊಚಾಡಿಯನ್ ರಣಧೀರನ್ ಸಾಹಸದ ಕಥೆ. ಚಿತ್ರದಲ್ಲಿ ರಜನಿ ಜೊತೆಗೆ ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶರತ್ ಕುಮಾರ್, ಶೋಭನಾ, ಆದಿ ಹಾಗೂ ಇನ್ನಿತರ ಕಲಾವಿದರಿದ್ದಾರೆ.

ಈ ಚಿತ್ರದ ಕಥೆಗೆ ತಂತ್ರಜ್ಞಾನ ಬಳಕೆ ಅಗತ್ಯವಿತ್ತು ಟಿನ್ ಟಿನ್ ಹಾಗೂ ಅವತಾರ್ ಮಾದರಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಹಾಲಿವುಡ್ ನ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮೋಷನ್ ಕಾಪ್ಚರ್ ತಂತ್ರಜ್ಞಾನ ಇಲ್ಲಿ ಬಳಸಲಾಗಿದೆ ಎಂದು ಸೌಂದರ್ಯ ರಜನಿಕಾಂತ್ ಅಶ್ವಿನ್ ಹೇಳಿದ್ದಾರೆ.

ಟೀಸರ್ ನೋಡಿ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೊಚಾಡಿಯನ್ ಚಿತ್ರದ ಟೀಸರ್ ನೋಡಿ

English summary
Kochadaiyaan teaser, which was released by the crew on Monday, September 9, has become a feast for eagerly waiting Rajini fans. The teaser got one million hits on YouTube within 36 hours of its launch.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada