For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಚಿತ್ರಕ್ಕೆ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣು

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಹತ್ವಾಕಾಂಕ್ಷಿ ಚಿತ್ರ 'ಕೋಚಡಯಾನ್'. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದಂತೆ ನಡೆಯುತ್ತಿದೆ. ಚಿತ್ರದ ಬಗ್ಗೆ ಎಲ್ಲೂ ಸುಳಿವು ಬಿಟ್ಟುಕೊಡುತ್ತಿಲ್ಲ. ಚಿತ್ರೀಕರಣ ಯಾವ ಹಂತದಲ್ಲಿದೆ, ಏನಾಗುತ್ತಿದೆ...ಯಾವುದರ ಬಗ್ಗೆಯೂ ಮಾಹಿತಿ ಇಲ್ಲ.

  ತಮ್ಮ ಚಿತ್ರದ ವಿಡಿಯೋ ಕ್ಲಿಪ್ಪಿಂಗ್ ಗಳು ಎಲ್ಲಿ ಅಂತರ್ಜಾಲದಲ್ಲಿ ಸೋರಿಕೆಯಾಗುತ್ತವೋ ಎಂಬ ಅಳುಕು ಚಿತ್ರತಂಡವನ್ನು ಕಾಡುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ತುಂಬಾ ಮುಂಜಾಗ್ರತೆ ವಹಿಸಲಾಗಿದೆ.

  ಇತ್ತೀಚಿನ ದಿನಗಳಲ್ಲಿ ಚಿತ್ರದ ಹಾಡುಗಳು, ಡೈಲಾಗ್ಸ್ ಅಂತರ್ಜಾಲ ಹಾಗೂ ಯೂಟ್ಯೂಬ್ ಸೇರಿ ಸುದ್ದಿ ಮಾಡುತ್ತಿರುವುದು ಗೊತ್ತೇ ಇದೆ. ತಮ್ಮ 'ಕೋಚಡಯಾನ್' ಚಿತ್ರಕ್ಕೆ ಹಾಗಾಗಬಾರದು ಎಂಬ ಉದ್ದೇಶದಿಂದ ಸಿಸಿ ಕ್ಯಾಮೆರಾಗಳ ಹದ್ದಿನಕಣ್ಣಿಡಲಾಗಿದೆ.

  'ಕೋಚಡಯಾನ್' ಚಿತ್ರ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಚಿತ್ರೀಕರಣ, ನಿರ್ಮಾಣನಂತರದ ಕಾರ್ಯಕ್ರಮಗಳು ಲೀಕ್ ಆಗಬಾರದು ಎಂಬ ಉದ್ದೇಶದಿಂದ ನಿರ್ಮಾಪಕರು ಮುಂಜಾಗ್ರತೆ ವಹಿಸಲಾಗಿದೆ.

  ರಜನಿಕಾಂತ್ ಅವರ ಕಿರಿ ಮಗಳು ಸೌಂದರ್ಯಾ ರಜನಿಕಾಂತ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಸ್ಟುಡಿಯೋ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.

  ಚಿತ್ರದಲ್ಲಿರುವ ತಾಂತ್ರಿಕ, ತಾಂತ್ರಿಕೇತರ ಸಿಬ್ಬಂದಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಐಡೆಂಟಿಟಿ ಕಾರ್ಡ್ ಇರುವವರನ್ನು ಮಾತ್ರ ಸ್ಟುಡಿಯೋ ಒಳಗೆ ಬಿಡಲಾಗುತ್ತಿದೆ. ಚಿತ್ರದ ಸನ್ನಿವೇಶಗಳನ್ನು ಪೆನ್ ಡ್ರೈವ್, ಸಿಡಿಗಳಲ್ಲಿ ಡೌನ್ ಲೋಡ್ ಆಗದಂತೆ ಸಕಲ ಜಾಗ್ರತೆಗಳನ್ನೂ ವಹಿಸಲಾಗಿದೆ. ಕೋಚಡಯಾನ್ ಚಿತ್ರ ತ್ರಿಡಿ ಆವೃತ್ತಿಯಲ್ಲಿ ತೆರೆಗೆ ಬರುತ್ತಿದೆ.

  ಚಿತ್ರದಲ್ಲಿ ರಜನಿ ಎಂಟನೇ ಶತಮಾನದ ಪಾಂಡ್ಯರ ರಾಜನಾಗಿ ಕಾಣಿಸಲಿದ್ದಾರೆ. ಕೆಎಸ್ ರವಿಕುಮಾರ್ ಅವರ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಚಿತ್ರಕ್ಕಿದ್ದು ಎ ಆರ್ ರೆಹಮಾನ್ ಸಂಗೀತದಲ್ಲಿ ಚಿತ್ರ ಮೂಡಿಬರಲಿದೆ. ರಜನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಂಡ ಮೇಲೆ ಬಣ್ಣ ಹಚ್ಚುತ್ತಿರುವ ಮೊದಲ ಚಿತ್ರ ಇದಾಗಿದೆ. (ಏಜೆನ್ಸೀಸ್)

  English summary
  Super Star Rajinikanth's much expected film Kochadaiyaan shooting progressed under cctv cameras. The film unit issued a Id cards for each and every cast and crew members. film to be directed by Soundarya R. Ashwin and written by K. S. Ravikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X